ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚೆನ್ನೈ-ಆರ್‌ಸಿಬಿ ಪಂದ್ಯಕ್ಕೆ ಕ್ಷಣಗಣನೆ; ಆಡುವ ಬಳಗ ಹೇಗಿದೆ?

ಒಟ್ಟಾರೆ ಐಪಿಎಲ್​ ದಾಖಲೆ ಕೂಡ ಸಿಎಸ್​ಕೆ ಪರವಾಗಿದೆ. ಇದುವರೆಗೆ ಉಭಯ ತಂಡಗಳು 33 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೆನ್ನೈ 21 ಪಂದ್ಯ ಗೆದ್ದಿದೆ. ಆರ್‌ಸಿಬಿ 11 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಮೊದಲ ಪಂದ್ಯವನ್ನು ತವರಿನಲ್ಲೇ ಗೆದ್ದಿರುವ ಚೆನ್ನೈಗೆ ಇದು ಎರಡನೇ ತವರು ಪಂದ್ಯ. ತವರಿನ ಲಾಭವನ್ನೂ ಹೊಂದಿದೆ. ಒಟ್ಟಾರೆ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಚೆನ್ನೈ-ಆರ್‌ಸಿಬಿ ಪಂದ್ಯಕ್ಕೆ ಕ್ಷಣಗಣನೆ; ಮಳೆ ಭೀತಿ ಇದೆಯೇ?

Profile Abhilash BC Mar 28, 2025 8:30 AM

ಚೆನ್ನೈ: ಐಪಿಎಲ್‌ನ(IPL 2025) ಹೈವೋಲ್ಟೇಜ್‌ ಆರ್‌ಸಿಬಿ(CSK vs RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ರಾತ್ರಿ ಚೆನ್ನೈಯ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ(M. A. Chidambaram Stadium)ನಲ್ಲಿ ಈ ಹಣಾಹಣಿ ನಡೆಯಲಿದೆ. ಧೋನಿ ಮತ್ತು ವಿರಾಟ್‌ ಕೊಹ್ಲಿ ಪಂದ್ಯದ ಪ್ರಮುಖ ಹೈಲೆಟ್ಸ್‌. ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್, ಕರ್ನಾಟಕದ ಶ್ರೇಯಸ್ ಗೋಪಾಲ್ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳನ್ನು ಎದುರಿಸುವುದು ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲಾಗಬಹುದು.

ಚೆನ್ನೈನಲ್ಲಿ ಮಳೆ ಸಾಧ್ಯತೆ ಇಲ್ಲ. ಆದರೆ ತಾಪಮಾನವು 26 ರಿಂದ 27 ಡಿಗ್ರಿಗಳವರೆಗೆ ಇರಲಿದೆ ಎಂದು ಹವಾಮಾನ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಟ ಕೂಡ ಇರುವ ಸಾಧ್ಯತೆ ಇದೆ.

ಪಿಚ್‌ ರಿಪೋರ್ಟ್‌

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಕಳೆದ ಐಪಿಎಲ್​ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 170 ರನ್ ಆಗಿತ್ತು. ಪಂದ್ಯ ಸಾಗಿದಂತೆ ಪಿಚ್​ನಲ್ಲಿ ಬದಲಾವಣೆ ಕಂಡುಬರುವುದರಿಂದ ಇಲ್ಲಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ನಡೆಸಿದರ ಸೂಕ್ತ. ಇಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಚೇಸಿಂಗ್‌ ಮಾಡಿದ ತಂಡಕ್ಕೆ ಗೆಲುವಿಗಿಂತ ಹೆಚ್ಚಾಗಿ ಸೋಲು ಎದುರಾಗಿದೆ.

ಇದನ್ನೂ ಓದಿ IPL 2025 Points Table: ಕೆಕೆಆರ್‌ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಮುಖಾಮುಖಿ

ಒಟ್ಟಾರೆ ಐಪಿಎಲ್​ ದಾಖಲೆ ಕೂಡ ಸಿಎಸ್​ಕೆ ಪರವಾಗಿದೆ. ಇದುವರೆಗೆ ಉಭಯ ತಂಡಗಳು 33 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೆನ್ನೈ 21 ಪಂದ್ಯ ಗೆದ್ದಿದೆ. ಆರ್‌ಸಿಬಿ 11 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಮೊದಲ ಪಂದ್ಯವನ್ನು ತವರಿನಲ್ಲೇ ಗೆದ್ದಿರುವ ಚೆನ್ನೈಗೆ ಇದು ಎರಡನೇ ತವರು ಪಂದ್ಯ. ತವರಿನ ಲಾಭವನ್ನೂ ಹೊಂದಿದೆ. ಒಟ್ಟಾರೆ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್‌ ಕಿಂಗ್ಸ್‌: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್‌, ಎಂಎಸ್ ಧೋನಿ(ವಿ.ಕೀ), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಪ್ ಸಾಲ್ಟ್ (ವಿ.ಕೀ.), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ,ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್‌ ಕುಮಾರ್‌.