CSK vs DC: ಚೆನ್ನೈ ತಂಡದ ನಾಯಕನಾಗಿ ಮತ್ತೆ ಧೋನಿ ಆಟ
MS Dhoni: ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗದ ಕಾರಣ ಡೆಲ್ಲಿ ವಿರುದ್ಧ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಗಾಯಕ್ವಾಡ್ ಗೈರಾದರೆ ಮಾಜಿ ನಾಯಕ ಎಂಎಸ್ ಧೋನಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.


ಚೆನ್ನೈ: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಇಂದು ನಡೆಯುವ ಐಪಿಎಲ್(IPL 2025)ನ ಹಗಲು ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್(CSK vs DC) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಖಾಯಂ ನಾಯಕ ಋತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದ ಆಡುವುದು ಅನುಮಾನ ಎನ್ನಲಾಗಿದೆ.
ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗದ ಕಾರಣ ಡೆಲ್ಲಿ ವಿರುದ್ಧ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಗಾಯಕ್ವಾಡ್ ಗೈರಾದರೆ ಮಾಜಿ ನಾಯಕ ಎಂಎಸ್ ಧೋನಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಗ ಗಾಯಕ್ವಾಡ್ ಸ್ಥಾನದಲ್ಲಿ ಯುವ ಆಟಗಾರ ಶೇಕ್ ರಶೀದ್ ಅಥವಾ ವಿಕೆಟ್ ಕೀಪರ್-ಬ್ಯಾಟರ್ ವಂಶ್ ಬೇಡಿ ಪದಾರ್ಪಣೆ ಅವಕಾಶ ಪಡೆಯಬಹುದು. ಶನಿವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಕೂಡ ಡೆಲ್ಲಿ ವಿರುದ್ಧ ವಿಕೆಟ್ ಕೀಪರ್ ತಂಡ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದರು.
🔟:5️⃣1️⃣ PM circa April 2,2011 ⏪
— Chennai Super Kings (@ChennaiIPL) April 2, 2025
We’re still here after 1️⃣4️⃣ Years! 🇮🇳#OnThisDay #WorldCup2011 🦁💛 pic.twitter.com/SFmVd9k7Tx
ಇದನ್ನೂ ಓದಿ IPL 2025 Points Table: 6ನೇ ಸ್ಥಾನಕ್ಕೆ ಜಿಗಿದ ಲಕ್ನೋ ಸೂಪರ್ ಜೈಂಟ್ಸ್
ಚೆನ್ನೈ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಗೆದ್ದಿರುವುದು ಕೇಲವ ಒಂದು ಪಂದ್ಯ ಮಾತ್ರ. ಇದರಲ್ಲೊಂದು ಸೋಲು ತವರಿನಲ್ಲೇ ಎದುರಾಗಿತ್ತು. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಷ್ಟು ಪರಿಣಾಮಕಾರಿಯಾಗಿಲ್ಲ. ಸ್ಪಿನ್ ಟ್ರ್ಯಾಕ್ ಆಗಿದ್ದರೂ ಜಡೇಜಾ ಮತ್ತು ಅಶ್ವಿನ್ ಇದುವರೆಗೂ ದೊಡ್ಡ ಇಂಪ್ಯಾಕ್ಟ್ ಮಾಡಿಲ್ಲ. ಸದ್ಯ ನೂರ್ ಅಹ್ಮದ್ ಮಾತ್ರ ತಂಡದ ಪರ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಉಳಿದಂತೆ ಜೂನಿಯರ್ ಮಾಲಿಂಗ್ ಖ್ಯಾತಿಯ ಪತಿರಾಣ ಕೂಡ ಪ್ರತಿ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದಿದ್ದಾರೆ
ಡೆಲ್ಲಿ ಮೇಲ್ನೋಟಕ್ಕೆ ಚೆನ್ನೈಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ಅನುಭವಿ ಹಾಗೂ ಈ ಹಿಂದೆ ಚೆನ್ನೈ ಪರವೇ ಆಡಿದ್ದ ಫಾಫ್ ಡು ಪ್ಲೆಸಿಸ್, ಕೆ.ಎಲ್ ರಾಹುಲ್, ಯುವ ಆಟಗಾರರಾದ ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೋರಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ವಿಪ್ರಜ್ ನಿಗಮ್ ಮತ್ತು ಇಂಪ್ಯಾಕ್ಟ್ ಆಟಗಾರ ಅಶುತೋಷ್ ಶರ್ಮಾ, ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್, ಕುಲ್‌ದೀಪ್ ಯಾದವ್, ನಾಯಕ ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ಅವರೆಲ್ಲ ಡೆಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ.