ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

GGTW vs RCBW: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆರ್‌ಸಿಬಿ-ಗುಜರಾತ್‌ ಪಂದ್ಯ

GGTW vs RCBW: ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್‌ ಸಿಡಿಯಿತು. ಇದು ಟೂರ್ನಿಯ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ದಾಖಲಾದ 2ನೇ ಅತ್ಯಧಿಕ ಸಿಕ್ಸರ್‌ ಪಂದ್ಯವಾಗಿದೆ. ದಾಖಲೆ ಮುಂಬೈ ಮತ್ತು ಡೆಲ್ಲಿ ಪಂದ್ಯದ ಹೆಸರಿನಲ್ಲಿದೆ. 2024 ರ ಆವೃತ್ತಿಯಲ್ಲಿ ಇತ್ತಂಡಗಳ ನಡುವಣ ಪಂದ್ಯದಲ್ಲಿ 19 ಸಿಕ್ಸರ್‌ ಸಿಡಿದಿತ್ತು.

ಹಲವು ದಾಖಲೆಗಳಿಗೆ ಸಾಕ್ಷಿಯಾದ ಆರ್‌ಸಿಬಿ-ಗುಜರಾತ್‌ ಪಂದ್ಯ

Profile Abhilash BC Feb 15, 2025 9:06 AM

ವಡೋದರ: ಶುಕ್ರವಾರ ನಡೆದ ವುಮೆನ್ಸ್​ ಪ್ರೀಮಿಯರ್​ ಲೀಗ್​ (WPL 2025​) ಮೂರನೇ ಆವೃತ್ತಿಯ ಉದ್ಘಾಟನ ಪಂದ್ಯಲ್ಲಿ ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ, ಗುಜರಾತ್​ ಜೈಂಟ್ಸ್​(GGTW vs RCBW) ವಿರುದ್ಧ 6 ವಿಕೆಟ್​ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವ ಜತೆಗೆ ಹಲವು ದಾಖಲೆಯನ್ನು ನಿರ್ಮಿಸಿದೆ. ಗುಜರಾತ್‌ ಬಾರಿಸಿದ 201 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ಮೂಲಕ 202 ರನ್‌ ಬಾರಿಸಿ ಟೂರ್ನಿಯಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು.

ಆರ್‌ಸಿಬಿಗೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್‌ ತಂಡದ ಹೆಸರಿನಲ್ಲಿತ್ತು. ಕಳೆದ ವರ್ಷ ನಡೆದಿದ್ದ ಟೂರ್ನಿಯಲ್ಲಿ ಮುಂಬೈ ತಂಡ ಗುಜರಾತ್‌ ವಿರುದ್ಧವೇ 191 ರನ್‌ ಬಾರಿಸಿ ಈ ದಾಖಲೆ ನಿರ್ಮಿಸಿತ್ತು. ಇದೀಗ ಈ ದಾಖಲೆ ಆರ್‌ಸಿಬಿ ಪಾಲಾಗಿದೆ. ಅಚ್ಚರಿ ಎಂದರೆ ಎರಡು ಬಾರಿಯೂ ಎದುರಾಳಿಯಾಗಿದ್ದ ತಂಡ ಗುಜರಾತ್‌.

ಈ ಪಂದ್ಯ ಅತ್ಯಧಿಕ ರನ್‌ ದಾಖಲಾದ ಪಂದ್ಯ ಎನಿಸಿಕೊಂಡಿತು. ಇತ್ತಂಡಗಳು ಸೇರಿ 403 ರನ್‌ ಕಲೆ ಹಾಕಿತು. ಇದು ಕೂಡ ಟೂರ್ನಿಯ ದಾಖಲೆಯಾಗಿದೆ. ಇದಕ್ಕೂ ಮುನ್ನ 2023ರ ಉದ್ಘಾಟನ ಆವೃತ್ತಿಯ, ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ತಂಡಗಳೇ 391 ರನ್‌ ಬಾರಿಸಿ ದಾಖಲೆ ನಿರ್ಮಿಸಿತ್ತು. ಇದೀಗ ಉಭಯ ತಂಡಗಳೇ ತಮ್ಮ ದಾಖಲೆಯನ್ನು ತಿದ್ದಿ ಬರೆದಿದೆ.

ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್‌ ಸಿಡಿಯಿತು. ಇದು ಟೂರ್ನಿಯ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ದಾಖಲಾದ 2ನೇ ಅತ್ಯಧಿಕ ಸಿಕ್ಸರ್‌ ಪಂದ್ಯವಾಗಿದೆ. ದಾಖಲೆ ಮುಂಬೈ ಮತ್ತು ಡೆಲ್ಲಿ ಪಂದ್ಯದ ಹೆಸರಿನಲ್ಲಿದೆ. 2024 ರ ಆವೃತ್ತಿಯಲ್ಲಿ ಇತ್ತಂಡಗಳ ನಡುವಣ ಪಂದ್ಯದಲ್ಲಿ 19 ಸಿಕ್ಸರ್‌ ಸಿಡಿದಿತ್ತು.



ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ಜೈಂಟ್ಸ್​, ಬೆಥ್​ ಮೂನಿ (56 ರನ್​, 42 ಎಸೆತ, 8 ಬೌಂಡರಿ), ನಾಯಕಿ ಆಶ್ಲೇ ಗಾರ್ಡ್​ನರ್​ (79* ರನ್​, 37 ಎಸೆತ, 3 ಬೌಂಡರಿ, 8 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 201 ರನ್​ ಪೇರಿಸಿತು. ಪ್ರತಿಯಾಗಿ ಆರ್​ಸಿಬಿ 18.3 ಓವರ್​ಗಳಲ್ಲಿ 4 ವಿಕೆಟ್​ಗೆ 202 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ WPL 2025: 8 ಸಿಕ್ಸರ್‌ ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದ ಆಶ್ಲೀ ಗಾರ್ಡ್ನರ್!

ಆರ್‌ಸಿಬಿ ಪರ ಎಲ್ಲಿಸ್​ ಪೆರ್ರಿ (57 ರನ್​, 34 ಎಸೆತ, 6 ಬೌಂಡರಿ, 2 ಸಿಕ್ಸರ್​) ಮತ್ತು ರಿಚಾ ಘೋಷ್​ (64*ರನ್​, 27 ಎಸೆತ, 7 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಅರ್ಧಶತಕ ಬಾರಿಸಿ ಮಿಂಚಿದರು. ರಿಚಾ ಘೋಷ್​ ಮತ್ತು ಕನಿಕಾ ಅಹುಜಾ (30*ರನ್​, 13 ಎಸೆತ, 4 ಬೌಂಡರಿ) ಮುರಿಯದ 5ನೇ ವಿಕೆಟ್​ಗೆ 37 ಎಸೆತಗಳಲ್ಲೇ 93 ರನ್​ ಕಸಿಯುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.