Chikkaballapur News: ಮೂರು ದಿನಗಳ ಗುರುಪೂಜಾ ಸಂಗೀತೋತ್ಸವಕ್ಕೆ ಕೈವಾರದಲ್ಲಿ ಅದ್ಧೂರಿ ಚಾಲನೆ
ಗುರುಪೂಜಾ ಮಹೋತ್ಸವದ ಅಂಗವಾಗಿ ತಾತಯ್ಯ ಅವರ ದೇವಾಲಯವನ್ನು ವಿವಿಧ ಬಗೆಯ ಹೂಹಣ್ಣುಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವ ಮಂಗಳವಾದ್ಯಗಳೊಂದಿಗೆ ಗೋಪೂಜೆ ನೆರವೇರಿಸಿ ತಾತಯ್ಯನವರ ಪ್ರಥಮ ದರ್ಶನ ಪೂಜೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಮೂಲ ವಿಗ್ರಹವನ್ನು ಕೂಡ ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.

ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಮಂಗಳವಾರ ಆರಂಭವಾಯಿತು.

ಚಿಂತಾಮಣಿ : ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಮಂಗಳವಾರ ಆರಂಭವಾಯಿತು.
ಗುರುಪೂಜಾ ಮಹೋತ್ಸವದ ಅಂಗವಾಗಿ ತಾತಯ್ಯ ಅವರ ದೇವಾಲಯವನ್ನು ವಿವಿಧ ಬಗೆಯ ಹೂಹಣ್ಣುಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವ ಮಂಗಳವಾದ್ಯಗಳೊಂದಿಗೆ ಗೋಪೂಜೆ ನೆರವೇರಿಸಿ ತಾತಯ್ಯನವರ ಪ್ರಥಮ ದರ್ಶನ ಪೂಜೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಮೂಲ ವಿಗ್ರಹವನ್ನು ಕೂಡ ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
ಪುರೋಹಿತ ವರ್ಗವು ಪ್ರಾತ:ಕಾಲದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಿ ಮಹಾ ಮಂಗಳಾರತಿಯನ್ನು ಬೆಳಗಲಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಧರ್ಮಾಧಿಕಾರಿ ಎಂ.ಆರ್. ಜಯರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಇದಕ್ಕೂ ಪೂರ್ವದಲ್ಲಿ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ನೇತೃತ್ವದಲ್ಲಿ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ಸಂಕೀರ್ತನೆಯ ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ವಾಂಸರುಗಳಿಂದ ಸಂಗೀತ ಸಮರ್ಪಣೆ, ಸ್ಠಳೀಯ ಕಲಾವಿದರಿಂದ ನಾದಸ್ವರ ಗಾಯನ, ತವಿಲ್ ವಾದಕರಿಂದ ಸಂಗೀತ ಸಮರ್ಪಣೆಯಾಯಿತು.
ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಛೇರಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೃಹತ್ ವೇದಿಕೆಯನ್ನು ಹಾಕಲಾಗಿದೆ. ವೇದಿಕೆಯನ್ನು ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರ ವೇದಿಕೆ ಎಂದು ವಿಂಗಡಿಸಿ ಎರಡು ಬದಿಯಲ್ಲಿ ಸಂಗೀತಗಾರರು ಕುಳಿತು ಸಂಗೀತ ಸಮರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿದೆ.
ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಬಂಗಾರಪೇಟೆ ವೇಣುಗೋಪಾಲ್, ಸುನಂದ ಭಾಗವತಾರಿಣಿ, ಡಾ||ಶ್ರೀನಿವಾಸ್, ಜಿ.ವೇಣುಗೋಪಾಲ್, ನಾಗರಾಜ್, ಪಟ್ಟಾಭಿರಾಮರೆಡ್ಡಿ, ಕೊಡಿಚೆರುವು ನಾಗರತ್ನಮ್ಮ, ಸಿ.ಆರ್.ನಟರಾಜ್, ಶ್ಯಾಮಲ ಶ್ರೀನಿವಾಸ್, ವಿಶ್ವಪ್ರಿಯಾ, ಚಿಂತಲ ಪಲ್ಲಿ ಸೋಮಶೇಖರ್, ವಿದ್ಯಾ-ಲತಾ, ಸುಣ್ಣಕಲ್ ವೆಂಕಟರಾಯಪ್ಪ ತಂಡ, ಜಿ.ಎಸ್.ಬ್ರಹ್ಮೇಂದ್ರ ಮುಂತಾದವರು ಸಂಗೀತ ಸಮರ್ಪಣೆ ಮಾಡಿದರು.
ಸಂಜೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ತಿರುಪತಿಯ ಬಿ.ರಘುನಾಥ್, ಬೆಂಗಳೂರಿನ ವಿವೇಕ್ ಸದಾಶಿವಂ, ಬೆಂಗಳೂರು ಸಹೋದರರಾದ ಹರಿಹರನ್ ಮತ್ತು ಅಶೋಕ್, ಅಧಿತಿ ಪ್ರಹ್ಲಾದ್ ರವರುಗಳಿಂದ ಗಾಯನ ಕಾರ್ಯಕ್ರಮ ಹಾಗೂ ನಾಟ್ಯಾಂಜಲಿ ಕಲಾಕೇಂದ್ರ ಕೈವಾರ, ಸಾಯಿ ಕಲಾನಿಕೇತನ್ ತಂಡ ಚಿಂತಾಮಣಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಿತು. ದೇವಾಲಯಕ್ಕೆ ಮಾಡಿರುವ ಬಣ್ಣದ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತಿದೆ.
ಎರಡನೇ ದಿನವಾದ ಇಂದಿನ ಕಾರ್ಯಕ್ರಮಗಳು: (೯.೭.೨೫ ಬುಧವಾರ)ಬೆಳಿಗ್ಗೆ ನಾದಸ್ವರ ವಾದನಗಳನ್ನು ಎರ್ಪಡಿಸಲಾಗಿದೆ. ಡಾ||ಎಂ.ವಿ.ಶ್ರೀನಿವಾಸಮೂರ್ತಿ, ಶ್ರೀವಲ್ಲಿ ಶ್ರೀಧರ್, ಡಾ||ಶುಭಮಂಗಳ ರಘುನಂದನ್, ಸಪ್ತಸ್ವರ ಕಲಾಕೇಂದ್ರದ ವತಿಯಿಂದ ತಾಳವಾದ್ಯ, ಕೆ.ಎಸ್.ಮಾನಸ, ಅಂಕಿತಾ, ವೇಣುಮಾಧವ್, ಸುಕೃತಿ ವಿಜಯ್, ರಜನೀರೆಡ್ಡಿ ತಂಡ, ಟಿ.ಎನ್.ಶ್ವೇತ ತಂಡ, ಈ.ರಾಮಕೃಷ್ಣಾಚಾರ್, ವಿಷ್ಣು ವೆಂಕಟೇಶ್, ಬೃಂದಾ ಶೈಲಜಾ, ಮಂಜುನಾಥ್, ಶ್ರೀಕಾಂತಂ ನಾಗದೀಪ್ತಿ-ನಾಗಪ್ರಶಾಂತಿ, ಡಾ||ಲಲಿತಾ ಶಿವಜ್ಯೋತಿ, ಎ.ವಿ.ವಿಶ್ವನಾಥ್, ಬಿ.ರಾಮಚಂದ್ರ, ಲಕ್ಷ್ಮೀಕೆಂಪರಾಜು ತಂಡ, ಕೃಷ್ಣ, ವಿ.ಮಾನಸ, ರೇವತಿ ಕಾಮತ್, ಐಶ್ವರ್ಯ-ನಯನಾ, ಸುಭಾನಿ ಮುಂತಾದವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ
ಸಂಜೆ ವಿಶೇಷ ಕಾರ್ಯಕ್ರಮಗಳು : ಜುಲೈ ೯ ರಂದು ಪಿ.ಜೆ.ಬ್ರಹ್ಮಾಚಾರಿ, ಪ್ರಿಯಾಬ್ರಹ್ಮ ರವರಿಂದ ಪಿಟೀಲು ಸೋಲೋ, ಡಾ||ಶ್ರೀಕಾಂತಂ ನಾಗೇಂದ್ರಶಾಸ್ತ್ರೀ, ಕೇರಳದ ಡಾ||ಎನ್.ಜೆ.ನಂದಿನಿರವರಿAದ ಗಾಯನ , ಕೋಲಾರದ ಬಿ.ಆರ್.ರಾಜಪ್ಪ ತಂಡದವರಿಂದ ಗಾಯನ, ಮೈಸೂರು ನಾಗರಾಜ್ ಮತ್ತು ಡಾ||ಮಂಜುನಾಥ್ ರವರಿಂದ ಪಿಟೀಲು ಸೋಲೋ, ನೂಪೂರ ಫೈನ್‌ಆರ್ಟ್ಸ್ನ ರೂಪರಾಜೇಶ್ ರವರಿಂದ ನೃತ್ಯರೂಪಕ ಹಮ್ಮಿಕೊಳ್ಳಲಾಗಿದೆ.