Chikkaballapur News: ಉಪ್ಪಾರ ಸಮುದಾಯವು ಸಮಾಜದಲ್ಲಿ ಅತ್ಯಂತ ಹಿಂದುಳಿದ ತಳಮಟ್ಟದ ಸಮುದಾಯವಾಗಿದೆ.
ಉಪ್ಪಾರ ಸಮುದಾಯವು ಸಮಾಜದಲ್ಲಿ ಅತ್ಯಂತ ಹಿಂದುಳಿದ ತಳಮಟ್ಟದ ಸಮುದಾಯವಾಗಿದೆ. ಈ ಹಿಂದೆ ಉಪ್ಪಾರರು ಊರೂರು ತಿರುಗಿ ಉಪ್ಪು ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡವರು, ಕಾಲ ಕ್ರಮೇಣ ಪ್ರತಿ ಹಳ್ಳಿಯಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ಉಪ್ಪು ಸಿಗುವಂತಾದಾಗ, ವಿಧಿ ಇಲ್ಲದೆ ಉಪ್ಪಾರರು ತಮ್ಮ ಕುಲ ಕಸುಬನ್ನು ಕೈಬಿಟ್ಟು,ಜೀವನ ನಡೆಸಲು ಬೇರೆ ಬೇರೆ ಮಾರ್ಗವನ್ನು ಹುಡುಕಿ ಕೊಂಡಿದ್ದಾರೆ.


ಗೌರಿಬಿದನೂರು: ಉಪ್ಪಾರ ಸಮುದಾಯವು ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿಯೂ ಸಾಕಷ್ಟು ಹಿಂದುಳಿದಿದ್ದು, ಉಪ್ಪಾರ ಸಮಾಜದ ಮುಖಂಡರು ತಮ್ಮ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.
ಅವರು ತಾಲೂಕಿನ ತರಿದಾಳು ಗ್ರಾಮದಲ್ಲಿ ಸೂರ್ಯವಂಶ ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ, ಭಗೀರಥ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ: Chikkaballapur News: ಮೂರು ದಿನಗಳ ಗುರುಪೂಜಾ ಸಂಗೀತೋತ್ಸವಕ್ಕೆ ಕೈವಾರದಲ್ಲಿ ಅದ್ಧೂರಿ ಚಾಲನೆ
ಉಪ್ಪಾರ ಸಮುದಾಯವು ಸಮಾಜದಲ್ಲಿ ಅತ್ಯಂತ ಹಿಂದುಳಿದ ತಳಮಟ್ಟದ ಸಮುದಾಯವಾಗಿದೆ. ಈ ಹಿಂದೆ ಉಪ್ಪಾರರು ಊರೂರು ತಿರುಗಿ ಉಪ್ಪು ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡವರು, ಕಾಲ ಕ್ರಮೇಣ ಪ್ರತಿ ಹಳ್ಳಿಯಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ಉಪ್ಪು ಸಿಗುವಂತಾದಾಗ, ವಿಧಿ ಇಲ್ಲದೆ ಉಪ್ಪಾರರು ತಮ್ಮ ಕುಲ ಕಸುಬನ್ನು ಕೈಬಿಟ್ಟು,ಜೀವನ ನಡೆಸಲು ಬೇರೆ ಬೇರೆ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಈಗಲೂ ಕೂಡ ಉಪ್ಪಾರ ಸಮಾಜಕ್ಕೆ ದೊರೆಯಬೇಕಾದ ಪ್ರಾಮುಖ್ಯತೆ ದೊರೆಯುತ್ತಿಲ್ಲ ಎಂಬ ನೋವು ಸಮಾಜಕ್ಕೆ ಇರಬಹುದು. ಇದಕ್ಕೆ ಪರಿಹಾರ ಎಂದರೆ ಮೊದಲು ನಿಮ್ಮ ಸಮಾಜ ಸಂಘಟಿತರಾಗಿ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕೊಡುವ ಮೂಲಕ ಅವರಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ನಿಮ್ಮ ಸಮುದಾಯ ಸಮಾಜದಲ್ಲಿ ಗುರುತಿಸುವಂತಾಗುತ್ತದೆ ಎಂದ ಅವರು ತಾಲೂಕಿನಲ್ಲಿ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ನಾನು ಎಲ್ಲಾ ರೀತಿಯ ನೆರವನ್ನು ನೀಡುತ್ತೇನೆ ಮತ್ತು ಈಗಾಗಲೆ ಉಪ್ಪಾರ ಸಮುದಾಯದ ಜಯರಾಮ್ ಅವರನ್ನು ನಗರಸಭೆಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ಮಾಡಿದ್ದೇನೆ ಎಂದರು.
ಇದಕ್ಕೂ ಮುನ್ನ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತರಿದಾಳು ಗ್ರಾಮಕ್ಕೆ ಆಗಮಿಸಿದ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರನ್ನು ಹಾಗೂ ಉಪ್ಪಾರ ಜನಾಂಗದ ಮುಖಂಡ ರನ್ನು ನೂರಾರು ಸಂಖ್ಯೆಯಲ್ಲಿನ ಗ್ರಾಮಸ್ಥರು ಅತ್ಯಂತ ಸಡಗರದಿಂದ ಬರಮಾಡಿಕೊಂಡರು.ಮತ್ತು ಕಾರ್ಯಕ್ರಮದಲ್ಲಿ ಶಾಸಕರನ್ನು ಉಪ್ಪಾರ ಸಮಾಜದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ಜಯರಾಮ್,ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಸಜ್ಜಗಂಟರಾಯಪ್ಪ, ಗಂಗಸಂದ್ರ ಗೋವಿಂದಪ್ಪ, ಪುಟ್ಟಸ್ವಾಮಿ, ಮದ್ದಪ್ಪ, ಎಂ ಕೃಷ್ಣಮೂರ್ತಿ, ಮಂಜುನಾಥ್, ಕೆಎಚ್ಪಿ ಫೌಂಡೇಶನ್ ನಿರ್ದೇಶಕ ಶ್ರೀನಿವಾಸ್ ಗೌಡ, ಲಕ್ಷ್ಮಣ್ ರಾವ್, ಮೋಹನ್, ಶ್ರೀನಿವಾಸ್, ಆಧಿನಾರಾಯಣ, ರಂಗಪ್ಪ, ಬಾಬು, ಸಿದ್ದಪ್ಪ ಹಾಗೂ ನೂರಾರು ಸಂಖ್ಯೆಯಲ್ಲಿ ಉಪ್ಪಾರ ಸಮುದಾಯದ ಜನರು ಭಾಗವಹಿಸಿದ್ದರು.