ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'5 ಎಸೆತಗಳಲ್ಲಿ 5 ವಿಕೆಟ್‌': ಕ್ರಿಕೆಟ್‌ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಕರ್ಟಿಸ್‌ ಕ್ಯಾಂಪರ್‌!

ಐರ್ಲೆಂಡ್‌ನ ಆಲ್‌ರೌಂಡರ್ ಕರ್ಟಿಸ್ ಕ್ಯಾಂಪರ್ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅಂತರ-ಪ್ರಾಂತೀಯ ಟಿ20 ಟ್ರೋಫಿ ಟೂರ್ನಿಯ ಮನ್‌ಸ್ಟರ್ ರೆಡ್ಸ್ ಪರ ನಾರ್ತ್-ವೆಸ್ಟ್ ವಾರಿಯರ್ಸ್ ವಿರುದ್ಧ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

5 ಎಸೆತಗಳಲ್ಲಿ 5 ವಿಕೆಟ್‌ ಕಿತ್ತು ಇತಿಹಾಸ ಬರೆದ ಕರ್ಟಿಸ್‌ ಕ್ಯಾಂಪರ್‌!

5 ಎಸೆತಗಳಲ್ಲಿ 5 ವಿಕೆಟ್‌ ಕಿತ್ತು ದಾಖಲೆ ಬರೆದ ಕರ್ಟಿಸ್‌ ಕ್ಯಾಂಪರ್‌.

Profile Ramesh Kote Jul 10, 2025 10:12 PM

ನವದೆಹಲಿ: ಐರ್ಲೆಂಡ್ ಆಲ್‌ರೌಂಡರ್ ಕರ್ಟಿಸ್ ಕ್ಯಾಂಪರ್(Curtis Campher) ಟಿ20 ಕ್ರಿಕೆಟ್‌ನಲ್ಲಿ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕ್ಯಾಂಪರ್ ಪಾತ್ರರಾಗಿದ್ದಾರೆ. ಐರ್ಲೆಂಡ್‌ನಲ್ಲಿ ಅಂತರ-ಪ್ರಾಂತೀಯ ಟಿ20 ಟ್ರೋಫಿ (Inter-Provincial T20 trophy) ಟೂರ್ನಿಯ ನಾರ್ತ್-ವೆಸ್ಟ್ ವಾರಿಯರ್ಸ್ ವಿರುದ್ಧ ಮನ್‌ಸ್ಟರ್ ರೆಡ್ಸ್ (Munster Reds) ಪರ ಆಡುವಾಗ ಕ್ಯಾಂಪರ್ ಈ ಸಾಧನೆ ಮಾಡಿದ್ದಾರೆ. ಕ್ಯಾಂಪರ್ 2.3 ಓವರ್‌ಗಳಲ್ಲಿ ಕೇವಲ 16 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ಯಾಂಪರ್ ತಮ್ಮ ಎರಡನೇ ಮತ್ತು ಮೂರನೇ ಓವರ್‌ಗಳಲ್ಲಿ ಈ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ ತಂಡ 88 ರನ್‌ಗಳಿಗೆ ಆಲೌಟ್ ಆಯಿತು.

ಐದು ವಿಕೆಟ್‌ಗಳ ಪೈಕಿ ಮೊದಲನೆಯ ವಿಕೆಟ್‌ ಜೇರೆಡ್ ವಿಲ್ಸನ್ ಅವರದ್ದು, 12ನೇ ಓವರ್‌ನ ಐದನೇ ಎಸೆತದಲ್ಲಿ ಕರ್ಟಿಸ್ ಕ್ಯಾಂಪರ್ ಚೆಂಡನ್ನು ಸ್ವಿಂಗ್ ಮಾಡಿದಾಗ ಅದು ಆಫ್ ಸ್ಟಂಪ್‌ಗೆ ಬಡಿದ ಕಾರಣ ಅವರು ಬೌಲ್ಡ್‌ ಆದರು. ಮುಂದಿನ ಎಸೆತದಲ್ಲಿ, ಗ್ರಹಾಂ ಹ್ಯೂಮ್ ಬ್ಯಾಕ್‌ಫೂಟ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಕ್ಯಾಂಪರ್ ತಮ್ಮ ಮುಂದಿನ ಓವರ್‌ನ ಆರಂಭದಲ್ಲಿ ಹ್ಯಾಟ್ರಿಕ್ ಗಳಿಸಿದರು. 14ನೇ ಓವರ್‌ನ ಮೊದಲ ಎಸೆತದಲ್ಲಿ ಆಂಡಿ ಮೆಕ್‌ಬ್ರೈನ್ ಅವರನ್ನು ಔಟ್‌ ಮಾಡಿದ ಬಳಿಕ ಕ್ಯಾಂಪರ್‌ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು.

IND vs ENG: ಗಾಯಾಳು ರಿಷಭ್‌ ಪಂತ್‌ ಲಾರ್ಡ್ಸ್‌ ಟೆಸ್ಟ್‌ಗೆ ಅಲಭ್ಯರಾದರೆ ಮುಂದೇನು?

10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಬಿ ಮಿಲ್ಲರ್ ಮೊದಲ ಎಸೆತದಲ್ಲಿಯೇ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಆಡಲು ಪ್ರಯತ್ನಿಸುವಾಗ ಸ್ಟಂಪ್ಸ್‌ ಹಿಂದೆ ವಿಕೆಟ್‌ ಕೀಪರ್‌ಗೆ ಕ್ಯಾಚ್ ಕೊಟ್ಟರು. ಇದರ ನಂತರ, 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ಜಾಶ್ ವಿಲ್ಸನ್‌ಗೆ ಗೋಲ್ಡನ್‌ ಡಕ್‌ಔಟ್‌ ಆದರು. ಆ ಮೂಲಕ ಕ್ಯಾಂಪರ್‌ ಸತತ ಐದು ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಿತ್ತರು. ಆ ಮೂಲಕ ಎದುರಾಳಿ ನಾರ್ತ್-ವೆಸ್ಟ್ ವಾರಿಯರ್ಸ್ ಕೇವಲ 88 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದರೊಂದಿಗೆ ಮನ್‌ಸ್ಟರ್‌ ರೆಡ್ಸ್‌ ತಂಡ 100 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.



ಆದಾಗ್ಯೂ, ಟಿ20ಐಗಳಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕ್ಯಾಂಪರ್, ಈ ಸಾಧನೆ ಮಾಡಿದ ಮೊದಲಿಗರಲ್ಲ. 2024 ರಲ್ಲಿ ದೇಶಿ ಟಿ20 ಟೂರ್ನಿಯಲ್ಲಿ ಜಿಂಬಾಬ್ವೆ ಅಂಡರ್-19 ಪರ ಈಗಲ್ಸ್ ಮಹಿಳೆಯರ ವಿರುದ್ಧ ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆದ ಜಿಂಬಾಬ್ವೆ ಮಹಿಳಾ ಆಲ್‌ರೌಂಡರ್ ಕೆಲ್ಲಿಸ್ ಎನ್ಡ್ಲೋವು ಅವರಿಗೆ ಈ ಗೌರವ ಸಲ್ಲುತ್ತದೆ.

ಇತಿಹಾಸ ಸೃಷ್ಟಿಸಿದ ಕರ್ಟಿಸ್ ಕ್ಯಾಂಪರ್

ಪುರುಷರ ಟಿ20ಐ ಕ್ರಿಕೆಟ್‌ನ ಯಾವುದೇ ಹಂತದಲ್ಲಿ ಇಷ್ಟು ಎಸೆತಗಳಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್‌ ಎನಿಸಿಕೊಳ್ಳುವ ಮೂಲಕ ಕ್ಯಾಂಪರ್ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ, ದೇಶಿ ಅಥವಾ ಫ್ರಾಂಚೈಸಿ ಲೀಗ್ ಪಂದ್ಯದಲ್ಲಿ ಇದುವರೆಗೂ ಯಾರೂ ಈ ದಾಖಲೆಯನ್ನು ಬರೆದಿಲ್ಲ. ಕರ್ಟಿಸ್‌ ಕ್ಯಾಂಪರ್ 2.2 ಓವರ್‌ಗಳಲ್ಲಿ 16 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.