ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vadodara Car Accident : ಅಪಘಾತಕ್ಕೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ತನಿಖೆ ಮತ್ತಷ್ಟು ಚುರುಕು

ಗುಜರಾತ್‌ನ ವಡೋದರಾದಲ್ಲಿ 20 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಅತೀ ವೇಗದಲ್ಲಿ ಕಾರು ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಇದೀಗ ಮಹತ್ವದ ಸಾಕ್ಷಿ ದೊರೆತಿದೆ. ಅಪಾಘತಕ್ಕೂ ಮೊದಲಿನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ

ವಡೋದರಾದ ಕಾರು  ಅಪಘಾತಕ್ಕೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಪಾಘತಕ್ಕೂ ಮೊದಲಿನ ಸಿಸಿಟಿವಿ ದೃಶ್ಯ

Profile Vishakha Bhat Mar 17, 2025 10:25 AM

ಗಾಂಧೀನಗರ: ಗುಜರಾತ್‌ನ ವಡೋದರಾದಲ್ಲಿ 20 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಅತೀ ವೇಗದಲ್ಲಿ ಕಾರು ಚಲಾಯಿಸಿ (Vadodara Accident) ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಇದೀಗ ಮಹತ್ವದ ಸಾಕ್ಷಿ ದೊರೆತಿದೆ. ಅಪಾಘತಕ್ಕೂ ಮೊದಲಿನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ರಕ್ಷಿತ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ಅಪಘಾತವಾದ ಸಮಯದಲ್ಲಿ ರಕ್ಷಿತ್‌ ಜೊತೆ ಆತನ ಸ್ನೇಹಿತನೂ ಇದ್ದ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ರಕ್ಷಿತ್ ಚೌರಾಸಿಯಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಟಿ ದೃಶ್ಯಗಳ ಪ್ರಕಾರ, ರಕ್ಷಿತ್ ಮತ್ತು ಅವನ ಒಬ್ಬ ಸ್ನೇಹಿತ ಸ್ಕೂಟರ್‌ನಲ್ಲಿ ಮನೆಗೆ ಬರುವುದನ್ನು ಕಾಣಬಹುದು. ಒಳಗೆ ಹೋಗುವ ಮೊದಲು ಇಬ್ಬರೂ ಸಂಭಾಷಣೆಯಲ್ಲಿ ತೊಡಗಿದ್ದಾರೆ. ರಕ್ಷಿತ್ ಕೈಯಲ್ಲಿ ಬಾಟಲಿಯಿಂದ ಕುಡಿಯುತ್ತಿರುವುದು ಕಂಡುಬರುತ್ತದೆ. ಆದರೆ ಅದು ಯಾವ ಬಾಟಲಿ ಅದರೊಳಗೆ ಏನಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮತ್ತೊಂದು ಕ್ಲಿಪ್‌ನಲ್ಲಿ ಕಪ್ಪು ಬಣ್ಣದ ಸೆಡಾನ್ ಮನೆಯ ಮುಂದೆ ನಿಲ್ಲಿಸಿರುವುದು ಕಂಡು ಬರುತ್ತದೆ. . ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ರಕ್ಷಿತ್ ಸ್ನೇಹಿತ ಪ್ರಾಂಶು ಮನೆಯೊಳಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.



ಈ ಸುದ್ದಿಯನ್ನೂ ಓದಿ: ವಡೋದರಾ ಕಾರು ಅಪಘಾತ: ತಾನು ಕುಡಿದೇ ಇಲ್ಲ, ಎಲ್ಲ ತಪ್ಪು ರಸ್ತೆ ಗುಂಡಿಗಳದ್ದು; ಆರೋಪಿ ವಾದಕ್ಕೆ ಪೊಲೀಸರು ಸುಸ್ತು

ಮೂಲಗಳ ಪ್ರಕಾರ, ಪ್ರಾಂಶು ಆರಂಭದಲ್ಲಿ ಕಾರು ಚಲಾಯಿಸುತ್ತಿದ್ದ. ನಂತರ ರಕ್ಷಿತ್ ಕಾರನ್ನು ಚಲಾಯಿಸಿದ. ಅಪಘಾತವಾದ ಸಮಯದಲ್ಲಿ ರಕ್ಷಿತ್ ಕಾರು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಮಹಿಳೆ ಪ್ರಾಣ ಕಳೆದುಕೊಂಡಿದ್ದರೆ ಇನ್ನೂ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ರಕ್ಷಿತ್‌ ತಾನು ಕುಡಿದಿರಲ್ಲಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ. ಸದ್ಯ ವಿಚಾರಣೆ ನಡೆಸುತ್ತಿರುವ ಪೊಲೀಸರು ಚೌರಾಸಿಯಾ ರಕ್ತದಲ್ಲಿ ಮಾದಕ ದೃವ್ಯದ ಮಾದರಿ ಕಂಡು ಬಂದಿದೆ ಎಂದು ಹೇಳಿದ್ದಾರೆ. ಸಹ ಪ್ರಯಾಣಿಕ ಪ್ರಾಂಶು ಚೌಹಾಣ್ ಮತ್ತು ಮೂರನೇ ಸ್ನೇಹಿತನ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.