ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs DC: ಅಜೇಯ ಡೆಲ್ಲಿ ಚಾಲೆಂಜ್‌ ಗೆದ್ದೀತೇ ಚೆನ್ನೈ?

ಚೆನ್ನೈ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಗೆದ್ದಿರುವುದು ಕೇಲವ ಒಂದು ಪಂದ್ಯ ಮಾತ್ರ. ಇದರಲ್ಲೊಂದು ಸೋಲು ತವರಿನಲ್ಲೇ ಎದುರಾಗಿತ್ತು. ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಅಷ್ಟು ಪರಿಣಾಮಕಾರಿಯಾಗಿಲ್ಲ. ಸ್ಪಿನ್‌ ಟ್ರ್ಯಾಕ್‌ ಆಗಿದ್ದರೂ ಜಡೇಜಾ ಮತ್ತು ಅಶ್ವಿನ್‌ ಇದುವರೆಗೂ ದೊಡ್ಡ ಇಂಪ್ಯಾಕ್ಟ್‌ ಮಾಡಿಲ್ಲ.

CSK vs DC: ಅಜೇಯ ಡೆಲ್ಲಿ ಚಾಲೆಂಜ್‌ ಗೆದ್ದೀತೇ ಚೆನ್ನೈ?

Profile Abhilash BC Apr 4, 2025 3:45 PM

ಚೆನ್ನೈ: ಸತತ ಗೆಲುವಿನ ಉತ್ಸಾಹದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಮತ್ತು ಜಯದ ಹಳಿಗೆ ಮರಳುವ ಹುಮ್ಮಸಿನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಶನಿವಾರದ ಮೊದಲ ಐಪಿಎಲ್‌(CSK vs DC) ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆಟಕ್ಕಿಂತ ಚೆನ್ನೈನ ಸುಡು ಬಿಸಿಲು ಆಟಗಾರರಿಗೆ ದೊಡ್ಡ ಸವಾಲಾಗಿದೆ. ತವರಿನಲ್ಲೇ ಸೋಲು ಕಂಡಿರುವ ಗಾಯಕ್ವಾಡ್‌ ಪಡೆಗೆ ಈ ಅವಮಾನದಿಂದ ಹೊರಬರಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ.

ಡೆಲ್ಲಿ ಬಲಿಷ್ಠ

ಡೆಲ್ಲಿ ಮೇಲ್ನೋಟಕ್ಕೆ ಚೆನ್ನೈಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ಅನುಭವಿ ಹಾಗೂ ಈ ಹಿಂದೆ ಚೆನ್ನೈ ಪರವೇ ಆಡಿದ್ದ ಫಾಫ್‌ ಡು ಪ್ಲೆಸಿಸ್‌, ಕೆ.ಎಲ್‌ ರಾಹುಲ್‌, ಯುವ ಆಟಗಾರರಾದ ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್‌ ಪೋರಲ್‌, ಜೇಕ್ ಫ್ರೇಸರ್-ಮೆಕ್‌ಗುರ್ಕ್, ವಿಪ್ರಜ್ ನಿಗಮ್ ಮತ್ತು ಇಂಪ್ಯಾಕ್ಟ್‌ ಆಟಗಾರ ಅಶುತೋಷ್ ಶರ್ಮಾ, ಬೌಲಿಂಗ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌, ಕುಲ್‌ದೀಪ್‌ ಯಾದವ್‌, ನಾಯಕ ಅಕ್ಷರ್‌ ಪಟೇಲ್‌, ಮುಕೇಶ್‌ ಕುಮಾರ್‌ ಅವರೆಲ್ಲ ಡೆಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ. ಚೆನ್ನೈಯವರೇ ಆಗಿರುವ ಟಿ. ನಟರಾಜ್‌ ಅವರನ್ನು ಈ ಪಂದ್ಯದಲ್ಲಿ ಆಡಿಸುವ ಸಾಧ್ಯತೆಯೂ ಅಧಿಕವಾಗಿದೆ.



ಚೆನ್ನೈ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಗೆದ್ದಿರುವುದು ಕೇಲವ ಒಂದು ಪಂದ್ಯ ಮಾತ್ರ. ಇದರಲ್ಲೊಂದು ಸೋಲು ತವರಿನಲ್ಲೇ ಎದುರಾಗಿತ್ತು. ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಅಷ್ಟು ಪರಿಣಾಮಕಾರಿಯಾಗಿಲ್ಲ. ಸ್ಪಿನ್‌ ಟ್ರ್ಯಾಕ್‌ ಆಗಿದ್ದರೂ ಜಡೇಜಾ ಮತ್ತು ಅಶ್ವಿನ್‌ ಇದುವರೆಗೂ ದೊಡ್ಡ ಇಂಪ್ಯಾಕ್ಟ್‌ ಮಾಡಿಲ್ಲ. ಸದ್ಯ ನೂರ್‌ ಅಹ್ಮದ್‌ ಮಾತ್ರ ತಂಡದ ಪರ ನಿರೀಕ್ಷಿತ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಉಳಿದಂತೆ ಜೂನಿಯರ್‌ ಮಾಲಿಂಗ್‌ ಖ್ಯಾತಿಯ ಪತಿರಾಣ ಕೂಡ ಪ್ರತಿ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದಿದ್ದಾರೆ.

ಇದನ್ನೂ ಓದಿ CSK vs DC: ಚೆನ್ನೈ-ಡೆಲ್ಲಿ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ, ಸಂಭಾವ್ಯ ತಂಡ ಹೇಗಿದೆ?

ಬ್ಯಾಟಿಂಗ್‌ ಅಷ್ಟಕ್ಕಷ್ಟೇ...

ಬ್ಯಾಟಿಂಗ್‌ ಲೈನ್‌ ಅಪ್‌ ಕೂಡ ಅಷ್ಟು ಬಲಿಷ್ಠ ಮತ್ತು ಸ್ಥಿರವಾಗಿಲ್ಲ. ನಾಯಕ ಋತುರಾಜ್‌ ಮತ್ತು ರಚಿನ್‌ ರವೀಂದ್ರ ಒಂದು ಪಂದ್ಯ ಆಡಿದರೆ ಮತ್ತೆರಡು ಪಂದ್ಯದಲ್ಲಿ ವಿಫಲರಾಗಿತ್ತಿದ್ದಾರೆ. ದೀಪಕ್‌ ಹೂಡ ಅವರಂತೂ ಆಡಿದ ಮೂರು ಪಂದ್ಯಗಳಲ್ಲಿಯೂ ಎರಡಂಕಿ ದಾಟಿಲ್ಲ. ಕಳೆದ ಆವೃತ್ತಿಯಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದ ಶಿವಂ ದುಬೆಯ ಬ್ಯಾಟ್‌ ಈ ಬಾರಿ ಸದ್ದು ಮಾಡುತ್ತಿಲ್ಲ. ಹೀಗಾಗಿ ಚೆನ್ನೈ ಈ ಪಂದ್ಯಕ್ಕೆ ಕೆಲವು ಬದಲಾವಣೆಯೊಂದಿಗೆ ಆಡಲಿಳಿಯುವುದು ಖಚಿತ ಎನ್ನಲಡ್ಡಿಯಿಲ್ಲ.