Wednesday, 11th December 2024

ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಐತಿ ಸಾಹೇಬ್ರ…

ಮೂಡಲಗಿ : ಜನಸಾಮಾನ್ಯರ ಕಷ್ಟದ ಬಗ್ಗೆ ಸಂಸದ ಕಡಾಡಿಗೆ ಗೊತ್ತಿಲ್ಲ ಅಂತ ಕಾಣಸತೈತಿ. ಕೇವಲ ಭಾಷಣ ಮಾಡುವುದನ್ನೇ ಅವರ ಸಾಧನೆ ಅನಕೊಂಡರ, ಮತ್ ಪೇಪರದಾಗ ಹೇಳಿಕಿ ಕೊಡೋದು ಅಷ್ಟ ಮಾಡ್ಯಾರ, ಭಾಷಣ ಮಾಡುವುದರಲ್ಲಿ ಈರಣ್ಣ ಕಡಾಡಿ ಮಹಾ ಶಾನ್ಯರ ಆಗ್ಯಾರ…ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಐತಿ ಸಾಹೇಬ್ರ…ಭಾಷಣ ಬಿಟ್ಟ ಕೆಲಸ ಮಾಡ್ರಿ ಅಂತ ಜನ ಗುಸುಗುಸು ಮಾತಾಡಕ್ ಹತ್ಯಾರಿ ಪಾ ಸಂಸದ್ರ…
ರೂಪಾಯಿ  ಖರ್ಚ್ ಮಾಡದ ರಾಜ್ಯಸಭಾ ಸದಸ್ಯ ಆಗ್ಯಾರಿ, ಆಗಿ ಒಂದು ವರ್ಷ ಕಳೆಯುತ್ತಾ ಬಂತ್, ಆದರೂ ಇನ್ನೂವರೆಗೂ ನಿಮ್ಮ ತವರೂರು ಆದ ಮೂಡಲಗಿ ತಾಲೂಕಿನ್ಯಾಗ ಏನು ಒಂದು ಕೆಲಸ ಮಾಡಿಲ್ಲ ರಿ ನೀವ್…ಬರಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿರುವ ಯೋಜನೆಗಳ ಬಗ್ಗೆ ಮಾತನಾಡೋದ  ಬಿಟ್ರ ಬೇರೆ ಯಾವುದೇ ಕೆಲಸ ಆಗಿಲ್ಲ ಅಂತ ಮಂದಿ ಮಾತಾಡಕ್ ಹತ್ಯಾರಿ ನೋಡ್ರಿ…
ಅರಭಾವಿ ಕ್ಷೇತ್ರದ  ಶಾಸಕರ ಕಳೆದ ವರ್ಷ ಲಾಕ್ ಡೌನ್ ದಾಗ ತಮ್ಮ ಸ್ವಂತ ಹಣದಿಂದ ಇಡೀ ಅರಭಾವಿ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಕಿಟ್ ಕೊಟ್ಟರಾ ನೋಡ್ರಿ ಪಾ… ಹಸಿದವರಿಗೆ ಅನ್ನ ನೀಡೋ ದೇವತಾ ಮನುಷ್ಯರ ಆಗ್ಯಾರ..ಮತ್ ಈಗ ತಾಲೂಕಿನ್ಯಾಗ ಕೊರೋನಾ ಎರಡನೇ ಅಲೆ ಬಂದ ಜನರ ಜೀವನ ಅಸ್ತವ್ಯಸ್ತ ಆಗೇತಿ.ಇನ್ನೊಂದೆಡೆ ಸೋಂಕಿತರು ಸರಿಯಾದ ಚಿಕಿತ್ಸೆಯಿಲ್ಲದೆ ಬಲಿಯಾಗುತ್ತಿದ್ದಾರೆ.. ಇಂತಹ ಪರಿಸ್ಥಿತಿಯಲ್ಲಿ  ಜನರ ಜೀವ  ರಕ್ಷಣೆ ಮಾಡಾಕ ಶಾಸಕರ ತಮ್ಮ ಸ್ವಂತ ಹಣ ದಿಂದಲೇ ಅನೇಕ ಕಾರ್ಯಗಳನ್ನು ಮಾಡತಾರ, ಆದ್ರೆ ಕಡಾಡಿಯವರ ನಿಮ್ಮದ ಭಾಷಣ ಬಿಟ್ರ ಮತ್ತೇನಿಲ್ಲ ನೋಡ್ರಿ ಅರಭಾವಿ ಕ್ಷೇತ್ರಕ್ಕೆ ಕೊಡುಗೆ ಅಂತ ಜನ ಮಾತಾಡಕ ಹತ್ಯಾರ….ಇನ್ನರೇ ಬಡಜನತೆಗೆ ಸ್ವಲ್ಪ ಸಹಾಯ ಮಾಡ್ರಿ…
ಅವಾಗ ಇವಾಗ ಬರಿ ಕೈಲೆ ಬಂದ ವಿಜಿಟ್ ಮಾಡಿ ಹೋಗ್ತಾರ,ಆದ್ರೂ ನಿರ್ಗತಿಕರಿಗೆ ಯಾವುದೇ ಒಂದ ಸಹಾಯ ಮಾಡಿಲ್ಲಾ ಇಲ್ಲಿ ಯವರೆಗೂ ನಮ್ಮ ತಾಲೂಕಿನ ಹೆಮ್ಮೆಯ ರಾಜ್ಯಸಭಾ ಸದಸ್ಯ ಕಡಾಡಿ ಸಾಹೇಬ್ರು…ಅಂತ ಜನಾ ಸಂಜೆ ಹೊತ್ತ ಕಟ್ಟಿಮ್ಯಾಲ ಕುಂತ ಮಾತಾಡಕ್ ಹತ್ಯಾರಿ…
ನಮ್ಮ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರೇ ಇನ್ನಾದರೂ ಜನರ ಕಣ್ಣೀರು ಒರೆಸುವಂತ ಕೆಲಸ ಮಾಡ್ರಿ ಜನರು ಮತ್ತೆ ಸಂಜೆ  ಕಟ್ಟಿ ಮ್ಯಾಲ್ ಕುಂತ ನಿಮ್ಮ ಸಾಧನೆಗಳ ಬಗ್ಗೆ ಮಾತಾಡೋ ಹಂಗ್ ಮಾಡ್ರಿ ಪಾ….