ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಅಪರೂಪದ ದಾಖಲೆ ಬರೆದ ವಿರಾಟ್‌ ಕೊಹ್ಲಿ!

Virat Kohli Scored Highest Run against CSK: ಚೆನ್ನೈ ಸೂಪರ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ಸಿಎಸ್‌ಕೆ ಎದುರು ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಕಿಂಗ್‌ ಕೊಹ್ಲಿ ಪಾತ್ರರಾಗಿದ್ದಾರೆ.

IPL 2025: ಸಿಎಸ್‌ಕೆ ಎದುರು ವಿಶೇಷ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಸಿಎಸ್‌ಕೆ ಎದುರು ಅತಿ ಹೆಚ್ಚು ಐಪಿಎಲ್‌ ರನ್‌ ಗಳಿಸಿದ ವಿರಾಟ್‌ ಕೊಹ್ಲಿ.

Profile Ramesh Kote Mar 29, 2025 12:33 AM

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇತಿಹಾಸದಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ದಾಖಲೆಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಬರೆದಿದ್ದಾರೆ. ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ 2025ರ ಐಪಿಎಲ್‌ ಟೂರ್ನಿಯ ಎಂಟನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಮಾಜಿ ಆರಂಬಿಕ ಶಿಖರ್‌ ಧವನ್‌ ಅವರನ್ನು ವಿರಾಟ್‌ ಕೊಹ್ಲಿ ಹಿಂದಿಕ್ಕಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಣ ಪಂದ್ಯಕ್ಕೂ ಮುನ್ನ ಈ ದಾಖಲೆ ಬರೆಯಲು ವಿರಾಟ್‌ ಕೊಹ್ಲಿಗೆ ಕೇವಲ ನಾಲ್ಕು ರನ್‌ ಅಗತ್ಯವಿತ್ತು. ಅದರಂತೆ ಶುಕ್ರವಾರದ ಪಂದ್ಯದಲ್ಲಿ ಕೇವಲ ನಾಲ್ಕು ರನ್‌ ಗಳಿಸುತ್ತಿದ್ದಂತೆ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಅವರನ್ನು ಹಿಂದಿಕ್ಕಿದರು. ಟೀಮ್‌ ಇಂಡಿಯಾ ಮಾಜಿ ಆರಂಭಿಕ ಶಿಖರ್‌ ಧವನ್‌, ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಸಿಎಸ್‌ಕೆ ವಿರುದ್ದ 1057 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಚೆನ್ನೈ ವಿರುದ್ಧ ಐಪಿಎಲ್‌ ಟೂರ್ನಿಯಲ್ಲಿ 1085 ರನ್‌ಗಳನ್ನು ಗಳಿಸಿದ್ದಾರೆ.

RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!

ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಸಿಎಸ್‌ಕೆ ಎದುರು ಕಿಂಗ್‌ ಕೊಹ್ಲಿ ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ, 10 ಎಸೆತಗಳನ್ನು ಎದುರಿಸಿದ ಬಳಿಕ ಶಿಖರ್‌ ಧವನ್‌ ದಾಖಲೆಯನ್ನು ಮುರಿದರು. ಆ ಮೂಲಕ ಸಿಎಸ್‌ಕೆ ಎದುರು ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌,ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರು.

ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅವರ ಜತೆ ರೋಹಿತ್‌ ಶರ್ಮಾ ಕೂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಸಿಎಸ್‌ಕೆ ವಿರುದ್ಧ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 896 ರನ್‌ಗಳನ್ನು ಗಳಿಸಿದ್ದಾರೆ. 696 ರನ್‌ಗಳ ಮೂಲಕ ಡೇವಿಡ್‌ ವಾರ್ನರ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. 583 ರನ್‌ಗಳ ಮೂಲಕ ವೆಸ್ಟ್‌ ಇಂಡೀಸ್‌ ದೈತ್ಯ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಕೆಎಲ್‌ ರಾಹುಲ್‌ ಅವರು 553 ರನ್‌ಗಳ ಮೂಲಕ ಆರನೇ ಸ್ಥಾನದಲ್ಲಿದ್ದಾರೆ.

RCB vs CSK: ಮಾರಕ ಬೌನ್ಸರ್‌ ಎಸೆದ ಮತೀಶ್‌ ಪತಿರಣ ವಿರುದ್ದ ಸೇಡು ತೀರಿಸಿಕೊಂಡ ವಿರಾಟ್‌ ಕೊಹ್ಲಿ!

ಸಿಎಸ್‌ಕೆ ಎದುರು ಆರ್‌ಸಿಬಿಗೆ 50 ರನ್‌

ಇನ್ನು ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 30 ಎಸೆತಗಳಲ್ಲಿ 31 ರನ್‌ ಗಳಿಸಿ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದರು. ಆದರೆ, ನೂರ್‌ ಅಹ್ಮದ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದರು. ಆದರೂ ರಜತ್‌ ಪಾಟಿದಾರ್‌ (51 ರನ್‌) ಸೇರಿದಂತೆ ಇತರೆ ಬ್ಯಾಟ್ಸ್‌ಮನ್‌ಗಳ ಆಟದ ಬಲದಿಂದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 196 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಸಿಎಸ್‌ಕೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 146 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಬೆಂಗಳೂರು ತಂಡ 50 ರನ್‌ಗಳಿಂದ ಗೆಲುವು ಪಡೆಯಿತು.