ಕಳವು ಚಿನ್ನ ಜಪ್ತಿ ಮಾಡಿ ತಂದ ಮರುದಿನ ದಾವಣಗೆರೆ ಪಿಎಸ್‌ಐ ಆತ್ಮಹತ್ಯೆ
ಕಳವು ಪ್ರಕರಣವೊಂದರಲ್ಲಿ ಚಿನ್ನಾಭರಣವನ್ನು ನ್ಯಾಯಾಲಯದ ಅನುಮತಿ ಪಡೆದು ಮಧ್ಯಪ್ರದೇಶದಿಂದ ಜಪ್ತಿ ಮಾಡಿ ತಂದಿದ್ದ ಬಡಾವಣೆ ಠಾಣೆ ಎಸ್‌ಐ ಬಿ ಆರ್ ನಾಗರಾಜಪ್ಪ, ಮರುದಿನವೇ ನಾಪತ್ತೆಯಾಗಿದ್ದರು. ವಿಶೇಷ ಕರ್ತವ್ಯ ಮುಗಿಸಿ ಜೂನ್ 30ರಂದು ಬೆಳಗ್ಗೆ 11ಕ್ಕೆ ಮನೆಗೆ ಮರಳಿದ್ದ ನಾಗರಾಜಪ್ಪ, ಜುಲೈ 1ರ ನಸುಕಿನಲ್ಲಿ ಮನೆ ತೊರೆದಿದ್ದರು.