Viral Video: ಇದೇನು ಮನಾಲಿ, ಕಾಶ್ಮೀರನಾ? ಇಲ್ಲ.... ಬೆಂಗಳೂರಿನ ರಸ್ತೆಯೇ? ಏನಿದು ವೈರಲ್ ವಿಡಿಯೊ?
ಬೆಂಗಳೂರಿನಲ್ಲಿ ಶನಿವಾರ(ಮಾರ್ಚ್ 22) ಸುರಿದ ಭಾರೀ ಮಳೆಗೆ ಅಲ್ಲಿನ ರಸ್ತೆಗಳಲ್ಲಿ ದಟ್ಟವಾದ, ಹಿಮದಂತಹ ನೊರೆ ಸೃಷ್ಟಿಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ಕಂಡು ದಂಗಾಗಿದ್ದಾರೆ.


ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ(ಮಾರ್ಚ್ 22) ಸುರಿದ ಭಾರೀ ಮಳೆಗೆ ಅಲ್ಲಿನ ರಸ್ತೆಗಳಲ್ಲಿ ದಟ್ಟವಾದ, ಹಿಮದಂತಹ ನೊರೆ ಕಂಡುಬಂದಿದೆ. ಮಳೆಯಿಂದ ಬೇಸಿಗೆಯ ಬಿಸಿಲಿನ ತಾಪ ತುಸು ಕಡಿಮೆಯಾದರೂ, ರಸ್ತೆಗಳಲ್ಲಿ ಅನಿರೀಕ್ಷಿತ ನೊರೆಯನ್ನು ಕಂಡು ಜನರು ದಂಗಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ವಿಡಿಯೊ ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.ಈ ವಿಚಿತ್ರವಾದ ಘಟನೆ ನಿಮ್ಹಾನ್ಸ್ ಡೈರಿ ವೃತ್ತದ ಬಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಈ ನೊರೆಯುಕ್ತ ಬೀದಿಗಳ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ದಟ್ಟವಾದ ಬಿಳಿ ನೊರೆಯಿಂದ ಕೂಡಿದ ಬೀದಿಗಳ ದೃಶ್ಯವನ್ನು ಸೆರೆಹಿಡಿಯಲಾಗಿದೆ.ಒಟ್ಟಾರೆ ಈ ಅನಿರೀಕ್ಷಿತ ಬೇಸಿಗೆ ಮಳೆಯ ನಂತರ ಬೆಂಗಳೂರಿನ ಬೀದಿಗಳು ಫೋಮ್ ಪಾರ್ಟಿಯಂತೆ ಬದಲಾಗಿದೆ ಎನ್ನಲಾಗಿದೆ.
ನೊರೆಯಿಂದ ತುಂಬಿದ ಬೆಂಗಳೂರಿನ ರಸ್ತೆಯ ವಿಡಿಯೊ ಇಲ್ಲಿದೆ ನೋಡಿ...
ವೈರಲ್ ಆದ ಈ ವಿಡಿಯೊ ನೋಡಿ ನೆಟ್ಟಿಗರು ಇದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನೊರೆಯು ನೈಸರ್ಗಿಕ ಅಂಶಗಳಿಗೆ ಕಾರಣವಾಗಿದೆ ಎಂದು ವಿವರಿಸಿದ ನೆಟ್ಟಿಗರೊಬ್ಬರು, "ಮಳೆ ಹನಿಗಳು ಅಂಟುವಾಳ(ನೊರೆಕಾಯಿ)ಕಾಯಿಗಳ ಮೇಲೆ ಬಿದ್ದಿವೆ. ಅದರ ಮೇಲೆ ವಾಹನಗಳು ಓಡಾಡಿದ ಕಾರಣ ನೊರೆಗಳು ಉಂಟಾಗಿವೆ. ಇದು ಫೋಮ್ ತರಹದ ನೋಟವನ್ನು ನೀಡಿದೆ. ಇವು ಸಾಮಾನ್ಯ... ಈ ಸೋಪ್ ನಟ್ (soap nut)ಗಳನ್ನು ಶಾಂಪೂಗಳಲ್ಲಿ ಮತ್ತು ಸಾಮ್ರಾಟ್‌ನಂತಹ ಸೀಗೆಕಾಯಿ ಪುಡಿಗಳಲ್ಲಿ ಬಳಸಲಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನೊಬ್ಬ ನೆಟ್ಟಿಗರು ಇದನ್ನು ತಮಾಷೆಯಾಗಿ ತೆಗೆದುಕೊಂಡು, "ಮನೆಗೆ ಹಿಂದಿರುಗುವಾಗ ಯಾರೋದ್ದೊ ಸರ್ಫ್ ಎಕ್ಸೆಲ್ ಪೌಡರ್ ಕೈಜಾರಿ ರಸ್ತೆಯ ಮೇಲೆ ಬಿದ್ದಿದೆ" ಎಂದಿದ್ದಾರೆ. "ನಿನ್ನೆ ಮನೆಗೆ ಹಿಂದಿರುಗುವಾಗ ಇದು ಹೊಸ ಮನಾಲಿ ಬೆಂಗಳೂರು ಯೋಜನೆ ಎಂದು ನಾನು ಅಂದುಕೊಂಡೆ. ಇದರ ಅಡಿಯಲ್ಲಿ ಕೃತಕ ಹಿಮವನ್ನು ರಚಿಸಿ ರಸ್ತೆಯ ಮೇಲೆ ಹರಡಲಾಗಿದೆ ಎಂದು ಭಾವಿಸಿದೆ. ಇದು ಅತ್ಯಂತ ನಿಧಾನಗತಿಯ ಆಸಿಡ್ ಮಳೆಯಾಗಿದೆ." ಎಂದು ಹೇಳಿದ್ದಾರೆ.
ಇನ್ನೊಬ್ಬ ನೆಟ್ಟಿಗರು , "ಇದು ಸೋಪ್‌ನಟ್ ಮರದಿಂದಾಗಿದೆ. ಮೊದಲ ಮಳೆಯಲ್ಲಿ ಈ ಹೂವುಗಳು ನೀರಿನೊಂದಿಗೆ ಬೆರೆತಾಗ ನೊರೆಯಂತಹ ವಸ್ತುವನ್ನು ಸೃಷ್ಟಿಸುತ್ತವೆ. ದ್ವಿಚಕ್ರ ವಾಹನಗಳು 'ಜಾರುವಿಕೆ'ಗೆ ಒಳಗಾಗುವದರಿಂದ ಇಲ್ಲಿ ಅವುಗಳಲ್ಲಿ ಚಲಿಸುವುದು ಅಪಾಯಕಾರಿ” ಎಂದು ಸಂಭವಿಸಬಹುದಾದ ಅಪಾಯದ ಬಗ್ಗೆ ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕ್ಯಾಬ್ ಡ್ರೈವರ್ ವಾಂತಿ ಮಾಡಿದಾಗ ಈ ಮಹಿಳೆ ಹೀಗಾ ಮಾಡೋದು?! ವಿಡಿಯೊ ನೋಡಿ
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ
ಈ ಹಿಂದೆ ಫೆಬ್ರವರಿ 20 ರಂದು ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಬೆಳ್ಳಂದೂರು ಕೆರೆಯ ಸುತ್ತಮುತ್ತ ಹಲವು ದಿನಗಳ ಕಾಲ ಬಿಳಿ ಹೊಗೆಯ ದಟ್ಟ ಮೋಡಗಳು ಕಾಣಿಸಿಕೊಂಡಿದ್ದವು. ಇದರಿಂದ ವರ್ತೂರು ಕೆರೆಯ ಬಳಿ ರಸ್ತೆಗಳಲ್ಲಿ ಈ ಹೊಗೆ ಹರಡಿ ಭಾರಿ ಟ್ರಾಫಿಕ್ ಜಾಮ್‍ಗೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕರ್ನಾಟಕ ಸರ್ಕಾರ ಮತ್ತು ಅದರ ನಾಗರಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.