ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ತಹವ್ವುರ್‌ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ? ಇಲ್ಲಿದೆ ಡಿಟೇಲ್ಸ್‌!

ತಹವ್ವುರ್‌ ರಾಣಾ(Tahawwur Rana) ಕೆಲವೇ ಕೆಲವು ಗಂಟೆಗಳಲ್ಲಿ ಭಾರತಕ್ಕೆ ಬಂದಿಳಿಯಲಿದ್ದು, ಬಳಿಕ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗಿದೆ. ತಹವ್ವುರ್‌ ರಾಣಾ ಶರಣಾಗತಿಗೆ ವಾರಂಟ್ ಜಾರಿಯಾಗಿದ್ದು ಬಹು-ಏಜೆನ್ಸಿ ತಂಡವು ಶೀಘ್ರದಲ್ಲೇ ಆತನನ್ನು ಕರೆದುಕೊಂಡು ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ತಹವ್ವುರ್‌ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ?

ನವದೆಹಲಿ: ಮುಂಬೈನ ತಾಜ್‌ ಹೊಟೇಲ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ತಹವ್ವುರ್‌ ರಾಣಾನನ್ನು(Tahawwur Rana) ಕರೆದುಕೊಂಡು ಅಧಿಕಾರಿಗಳ ತಂಡವು ಶೀಘ್ರದಲ್ಲೇ ಭಾರತಕ್ಕೆ ಬರಲಿದೆ. ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದ ರಾಣಾನನ್ನು ಭಾರತಕ್ಕೆ ಒಪ್ಪಿಸದಂತೆ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು, ಈ ಹಿನ್ನೆಲೆಯಲ್ಲಿ ಎಫ್‌ಬಿಐ ಬುಧವಾರವೇ ತಹವ್ವುರ್‌ ರಾಣಾನನ್ನು ಭಾರತದ ಅಧಿಕಾರಿಗಳ ತಂಡಕ್ಕೆ ಒಪ್ಪಿಸಲಿದೆ. ತಹವ್ವುರ್‌ ರಾಣಾ ಶೀಘ್ರದಲ್ಲೇ ಭಾರತಕ್ಕೆ ಬಂದಿಳಿಯಲಿದ್ದು, ಬಳಿಕ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗಿದೆ. ತಹವ್ವೂರ್ ರಾಣಾ ಶರಣಾಗತಿಗೆ ವಾರಂಟ್ ಜಾರಿಯಾಗಿದ್ದು NIA ತಂಡ ಶೀಘ್ರದಲ್ಲೇ ಆತನನ್ನು ಕರೆದುಕೊಂಡು ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ತಹವ್ವುರ್‌ ರಾಣಾನ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನವದೆಹಲಿ ವಾಷಿಂಗ್ಟನ್‌ಗೆ ಭರವಸೆ ನೀಡಿದ ಬಳಿಕ ಆತನನ್ನು ಭಾರತಕ್ಕೆ ಒಪ್ಪಿಸಲು ಅಮೆರಿಕ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆತ ಭಾರತದ ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಕಾನೂನು ನೆರವಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಅಮೆರಿಕ ಸುಪ್ರೀಂ ಕೋರ್ಟ್ ಗೆ ತನ್ನನ್ನು ಭಾರತಕ್ಕೆ ಒಪ್ಪಿಸದಂತೆ ಮನವಿ ಮಾಡಿದ್ದ. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ತಿಹಾರ್ ಜೈಲಿನಲ್ಲಿ ತಹವ್ವುರ್‌ ರಾಣಾಗೆ ಮಾಡಲಾದ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಅಮೆರಿಕದ ಅಧಿಕಾರಿಗಳು ಸ್ಪಷ್ಟನೆ ಕೋರಿರುವುದರಿಂದ ರಾಣಾನನ್ನು ಭಾರತಕ್ಕೆ ಕರೆತಂದ ಬಳಿಕ ತಿಹಾರ್ ಜೈಲಿನಲ್ಲಿ ಇರಿಸುವುದು ಸ್ಪಷ್ಟವಾಗಿದೆ.

ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿಯಾಗಿರುವ ರಾಣಾ, ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದನು. ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಹೆಡ್ಲಿಗೆ ವಿದೇಶಕ್ಕೆ ಹಾರಲು ಬೇಕಾಗಿದ್ದ ಅಗತ್ಯ ದಾಖಲೆಗಳನ್ನು ನೀಡಿ ಆತ ಸಹಕರಿಸಿದ್ದ ಎನ್ನಲಾಗಿದೆ.

ರಾಣಾ ಭಾರತಕ್ಕೆ ಬಂದ ಮೇಲೆ ನಡೆಯುವ ಪ್ರಕ್ರಿಯೆ

ಭಾರತಕ್ಕೆ ಬಂದಿಳಿದ ಬಳಿಕ ತಹವ್ವುರ್‌ ರಾಣಾನನ್ನು ಪಟಿಯಾಲ ಹೌಸ್ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕ ದಾಳಿಯ ಆರೋಪಿಯನ್ನು ಕಸ್ಟಡಿಗೆ ವಿಚಾರಣೆಗೆ ಒಳಪಡಿಸಬಹುದು. ಇದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಧಾನ ಕಚೇರಿ ಮತ್ತು ತಿಹಾರ್ ಜೈಲು ಭದ್ರತೆಯನ್ನು ಬಿಗಿಗೊಳಿಸಿದೆ ಎನ್ನಲಾಗಿದೆ.

ತಹವ್ವುರ್‌ ರಾಣಾ ವಿರುದ್ಧ 2011ರ ಡಿಸೆಂಬರ್ ನಲ್ಲಿ ಎನ್ಐಎ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ತಹವ್ವುರ್‌ ರಾಣಾ, ಡೇವಿಡ್ ಹೆಡ್ಲಿ ಮತ್ತು ಇತರ ಆರು ಜನರು ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ 134 ಸಾಕ್ಷಿಗಳ ಹೇಳಿಕೆಗಳು, 210 ದಾಖಲೆಗಳು ಮತ್ತು 106 ಇಮೇಲ್‌ಗಳು ಸೇರಿವೆ. ಇದರಲ್ಲಿ ಡೇವಿಡ್ ಹೆಡ್ಲಿಯ ಪತ್ನಿಯೊಬ್ಬಳು ಭಯೋತ್ಪಾದಕ ದಾಳಿಗೆ ಅವನನ್ನು ಅಭಿನಂದಿಸಿದ್ದಳು. 26/11 ದಾಳಿಯ ಮೊದಲು ಡೇವಿಡ್ ಹೆಡ್ಲಿ ಮತ್ತು ತಹವ್ವುರ್‌ ರಾಣಾ ಇಬ್ಬರೂ ನಿರಂತರ ಸಂವಹನ ನಡೆಸುತ್ತಿದ್ದರು ಎಂದು ಎನ್ಐಎ ಸಲ್ಲಿಸಿರುವ ಇಮೇಲ್ ದಾಖಲೆಗಳು ತಿಳಿಸಿವೆ.

ಇದನ್ನೂ ಓದಿ: Tahawwur Rana : ತಹವ್ವುರ್ ರಾಣಾ ಗಡಿಪಾರಿನ ಹಿಂದಿರೋ ಮಾಸ್ಟರ್‌ ಮೈಂಡ್‌ ಯಾರು ಗೊತ್ತಾ? ಅವ್ರ ಹೆಸ್ರು ಕೇಳಿದ್ರೆ ಪಾಕ್‌ ಫುಲ್‌ ಗಡ ಗಡ!

ಚಾರ್ಜ್‌ಶೀಟ್‌ನ ಪ್ರಕಾರ, ತಹವ್ವೂರ್ ರಾಣಾ 2005ರಲ್ಲಿ ಲಷ್ಕರ್-ಎ-ತೈಬಾ (LeT) ಮತ್ತು ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ (HuJI) ನ ಕಾರ್ಯಕರ್ತನಾಗಿದ್ದ. ದಾಳಿಗೆ ಪಾಕಿಸ್ತಾನ ಮೂಲದ ಸಂಘಟನಾಕಾರರೊಂದಿಗೆ ನಿರಂತರ ಸಂಪರ್ಕದಿಂದ ಇದ್ದನು. ಡೇವಿಡ್ ಹೆಡ್ಲಿಗೆ ತಹವ್ವುರ್‌ ರಾಣಾ ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯವನ್ನು ಒದಗಿಸಿದ್ದನು.

ತಹವ್ವುರ್‌ ರಾಣಾಗೆ ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ವಿವರವಾಗಿ ತಿಳಿದಿತ್ತು ಎಂದು ಎನ್ಐಎ ಶಂಕಿಸಿದೆ. ತನಿಖಾಧಿಕಾರಿಗಳ ಪ್ರಕಾರ, ದಾಳಿಗೆ ಒಂದು ವಾರ ಮೊದಲು ಅಂದರೆ ನವೆಂಬರ್ 13 ಮತ್ತು 21ರಂದು ತಹವ್ವುರ್‌ ರಾಣಾ ತನ್ನ ಪತ್ನಿ ಸಮ್ರಾಜ್ ರಾಣಾ ಅಖ್ತರ್ ಜೊತೆ ಹಾಪುರ್, ದೆಹಲಿ, ಆಗ್ರಾ, ಕೊಚ್ಚಿ, ಅಹಮದಾಬಾದ್ ಮತ್ತು ಮುಂಬೈಗೆ ಭೇಟಿ ನೀಡಿದ್ದ. ಈ ಭೇಟಿಗಳ ಉದ್ದೇಶವನ್ನು ತಹವ್ವುರ್‌ ರಾಣಾ ಬಹಿರಂಗಪಡಿಸಬೇಕೆಂದು ಎನ್ಐಎ ಉದ್ದೇಶಿಸಿದೆ.