Physical Abuse: ಛೇ... ಎಂಥಾ ಹೀನ ಕೃತ್ಯ! ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಗುವಿನ ಮೇಲೆ ಅತ್ಯಾಚಾರ
ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಕುಪಿತಗೊಂಡ ಪ್ರಿಯಕರ ಆಕೆಯ ಒಂದೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ( Physical Abuse) ನಡೆಸಿರುವ ಘಟನೆ ತಮಿಳುನಾಡಿನ (tamilnadu) ನಮಕ್ಕಲ್ ( Namakkal) ಜಿಲ್ಲೆಯಲ್ಲಿ ಏಪ್ರಿಲ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಲ್ಲಿಪಾಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ 33 ವರ್ಷದ ಒಡಿಶಾ ಮೂಲದ ವಲಸೆ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.


ತಮಿಳುನಾಡು: ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಕುಪಿತಗೊಂಡ ಪ್ರಿಯಕರ ಆಕೆಯ ಒಂದೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ( Physical Abuse) ನಡೆಸಿರುವ ಘಟನೆ ತಮಿಳುನಾಡಿನ (Tamilnadu) ನಮಕ್ಕಲ್ (Namakkal) ಜಿಲ್ಲೆಯಲ್ಲಿ ಏಪ್ರಿಲ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಲ್ಲಿಪಾಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ 33 ವರ್ಷದ ಒಡಿಶಾ ಮೂಲದ ವಲಸೆ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಗಂಡನನ್ನು ತೊರೆದು ತನ್ನ ಮೂವರು ಮಕ್ಕಳೊಂದಿಗೆ ಆರೋಪಿಯೊಂದಿಗೆ ಕೆಲವು ತಿಂಗಳುಗಳಿಂದ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪಲ್ಲಿಪಾಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರೋಪಿಯು ಒಂದೂವರೆ ವರ್ಷದ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಒಡಿಶಾದಿಂದ ವಲಸೆ ಕಾರ್ಮಿಕನಾಗಿ ಬಂದಿದ್ದು, ರಾಜ್ಯದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಒಟ್ಟಿಗೆ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣು ಮಗುವಿನೊಂದಿಗೆ ಪಲ್ಲಿಪಾಳಯಂನಲ್ಲಿ ವಾಸವಾಗಿದ್ದಳು. ಇಲ್ಲಿ ಆಕೆ ಆರೋಪಿಯೊಂದಿಗೆ ಸಂಬಂಧ ಬೆಳೆಸಿ ಬಳಿಕ ಒಟ್ಟಿಗೆ ವಾಸಿಸ ತೊಡಗಿದ್ದರು.
ಘಟನೆಯ ದಿನ ಆರೋಪಿಯು ತನ್ನ ಪ್ರಿಯಕರ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಿದ್ದ. ಆದರೆ ತನ್ನ ಹೆಣ್ಣು ಮಗು ಅಳುತ್ತಿದೆ ಎಂದು ಹೇಳಿ ಆಕೆ ಅವನಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದಳು. ಇದಾದ ಬಳಿಕ ಆರೋಪಿಯು ಮಗುವನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ
ಮಗುವಿನ ಮೇಲೆ ಅತ್ಯಾಚಾರ ನಡೆಸಿ ಸುಮಾರು ಒಂದು ಗಂಟೆಯ ಅನಂತರ ಆರೋಪಿಯು ಮಗುವಿನೊಂದಿಗೆ ಮನೆಗೆ ಮರಳಿದ್ದಾನೆ. ಈ ವೇಳೆ ಮಹಿಳೆಯು ಮಗಳ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿ ತಕ್ಷಣ ಅವಳನ್ನು ಈರೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿನ ವೈದ್ಯರು ನಮಕ್ಕಲ್ ಜಿಲ್ಲೆಯ ಮಕ್ಕಳ ರಕ್ಷಣಾ ಕಚೇರಿಗೆ ಈ ಕುರಿತು ಮಾಹಿತಿ ನೀಡಿದರು. ಅವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಮಕ್ಕಲ್ ಎಸ್ಪಿ ಪಲ್ಲಿಪಾಳಯಂ ಪೊಲೀಸರಿಗೆ ಆರೋಪಿ ಮಹಿಳೆಯ ಪ್ರಿಯಕರನನ್ನು ಬಂಧಿಸುವಂತೆ ಆದೇಶಿಸಿದ್ದು, ಪೊಲೀಸರು ಆತನನ್ನು ಬಂಧಿಸಲು ತೆರಳಿದಾಗ ಆರೋಪಿ ಪರಾರಿಯಾಗಲು ಪ್ರಯತ್ನಿಸಿದನು. ಈ ವೇಳೆ ಕಾಲು ಮತ್ತು ತೋಳಿನ ಮೂಳೆ ಮುರಿತಕ್ಕೊಳಗಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ, ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆ ಸಂಬಂಧಿತ ವಿಭಾಗ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಸೇರಿದಂತೆ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ಅನಂತರ ಆತನನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಸೇಲಂ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.