ಭಾರತ- ಪಾಕ್ ಯುದ್ಧ: ಕಾಂಗ್ರೆಸ್ ಸಾಧನಾ ಸಮಾವೇಶ ಅನಿರ್ದಿಷ್ಟ ಮುಂದೂಡಿಕೆ
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಸರಕಾರ (Karnataka Congress) ದೊಡ್ಡ ಕಾರ್ಯಕ್ರಮವನ್ನು ಯೋಜಿಸಿತ್ತು. ಅಲ್ಲಿ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ ಫಲಾನುಭವಿಗಳಿಗೆ ಒಂದು ಲಕ್ಷ ಹಕ್ಕುಪತ್ರಗಳನ್ನು ನೀಡಲು ಯೋಜನೆ ಹಮ್ಮಿಕೊಂಡಿತ್ತು. ಇದೀಗ ಆ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.