Joanna Child: 64ನೇ ವಯಸ್ಸಿನಲ್ಲಿ ಅಂತಾರಾಷ್ಟ್ರಿಯ ಟಿ20ಗೆ ಪದಾರ್ಪಣೆ ಮಾಡಿದ ಜೊಹಾನಾ
ಬಾರೀ ನಿರೀಕ್ಷೆಯೊಂದಿಗೆ ಚೊಚ್ಚಲ ಟಿ20 ಪಂದ್ಯ ಆಡಿದ ಜೊಹಾನ ಚೈಡ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೇವಲ ಎರಡು ರನ್‌ಗೆ ಔಟ್ ಆದರು. ಈ ಪಂದ್ಯದಲ್ಲಿ ಪೋರ್ಚುಗಲ್ ತಂಡ 110 ರನ್ ಬಾರಿಸಿದರೂ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ಸು ಸಾಧಿಸಿತು.


ನವದೆಹಲಿ: ಪೋರ್ಚುಗಲ್ ಜೊಹಾನ ಚೈಡ್ ತಮ್ಮ 64ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್(Oldest debutants in T20Is)ಗೆ ಪದಾರ್ಪಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸ್ವರೂಪದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ವಿಶ್ವದ ಎರಡನೇ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾರ್ವೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜೊಹಾನ ಚೈಡ್ ಈ ಸಾಧನೆಗೈದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತಿ ಹಿರಿಯ ಕ್ರಿಕೆಟ್ ಎನ್ನುವ ದಾಖಲೆ ಗಿಬ್ರಾಲ್ಟರ್‌ನ ಸ್ಯಾಲಿ ಬಾರ್ಟನ್ ಹೆಸರಿನಲ್ಲಿದೆ. ಅವರು 66 ವರ್ಷದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು.
ಬಾರೀ ನಿರೀಕ್ಷೆಯೊಂದಿಗೆ ಚೊಚ್ಚಲ ಟಿ20 ಪಂದ್ಯ ಆಡಿದ ಜೊಹಾನ ಚೈಡ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೇವಲ ಎರಡು ರನ್‌ಗೆ ಔಟ್ ಆದರು. ಈ ಪಂದ್ಯದಲ್ಲಿ ಪೋರ್ಚುಗಲ್ ತಂಡ 110 ರನ್ ಬಾರಿಸಿದರೂ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ಸು ಸಾಧಿಸಿತು.
ಹಿರಿಯ ವಯಸ್ಸಿನಲ್ಲಿ ಟಿ20ಗೆ ಪದಾರ್ಪಣೆ ಮಾಡಿದವರು
ಸ್ಯಾಲಿ ಬಾರ್ಟನ್ - 66 ವರ್ಷ
ಜೊಹಾನ ಚೈಡ್-64 ವರ್ಷ
ಆಂಡ್ರ್ಯೂ ಬ್ರೌನ್ಲೀ - 62 ವರ್ಷ
ಮ್ಯಾಲಿ ಮೋರ್- 62 ವರ್ಷ
Portugal's 64-year-old Joanna Child becomes the second-oldest debutant in international cricket history.
— All Cricket Records (@Cric_records45) April 11, 2025
Oldest International debutants
(Men & Women)
66y 334d – Sally Barton v 🇪🇪, 2024 ♀️
64y 181d – Joanna Child v 🇳🇴, 2025* ♀️
62y 145d – A Brownlee v 🇨🇷, 2025 ♂️
62y 25d –… pic.twitter.com/CrkIx7rSc9
ಐಪಿಎಲ್ ಆಡಿದ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕ್!
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಿಂದ ಹಿಂದೆ ಸರಿದು ಐಪಿಎಲ್ ಆಡಲು ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್(Corbin Bosch) ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಒಂದು ವರ್ಷದ ನಿಷೇಧ ಹೇರಿದೆ. ಕಾರ್ಬಿನ್ ಬಾಷ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದಾರೆ. ಪಿಎಸ್‌ನಲ್ಲಿ ಅವರು ಪೇಶಾವರ ಝಾಲ್ಮಿ ತಂಡದ ಆಟಗಾರನಾಗಿದ್ದರು. ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದ ಲಿಜಾಡ್ ವಿಲಿಯಮ್ಸ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್(Mumbai Indians) ತಂಡ ಸೇರಿದ್ದರು.