Suryakumar Yadav: ಗೋವಾ ತಂಡ ಸೇರುವ ಸುದ್ದಿಯನ್ನು ತಳ್ಳಿಹಾಕಿದ ಸೂರ್ಯಕುಮಾರ್
ಜೈಸ್ವಾಲ್ ಮುಂಬೈ ತಂಡ ತೊರೆಯುವ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬಯಿ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧಿಕಾರಿಯೊಬ್ಬರು, ಹೌದು. ಜೈಸ್ವಾಲ್ ನಿರ್ಧಾರ ಅಚ್ಚರಿ ತಂದಿದೆ. ವೈಯಕ್ತಿಕ ಕಾರಣ ನೀಡಿ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕೇಳಿದ್ದಾರೆ. ಅವರ ಮನವಿಯನ್ನು ನಾವು ಸ್ವೀಕರಿಸಿದ್ದೇವೆ' ಎಂದಿದ್ದಾರೆ.


ಮುಂಬಯಿ: ಅಚ್ಚರಿಯ ಬೆಳವಣಿಗೆ ಎಂಬಂತೆ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ದೇಶೀಯ ಕ್ರಿಕೆಟ್‌ನಲ್ಲಿ ಮುಂಬಯಿ ತಂಡವನ್ನು(Mumbai Team) ತೊರೆಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಕೂಡ ಜೈಸ್ವಾಲ್ ಜತೆ ಗೋವಾ(Goa Team) ತಂಡ ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಸೂರ್ಯಕುಮಾರ್ ಯಾದವ್ ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೂರ್ಯಕುಮಾರ್ ಯಾದವ್, 'ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ. ಈ ಸುದ್ದಿ ಪ್ರಕಟಿಸಿದ ಪತ್ರಕರ್ತ ಸ್ಕ್ರಿಪ್ಟ್ ರೈಟರ್ ಆಗಿದ್ದಾರಾ?. ನನಗೆ ನಗೆ ಬಂದರೆ ಇನ್ನು ನಾನು ಹಾಸ್ಯಮಯ ಸಿನೆಮಾ ನೋಡುವುದನ್ನು ಬಿಡುತ್ತೇನೆ. ಏಕೆಂದರೆ ನಿಮ್ಮ ಈ ವರದಿಯನ್ನು ಓದಿದಾಗ ನನಗೆ ಖಂಡಿತ ನಗು ಬರುತ್ತದೆ. ಇದೊಂದು ಸುಳ್ಳು ಸುದ್ದಿ' ಎಂದು ಹೇಳುವ ಮೂಲಕ ತಾವು ಮುಂಬೈ ತಂಡ ತೊರೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಜತೆಗೆ ಸುಳ್ಳು ಸುದ್ದಿ ಹಬ್ಬಿಸಿದ ಪತ್ರಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ.
Script writer hai ya journalist? Agar hasna hai toh I will stop watching comedy movies and start reading these articles. Ekdum bakwas 🤣🤣🤣 pic.twitter.com/VG3YwQ5eYb
— Surya Kumar Yadav (@surya_14kumar) April 2, 2025
ಜೈಸ್ವಾಲ್ ಮುಂಬೈ ತಂಡ ತೊರೆಯುವ ಬಗ್ಗರ ಪ್ರತಿಕ್ರಿಯಿಸಿರುವ ಮುಂಬಯಿ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧಿಕಾರಿಯೊಬ್ಬರು, ಹೌದು. ಜೈಸ್ವಾಲ್ ನಿರ್ಧಾರ ಅಚ್ಚರಿ ತಂದಿದೆ. ವೈಯಕ್ತಿಕ ಕಾರಣ ನೀಡಿ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕೇಳಿದ್ದಾರೆ. ಅವರ ಮನವಿಯನ್ನು ನಾವು ಸ್ವೀಕರಿಸಿದ್ದೇವೆ' ಎಂದಿದ್ದಾರೆ.
ಜೈಸ್ವಾಲ್ ಮುಂಬೈ ಪರ 36 ಪ್ರಥಮ ದರ್ಜೆ ಕ್ರಿಕೆಟ್ ಆಡಿ 3712 ರನ್ ಬಾರಿಸಿದ್ದಾರೆ. ಈ ವೇಳೆ 13 ಶತಕ ಕೂಡ ಸಿಡಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 7 ಶತಕ ಒಳಗೊಂಡಂತೆ 1526 ರನ್ ಬಾರಿಸಿದ್ದಾರೆ. ಮುಂದಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಗೋವಾ ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ಧೇಶ್ ಲಾಡ್ ಇತ್ತೀಚೆಗೆ ಮುಂಬೈ ತಂಡವನ್ನು ತಿರೆದು ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದರು. ಕನ್ನಡಿಗ ಕರುಣ್ ನಾಯರ್, ಕರ್ನಾಟಕ ತಂಡ ತೊರೆದು ಈಗ ವಿದರ್ಭ ಪರ ಆಡುತ್ತಿದ್ದಾರೆ. ಯಾವುದೇ ರಾಜ್ಯದ ಪರ ಆಡುವುದು ಆಟಗಾರರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ಆದರೆ ಬೇರೆ ರಾಜ್ಯದ ಪರ ಆಡಬೇಕಾದರೆ ನಿರಾಕ್ಷೇಪಣಾ ಪ್ರಮಾಣಪತ್ರ ಅತ್ಯಗತ್ಯ.