Saturday, 14th December 2024

ಇಂಡಿ ಭಾಗದ ಜನತೆ ಹೃದಯ ಶ್ರೀಮಂತರಿದ್ದಾರೆ: ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ

ಇಂಡಿ: ಇಂಡಿ ಗಡಿ ಭಾಗದ ಜನತೆ ಹೃದಯ ಶ್ರೀಮಂತಿಯ ಜೊತೆ ಮಾನವೀಯ ಮೌಲ್ಯಗಳನ್ನು ಹೊಂದಿದ್ದಾರೆ ಎಂದು ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ ಹೇಳಿದರು.

ಪಟ್ಟಣದ ಡಿವಾಯ್ ಎಸ್ಪಿ ಕಾರ್ಯಾಲಯದ ಸಭಾ ಭವನದಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಆಯ್ ರಾಜಶೇಖರ ಬಡೇದೇಸಾರ ಇವರ ಬೀಳ್ಕೋಡುಗೆ ಹಾಗೂ ನೂತನವಾಗಿ ಗ್ರಾಮೀಣ ಠಾಣೆಗೆ ಸಿ.ಪಿ ಆಯ್ ಮಹಾದೇವ ಶಿರಹಟ್ಟಿಯವರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನನ್ನ ಸುಧೀರ್ಘ ಸೇವಾ ಅವಧಿ ವಿಜಯಪೂರ ಜಿಲ್ಲೆಯಲ್ಲಿ ಕಳೆದಿರುವೆ.

ಈ ಭಾಗದ ಜನತೆ ಮಾತು ಕಠೋರವಾದರೂ ಧಾನ,ಧರ್ಮದಿಂದ ಕರುಣೆ, ಪ್ರೀತಿಗೆ ಹೃದಯವಂತರಾಗಿದ್ದಾರೆ. ಪೊಲೀಸ್ ಇಲಾಖೆಯ ಜೊತೆ ಜನತೆ ಕಾನೂನು ಪರಿಪಾಲಕರೂ ಹೌದು. ಈ ಭಾಗ ಭೀಮಾ ತೀರ ಕುಖ್ಯಾತಿ ಎಂಬ ಹೆಸರು ಇದೆ ಎರಡು ಮನೇತನಗಳ ವೈಷ್ಯಮ ಇಡೀ ಜಿಲ್ಲೆಗೆ ಅಂಟಿಕೊ0ಡಿದೆ. ಇಂದು ಎರಡೂ ಕುಟುಂಬ ಗಳಿಗೆ ಶಾಂತಿ, ಸಾಮರಸ್ಯ ಬೇಕಾಗಿದೆ ಇದನ್ನು ಅಳುಕಿಸಿಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸರಕಾರ ಸೇವೆ ಸಿಗುವುದು ಕಷ್ಟ ನಮಗೆ ಸಿಕ್ಕ ಅವಕಾಶ ಜನರ ಸೇವೆಗೆ ಸಮರ್ಪಣೆ ಮಾಡಿರುವೆ. ಮೂರುವರೇ ವರ್ಷ ಅವಧಿ ಸಿಕ್ಕಿರುವುದರಿಂದ ಏನಾದರೂ ಕಿಂಚ್ಚಿತ್ತು ಕೆಲಸ ಮಾಡಲು ಸಾಧ್ಯೆವಾಗಿದೆ. ಕೇವಲ ನಮ್ಮಿಂದಲೆ ಎಲ್ಲವು ಆಗಿದೆ ಎನ್ನುವುದಕ್ಕಿಂತ ಸಾರ್ವಜನಿಕರ , ಇಡೀ ಪೊಲೀಸ್ ಸಿಬಂದ್ದಿಗಳ ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಗಿದೆ. ನನ್ನ ಆಡಳಿತ ಅವಧಿಯಲ್ಲಿ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿದರು.

***

ಸರಕಾರಿ ಸೇವೆಯಲ್ಲಿ ಅದರಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗಳು ಸಹಜ ಪ್ರಕ್ರೀಯೇ ನಾವು ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಸೇವೆ ಮಾಡಿದರೆ ಜನರು ಸ್ಮರಿಸುತ್ತಾರೆ. ರಾಜಶೇಖರ ಬಡೇದೇಸಾರ ಅವರು ಎಲ್ಲಿ ಸೇವೆ ಮಾಡಿದ್ದರೂ ಕೂಡಾ ಅಲ್ಲಿ ಒಂದೊ೦ದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನಗರ .ಸಿ.ಪಿ.ಆಯ್ ಭೀಮನಗೌಡ ಬಿರಾದಾರ ಪ್ರಸ್ತಾವಿಕ ನುಡಿಗಳಾಡಿ ದರು.

ಡಿ.ವಾಯ್.ಎಸ್ಪಿ ಚಂದ್ರಶೇಖರ ನಂದರಡ್ಡಿ, ಸಿ.ಪಿ.ಆಯ್ ರಾಜಶೇಖರ ಬಡೇದೇಸಾರ ಸಿ.ಪಿ.ಆಯ್ ಭೀಮನಗೌಡ ಬಿರಾದಾರ, ಮಹಾದೇವ ಶಿರಹಟ್ಟಿ, ಪಿ.ಎಸ್ ಆಯ್ ಅಶೋಕ ನಾಯಕ, ಹೋರ್ತಿ ಚಂದ್ರಶೇಖರ ತೇಲಿ ವೇದಿಕೆಯಲ್ಲಿದ್ದರು.

ಬಿಜೆಪಿ ಮುಖಂಡ ಗಣಪತಿ ಬಾಣಿಕೋಲ, ಶ್ರೀಮಂತ ಬಾರಿಕಾಯಿ, ಲ್ಯಾಂಡ್ ಡೌಲರ‍್ಸ್ ಏಜೇನ್ಸಿ ಅತೀಕ ಶೇಖ, ಡಿ.ಎಸ್.ಎಸ್ ಮುಖಂಡ ವಿನಾಯಕ ಗುಣಸಾಗರ, ಅಯುಬ ನಾಟೀಕಾರ,ಹುಚ್ಚಪ್ಪ ತಳವಾರ, ಮಹೇಶ ನಾಯಕ,ರೈಸ ಅಷ್ಠೇಕರ್,ಸಿದ್ದರಾಯ ಐರೋಡಗಿ, ಜಬ್ಬರ ಅರಬ, ಜಾವೀದ ಮೂಮಿನ್ ಸೇರಿದಂತೆ ಪೊಲೀಸ್ ಸಿಬಂದ್ದಿ ಹಾಗೂ ತಾಲೂಕಿನ ವಿವಿಧ ಸಂಘಟನೆ ಪದಾಧಿಕಾರಿಗಳು ಮುಖಂಡರು ಇದ್ದರು.