ಹಾಸ್ಯಾಸ್ಪದ

ಹಾಸ್ಯಾಸ್ಪದ

image-6d09b11c-8dec-473d-a26d-822d725afeb8.jpg
Profile Vishwavani News Nov 15, 2021 12:23 PM
image-8499ad44-29e7-4471-90dd-30e2a7d651f2.jpg
ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದು ವಿರೋಧ ನೀತಿಯನ್ನು ಅನುಸರಿಸುತ್ತ ಬಂದಿದೆ. ಅದು ಇಂದಿಗೂ ಪ್ರಸ್ತುತ ಎನ್ನುವುದಕ್ಕೆ ’ಹಿಂದು ಮತ್ತು ಹಿಂದುತ್ವ’ ಬೇರೆ ಬೇರೆ ಎನ್ನುವ ರಾಹುಲ್ ಗಾಂಧಿ ಅಪ್ರಬುಧ್ವ ಹೇಳಿಕೆ ಕಾಂಗ್ರೆಸ್ ಹಿಂದು ವಿರೋಽಯನ್ನು ಪುನಃ ಸಾಬೀತುಪಡಿಸುತ್ತದೆ. ಕಾಂಗ್ರೆಸ್ ಮತ್ತೊಬ್ಬ ನಾಯಕ ‘ಜೈ ಶ್ರೀರಾಮ್ ಎಂದರೆ ರಾಕ್ಷಸರು’ ಎನ್ನುತ್ತಾನೆ. ಕಾಂಗ್ರೆಸ್‌ನ ಹಿಂದು ವಿರೋಧ ನೀತಿ ಹಾಗೂ ಅತಿಯಾದ ಮುಸ್ಲಿಂ ಓಲೈಕೆಯೇ ಅರವತ್ತು ವರ್ಷಗಳ ಕಾಲ ಭಾರತವನ್ನು ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ಕೇವಲ ನಲವತ್ತು ಸ್ಥಾನಕ್ಕೆ ತಲುಪಿದೆ. ಈ ಮೊದಲಾದರೆ ಜನರಿಂದ ಮುಚ್ಚಿಡಲು ಸಾಧ್ಯವಿತ್ತು ಇಂದಿನ ಡಿಜಿಟಲ್ ಯುಗದಲ್ಲಿ ಯಾವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಿಂದುಗಳು ಒಗ್ಗಟ್ಟಿನ ಕಾರಣ ಕಾಂಗ್ರೆಸ್ ನೆಲಕಚ್ಚಿತ್ತಿದೆ, ಆದರೂ ,ಕಾಂಗ್ರೆಸ್ಸಿಗರು ಪಾಠ ಕಲಿಯುತ್ತಿಲ್ಲ ತನ್ನ ಹಳೆ ಚಾಳಿಯೇ ಮುಂದುವರೆಸಿದೆ. ರಾಹುಲ್ ಗಾಂಧಿ ಹಿಂದು ವಿರೋಧ ನೀತಿ ಹೇಳಿಕೆ ಕೊಡುತ್ತಿದ್ದರೆ ಉತ್ತರಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿ ಯಾಗಿರುವ ತಂಗಿ ಪ್ರಿಯಾಂಕ ರಾಬರ್ಟ್ ವಾದ್ರಾ ಉತ್ತರಪ್ರದೇಶದ ರಾಜ್ಯಾದ್ಯಂತ ಹಣೆ ಭಂಡಾರ ಹಚ್ಚಿಕೊಂಡು ಚುನಾವಣೆ ದೃಷ್ಟಿಕೋನದಿಂದ ದೇಗುಲಗಳನ್ನು ಸುತ್ತುತ್ತಿzಳೆ. ಮತದಾರರ ದೃಷ್ಟಿಯಲ್ಲಿ ಅಣ್ಣ -ತಂಗಿ ಇಬ್ಬರ ದ್ವಂದ್ವಗಳು ಹಾಸ್ಯಾಸ್ಪದ ವಾಗಿವೆ. - ಶ್ರೀರಂಗ ಪುರಾಣಿಕ್ ವಿಜಯಪುರ ಸರಕಾರಕ್ಕೆ ಒಂದು ಮನವಿ ಮಾನ್ಯ ಮಂತ್ರಿಗಳೇ, ಪುನೀತ್ ರಾಜಕುಮಾರ್ ೧೮೦೦ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು. ಅದರ ಜತೆ ಅನಾಥಶ್ರಮ, ವೃದ್ಧಾ ಶ್ರಮ, ಗೋಶಾಲೆ ಸೇರಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಹಲೋಕ ತ್ಯಜಿಸಿದ ಬಳಿಕ ಈ ಕಾರ್ಯಗಳನ್ನು ಯಾರು ಮುಂದುವರಿಸುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ತಮಿಳು ನಟ ವಿಶಾಲ್ ಈ ಜವಾಬ್ದಾರಿಯನ್ನು ಹೊತ್ತಿzರೆ. ತುಂಬ ಬೆಸರವಾಗುತ್ತೆ. ಇಂತ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಮಾತನಾಡಿದರು ಕಮ್ಮಿ ಅನ್ನಿಸುತ್ತದೆ. ನನ್ನ ಒಂದು ಸಲಹೆ. ದಯವಿಟ್ಟು ಪ್ರತಿ ಮನೆಯಲ್ಲು ಒಬ್ಬ ಅಪ್ಪು ಹುಟ್ಟಬೇಕು. ಆ ಮನೆಯ ಮಗು ಅಪ್ಪು ಚರಿತ್ರೆ ಓದಬೇಕು. ಹತ್ತನೇ ತರಗತಿ ಕನ್ನಡ ಪುಸ್ತಕದಲ್ಲಿ ಪುನೀತ್‌ರವರ ಜೀವನ ಚರಿತ್ರೆ ಬರಬೇಕು. ಮುಂದಿನ ಪೀಳಿಗೆ ಇವರ ಜೀವನ ಚರಿತ್ರೆ ಓದಿ ಅವರು ಸಹ ಅಪ್ಪು ಥರ ಸಮಾಜ ಸೇವೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಆಗಬೇಕು. ಮಂತ್ರಿಗಳೇ, ಯಾವನೋ ಒಬ್ಬ ಹಿಂದುಗಳ ನಿರ್ದಾಕ್ಷಿಣ್ಯವಾಗಿ ಕೊಳ್ಳುತ್ತಿದ್ದ ಟಿಪ್ಪುಗೆ ಜಯಂತಿ ಮಾಡಲು ಹೋರಟ ರಾಜಕಾರಣಿಗಳೇ ದಯವಿಟ್ಟು ಅಂತ ಕೆಟ್ಟ ಕೆಲಸಕ್ಕೆ ಕೈ ಜೋಡಿಸೋ ಬದಲು ಇಂತ ಒಳ್ಳೆ ಕೆಲಸ ಮಾಡಿ. ಸರಕಾರ ಮಾಡ ಬೇಕಿದ್ದ ಕೆಲಸವನ್ನು ಅಪ್ಪು ತನ್ನ ದುಡಿಮೆಯ  ಪರಿಶ್ರಮದಿಟದ ಮಾಡಿzರೆ. ಈಗಲಾದರೂ ನಿಮ್ಮ ಘನತೆ ಉಳಿಸಿಕೊಳ್ಳಿ. - ಶಂಕರಗೌಡ ಬಿರಾದಾರ ಮುಳಸಾವಳಗಿ ಜಿಮ್‌ಗಳಿಗೆ ಬೇಕಿದೆ ವೈದ್ಯಕೀಯ ಮಾರ್ಗಸೂಚಿ ಅಕಾಲಿಕ ಮರಣಕ್ಕೆ ತುತ್ತಾದ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವಿನ ಬಗ್ಗೆ ಹಲವಾರು ಅನುಮಾನ ಪಡಿಸಿದ್ದಲ್ಲದೆ, ಅವರ ಸಾವಿಗೆ ಜಿಮ್‌ನಲ್ಲಿನ ಅತಿಯಾದ ವ್ಯಾಯಾಮ ಕಾರಣ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ಇಂದಿನ ಯುವ ಸಮುದಾಯ ಜಿಮ್‌ನತ್ತ ಆಕರ್ಷಿತರಾಗುತ್ತಿದ್ದು, ಪ್ರತಿನಿತ್ಯ ಜಿಮ್‌ನಲ್ಲಿ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ, ಫಿಟ್‌ನೆಸ್ ಕಾಪಾಡಿಕೊಳ್ಳುವುದಲ್ಲದೆ, ಎಷ್ಟೇ ವಯಸ್ಸಾದರೂ ಕೂಡ ಇನ್ನೂ ನವ ಯುವಕ/ ಯುವತಿಯರಂತೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ಆದರೆ ಎಲ್ಲದಕ್ಕೂ ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾದ ವ್ಯಾಯಾಮದಿಂದ ಹೃದಯಾಘಾತವಾಗುವ ಸಂಭವವೂ ಉಂಟು ಎಂದಿದ್ದಾರೆಯೇ ಹೊರತು, ಯಾವುದೇ ಸಂಶೋಧನೆಯಿಂದ ಈವರೆಗೂ ಈ ವಿಷಯವನ್ನು ದೃಢಪಡಿಸಿಲ್ಲ. ಒಂದು ಕಾಲದಲ್ಲಿ ನಾನು ಕೂಡ ಜಿಮ್ ಮಾಡಿದವನು, ದಿನಕ್ಕೆ ೨-೩ ಗಂಟೆಗಳ ಕಾಲ ಅತಿ ಹೆಚ್ಚು ಕಸರತ್ತು ನಡೆಸುತ್ತಿದ್ದವನು, ಕರ್ನಾಟಕದಲ್ಲಿಯೇ ಒಬ್ಬ ಉತ್ತಮ ದೇ ದಾರ್ಢ್ಯ ಪಟುವಾಗಬೇಕೆಂದು ಬೆಟ್ಟದಷ್ಟು ಆಸೆ ಪಟ್ಟವನು, ನಾವು ಜಿಮ್ ಮಾಡುವ ಕಾಲದಲ್ಲಿ ಹೃದಯಾ ಘಾತ ಎಂಬಂಥ ವಿಷಯಗಳು ಎಲ್ಲೂ ಇದ್ದಿಲ್ಲ, ಅಂತಹ ಘಟನೆಗಳು ನಡೆದರೂ ಅತಿ ವಿರಳಾತಿ ವಿರಳ. ಆದರೆ ಇತ್ತೀಚಿನ ಕೆಲವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಿಮ್ ಮಾಡುವುದೇ ಅಪಾಯಕಾರಿಯೇನೊ ಎಂದೆನಿಸುತ್ತದೆ. ನಿಜಕ್ಕೂ ಪುನೀತ್ ರಾಜ್ ಕುಮಾರ್ ಅವರ ಘಟನೆಯಿಂದ ನಾನು ಕೂಡ ಸೇರಿದಂತೆ ನನ್ನಂತ ಜಿಮ್ ಮಾಡುವ ಲಕ್ಷಾಂತರ ಯುವಕರು ಮಾನಸಿಕ ವಾಗಿ ತುಂಬಾ ಜರ್ಜರಿತರಾಗಿದ್ದೇವೆ. ಈ ಘಟನೆಯ ಬಳಿಕ ಜಿಮ್‌ಗೆ ಹೋಗುವವರ ಸಂಖ್ಯೆಯೂ ಕೂಡ ಕಡಿಮೆ ಯಾಗಿದೆ ಎಂದು ಕೇಳಿದ್ದೇನೆ. ದಯವಿಟ್ಟು ರಾಜ್ಯ ಸರಕಾರ ತುರ್ತಾಗಿ ಇತ್ತ ಗಮನ ಹರಿಸಿ, ಹಿರಿಯ ವೈದ್ಯರ ಸಮಿತಿ ರಚಿಸಿ, ಜಿಮ್ ನಲ್ಲಿ ವ್ಯಾಯಾಮ ಮಾಡುವವರಿಗೆ ಸರಿಯಾದ ವೈದ್ಯಕೀಯ ಮಾರ್ಗಸೂಚಿಯನ್ನು ನೀಡಬೇಕಾಗಿದೆ. - ಮುರುಗೇಶ.ಡಿ ದಾವಣಗೆರೆ
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?