ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs MI: ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಭುವನೇಶ್ವರ್‌ ಕುಮಾರ್‌!

Bhuvneshwar Kumar breaks Lasith maliga: ಮುಂಬೈ ಇಂಡಿಯನ್ಸ್ ವಿರುದ್ಧ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 48 ರನ್‌ಗಳನ್ನು ನೀಡಿ ಸಾಕಷ್ಟು ದುಬಾರಿಯಾಗಿದ್ದರು. ಇದರ ಹೊರತಾಗಿಯೂ ಅವರು ತಿಲಕ್ ವರ್ಮಾ ಅವರ ದೊಡ್ಡ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ತಿರುಗಿಸಿದರು. ಇದರೊಂದಿಗೆ ಅವರು ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಭುವನೇಶ್ವರ್‌ ಕುಮಾರ್‌!

ಭುವನೇಶ್ವರ್‌ ಕುಮಾರ್‌

Profile Ramesh Kote Apr 8, 2025 12:10 PM

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್‌ 7 ರಂದು ನಡೆದಿದ್ದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಇನ್ನು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಕೂಡ ಪ್ರಮುಖ ಪಾತ್ರವನ್ನು ವಹಿಸಿದರು. ಈ ಪಂದ್ಯದಲ್ಲಿ ಒಂದೇ ಒಂದು ವಿಕೆಟ್‌ ಪಡೆದರೂ ಭುವನೇಶ್ವರ್ ಕುಮಾರ್ ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯ ತುಂಬಾ ರೋಮಾಂಚಕಾರಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸುವಂತಾಗಿದ್ದ ಆರ್‌ಸಿಬಿ 221 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, 222 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಮುಂಬೈ ಇಂಡಿಯನ್ಸ್‌ ಎಡವಿತು. ಆದರೆ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅದ್ಭುತ ಜೊತೆಯಾಟವನ್ನು ಆಡಿದರು. ಕೊನೆಗೂ ಆ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 48 ರನ್ ನೀಡಿ ತಿಲಕ್ ವರ್ಮಾ ಅವರ ಪ್ರಮುಖ ವಿಕೆಟ್ ಪಡೆದರು.

RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!

ತಿಲಕ್ ವರ್ಮಾ ಆರ್‌ಸಿಬಿ ವಿರುದ್ಧ ಅರ್ಧಶತಕ ಗಳಿಸಿದರು. ಅವರು ಔಟಾದ ನಂತರ ಪಂದ್ಯದ ಗತಿಯೇ ಬದಲಾಯಿತು. ತಿಲಕ್ ಅವರನ್ನು ಭುವಿ ಔಟ್ ಮಾಡಿದಾಗ, ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಆಚರಣೆ ನೋಡಲೇಬೇಕಾದ ಸಂಗತಿಯಾಗಿತ್ತು. ಭುವನೇಶ್ವರ್ ಕುಮಾರ್ ಈಗ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 184 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ದಾಖಲೆಯೊಂದಿಗೆ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 183 ವಿಕೆಟ್‌ಗಳನ್ನು ಪಡೆದಿರುವ ಡ್ವೇನ್ ಬ್ರಾವೋ ಅವರನ್ನು ಹಿಂದಿಕ್ಕಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಅವರ ಹೆಸರೂ ಪಟ್ಟಿಯಲ್ಲಿದೆ. ಆದರೆ, ಅವನು ತುಂಬಾ ಹಿಂದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿ

ಭುವನೇಶ್ವರ್ ಕುಮಾರ್: 184 ವಿಕೆಟ್‌ಗಳು

ಡ್ವೇನ್ ಬ್ರಾವೋ: 183 ವಿಕೆಟ್‌ಗಳು

ಲಸಿತ್ ಮಾಲಿಂಗ: 170 ವಿಕೆಟ್‌ಗಳು

ಜಸ್‌ಪ್ರೀತ್ ಬುಮ್ರಾ: 165 ವಿಕೆಟ್‌ಗಳು

ಉಮೇಶ್ ಯಾದವ್: 144 ವಿಕೆಟ್‌ಗಳು

RCB vs MI: ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬೌಲರ್‌ಗಳಿಗೆ ಸಮರ್ಪಿಸಿ ಹೃದಯವಂತಿಕೆ ಮೆರೆದ ರಜತ್‌ ಪಾಟಿದಾರ್‌!

10 ಪಂದ್ಯಗಳಲ್ಲಿ 6 ಸೋಲುಗಳ ನಂತರ ಆರ್‌ಸಿಬಿ ಮುಂಬೈ ವಿರುದ್ಧ ಅವರದೇ ನೆಲದಲ್ಲಿ ಮೊದಲ ಗೆಲುವು ದಾಖಲಿಸಿತು. ರಜತ್ ಪಾಟಿದಾರ್ ತಂಡವು 2025 ರ ಐಪಿಎಲ್‌ನಲ್ಲಿ ತವರಿನಿಂದ ಹೊರಗೆ ತಮ್ಮ ಅಜೇಯ ದಾಖಲೆಯನ್ನು ಮುಂದುವರಿಸಿದೆ. 222 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (17) ಮತ್ತು ರಿಯಾನ್ ರಿಕಲ್ಟನ್ (17) ಪವರ್‌ಪ್ಲೇನಲ್ಲಿ ಔಟಾದರು. ವಿಲ್ ಜ್ಯಾಕ್ಸ್ (12) ಮತ್ತು ಸೂರ್ಯಕುಮಾರ್ ಯಾದವ್ (28) ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹಾರ್ದಿಕ್ ಪಾಂಡ್ಯ (15 ಎಸೆತಗಳಲ್ಲಿ 42) ಬಹುತೇಕ ಪವಾಡವನ್ನೇ ಮಾಡಿದರು. ತಿಲಕ್ ವರ್ಮಾ 29 ಎಸೆತಗಳಲ್ಲಿ 56 ರನ್ ಗಳಿಸುವ ಅದ್ಭುತ ಇನಿಂಗ್ಸ್ ಆಡಿದರು, ಆದರೆ ಇಬ್ಬರೂ ಬೇಗನೆ ಔಟಾದರು. ಕೃಣಾಲ್ ಪಾಂಡ್ಯ ನಾಲ್ಕು ವಿಕೆಟ್ ಪಡೆದರು. ಯಶ್ ದಯಾಳ್ ಮತ್ತು ಜಾಶ್ ಹೇಝಲ್‌ವುಡ್ ತಲಾ ಎರಡೆರಡು ವಿಕೆಟ್ ಪಡೆದರು.