IND vs ENG 3rd Test: ಕರುಣ್‌ಗೆ ಮತ್ತೊಂದು ಅವಕಾಶ; ಪ್ರಸಿದ್ಧ್ ಔಟ್ ಸಾಧ್ಯತೆ
ಭಾರತ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಈವರೆಗೂ 19 ಟೆಸ್ಟ್ ಪಂದ್ಯಗಳನ್ನಾಡಿದ್ದು, 3ರಲ್ಲಿ ಜಯಗಳಿಸಿದೆ. 12 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಉಳಿದ 4 ಪಂದ್ಯಗಳು ಡ್ರಾಗೊಂಡಿವೆ. ಆದರೆ ಇಲ್ಲಿ ಕೊನೆ 3 ಮುಖಾಮುಖಿಯಲ್ಲಿ ಭಾರತ 2ರಲ್ಲಿ ಜಯಗಳಿಸಿದೆ. ಕೊನೆಯಬಾರಿ 2021ರ ಪ್ರವಾಸದಲ್ಲಿ ಭಾರತ ಜಯಭೇರಿ ಬಾರಿಸಿತ್ತು.


ಲಂಡನ್: ಆರಂಭಿಕ 2 ಪಂದ್ಯಗಳಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದ ಶುಭ್‌ಮನ್ ಗಿಲ್ ಸಾರಥ್ಯದ ಯಂಗ್ ಟೀಮ್ ಇಂಡಿಯಾ ಇಂದಿನಿಂದ(ಗುರುವಾರ) ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಲಾರ್ಡ್ಸ್(IND vs ENG 3rd Test) ಅಂಗಳದ ಹಸಿರು ಪಿಚ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ. ಹುಲ್ಲಿನಿಂದ ಕೂಡಿರುವ ಪಿಚ್‌ನಲ್ಲಿ(Lord's Pitch Report) ಬೌನ್ಸರ್ ಹಾಗೂ ವೇಗದ ಎಸೆತಗಳನ್ನು ಸಮರ್ಥವಾಗಿ ಎದುರಿಸುವ ತಂಡ ಲಾರ್ಡ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಬಹುದು. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುದು ನಿಶ್ಚಿತ.
ಪ್ರಸಿದ್ಧ್‌ಗೆ ಕೊಕ್ ಸಾಧ್ಯತೆ
ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಆಡಲಿದ್ದು, ಅವರಿಗೆ ಪ್ರಸಿದ್ಧ್ ಕೃಷ್ಣ ಜಾಗ ಬಿಟ್ಟುಕೊಡಬೇಕಾಗಬಹುದು. ಒಂದೊಮ್ಮೆ ಸಿರಾಜ್‌ಗೆ ವಿಶ್ರಾಂತಿ ನೀಡಿದರೆ ಆಗ ಪ್ರಸಿದ್ಧ್ ತಂಡದಲ್ಲಿ ಉಳಿಯಬಹುದು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. 2 ಪಂದ್ಯದಲ್ಲೂ ವಿಫಲರಾಗಿರುವ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಆಲ್ರೌಂಡರ್ ನಿತೀಶ್ ಕುಮಾರ್ ಕೂಡಾ ತಂಡದಲ್ಲಿ ಮುಂದುವರಿಯಬಹುದು.
ದೇಶೀಯ ಕ್ರಿಕೆಟ್‌ನಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದ ಕರುಣ್ ನಾಯರ್‌ಗೆ 8 ವರ್ಷದ ಬಳಿಕ ಮತ್ತೊಂದು ಅವಕಾಶ ನೀಡಲಾಗಿತ್ತು. ಆದರೆ ಅವರು ತಮ್ಮ ಆಯ್ಕೆಗೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿಯೂ ಕನಿಷ್ಠ ಒಂದು ಅರ್ಧಶತಕ ಕೂಡ ಬಾರಿಸಿಲ್ಲ. ಮೂರನೇ ಪಂದ್ಯದಲ್ಲಿಯೂ ಅವರು ನಿರೀಕ್ಷಿತ ಪ್ರದರ್ಶನ ತೋರದೇ ಹೋದಲ್ಲಿ ಅವರಿಗೆ ಮತ್ತೆ ಭಾರತ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಸಾಧ್ಯ. ಏಕೆಂದರೆ ಯುವ ಬ್ಯಾಟರ್‌ಗಳು ಸಿಕ್ಕ ಅವಕಾಶದಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಲೇ ಬೇಕಾದ ಅನಿವಾರ್ಯತೆ ಇದೆ.
ನಾಲ್ಕನೇ ಗೆಲುವಿನ ಖಾತರ
ಭಾರತ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಈವರೆಗೂ 19 ಟೆಸ್ಟ್ ಪಂದ್ಯಗಳನ್ನಾಡಿದ್ದು, 3ರಲ್ಲಿ ಜಯಗಳಿಸಿದೆ. 12 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಉಳಿದ 4 ಪಂದ್ಯಗಳು ಡ್ರಾಗೊಂಡಿವೆ. ಆದರೆ ಇಲ್ಲಿ ಕೊನೆ 3 ಮುಖಾಮುಖಿಯಲ್ಲಿ ಭಾರತ 2ರಲ್ಲಿ ಜಯಗಳಿಸಿದೆ. ಕೊನೆಯಬಾರಿ 2021ರ ಪ್ರವಾಸದಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಕನ್ನಡಿಗ ರಾಹುಲ್ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಬಾರಿಯೂ ಅವರು ತಂಡದಲ್ಲಿದ್ದಾರೆ.
ಇದನ್ನೂ ಓದಿ IND vs ENG: ತಮ್ಮ ಸ್ಟಂಪ್ ಮೈಕ್ ಸಂಭಾಷಣೆಯ ಹಿಂದಿನ ರಹಸ್ಯ ಬಯಲು ಮಾಡಿದ ರಿಷಭ್ ಪಂತ್!
ಭಾರತ ಸಂಭವನೀಯ ಆಡುವ ಬಳಗ
ೈಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಕರುಣ್ ನಾಯರ್ , ಶುಭಮನ್ ಗಿಲ್(ನಾಯಕ), ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ರೆಡಿ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್.
ಪಂದ್ಯ ಆರಂಭ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.