IPL 2025: ಆರ್‌ಸಿಬಿ ಪರ ವಿಶೇಷ ದಾಖಲೆ ಬರೆದ ಪಾಟೀದಾರ್
RCB vs CSK: ಪಾಟೀದಾರ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 32 ಎಸೆತಗಳಿಂದ 51 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಿತ್ತು.


ಚೆನ್ನೈ: ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ ಆರ್‌ಸಿಬಿ(RCB vs CSK) ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 50 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್(Rajat Patidar) ದಾಖಲೆಯೊಂದನ್ನು ಬರೆದಿದ್ದಾರೆ. ರಾಹುಲ್ ದ್ರಾವಿಡ್ ಬಳಿಕ ಚೆನ್ನೈ ಅಂಗಳದಲ್ಲಿ ಪಂದ್ಯ ಗೆದ್ದ ಆರ್‌ಸಿಬಿಯ ಎರಡನೇ ನಾಯಕ ಎನಿಸಿಕೊಂಡಿದ್ದಾರೆ.
ಹೌದು, ಆರ್‌ಸಿಬಿ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಇದಕ್ಕೂ ಮುನ್ನ ಗೆದ್ದಿದ್ದು 2008ರಲ್ಲಿ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಆರ್‌ಸಿಬಿ 14 ರನ್ ಅಂತರದ ಗೆಲುವು ಸಾಧಿಸಿತ್ತು. ಇದಾದ ಬಳಿಕ ಆರ್‌ಸಿಬಿ ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರ ನಾಯಕತ್ವದಲ್ಲಿ ಸಿಎಸ್‌ಕೆ ವಿರುದ್ಧ ಚೆಪಾಕ್‌ನಲ್ಲಿ ಸತತ ಎಂಟು ಸೋಲುಗಳನ್ನು ಅನುಭವಿಸಿತ್ತು. ಇದರಲ್ಲಿ 2011 ರ ಫೈನಲ್ ಸೋಲು ಕೂಡ ಸೇರಿದೆ. ಇದೀಗ ನೂತನ ನಾಯಕ ಪಾಟೀದಾರ್ 17 ವರ್ಷಗಳ ಆರ್‌ಸಿಬಿಯ ಸೋಲಿನ ಕೊಂಡಿಯನ್ನು ಕಳಚಿದ್ದಾರೆ.
ಇದನ್ನೂ ಓದಿ IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ಇದು ಮಾತ್ರವಲ್ಲದೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ( 50 ರನ್‌ಗಳ ಸೋಲು ) ರನ್ ಆಧಾರದಲ್ಲಿ ಅತಿದೊಡ್ಡ ಸೋಲುಣಿಸಿದ ಹೆಗ್ಗಳಿಕೆ ಕೂಡ ಪಾಟೀದಾರ್ ಪಾಲಾಗಿದೆ. 2019ರಲ್ಲಿ ಮುಂಬೈ ವಿರುದ್ಧ ಚೆನ್ನೈ 46 ರನ್‌ಗಳಿಂದ ಸೋತಿದ್ದು ಈ ಹಿಂದಿನ ದಾಖಲೆ ಎನಿಸಿತ್ತು.
Only his second game as our captain and the clarity is evident 🤌#PlayBold #ನಮ್ಮRCB #IPL2025 #CSKvRCB pic.twitter.com/61B4i1RR65
— Royal Challengers Bengaluru (@RCBTweets) March 28, 2025
ಪಾಟೀದಾರ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 32 ಎಸೆತಗಳಿಂದ 51 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಿತ್ತು.