ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ಯಾಬ್‌ ಡ್ರೈವರ್‌ ವಾಂತಿ ಮಾಡಿದಾಗ ಈ ಮಹಿಳೆ ಹೀಗಾ ಮಾಡೋದು?! ವಿಡಿಯೊ ನೋಡಿ

Viral Video: ಮೇಕಪ್ ವಿಡಿಯೊಗಳಿಂದ ಫೇಮಸ್‌ ಆದ ಹೋನಿ ಪಿಪಲ್ ಎಂಬ ಮಹಿಳೆ ತನ್ನ ಕ್ಯಾಬ್‍ ಚಾಲಕ ಇದ್ದಕ್ಕಿದ್ದಂತೆ ವಾಂತಿ ಮಾಡಿದಾಗ ಆತನಿಗೆ ಹಿಂದಿನ ಸೀಟಿನಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಿ ಕಾರನ್ನು ಡ್ರೈವ್ ಮಾಡಿ ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕ್ಯಾಬ್‌ ಡ್ರೈವರ್‌ ವಾಂತಿ ಮಾಡಿದ್ದಕ್ಕೆ ಮಹಿಳೆ ಮಾಡಿದ್ದೇನು?

Profile pavithra Mar 24, 2025 5:50 PM

ನವದೆಹಲಿ: ಮಾನವೀಯತೆ ಎನ್ನುವುದು ಮನುಷ್ಯರಲ್ಲಿ ಇನ್ನೂ ಇದೆ ಎಂಬುದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿ. ಮೇಕಪ್‌ ವಿಡಿಯೊಗಳಿಂದಲೇ ಪ್ರಸಿದ್ಧರಾದ ಹೋನಿ ಪಿಪಲ್ ಎಂಬ ಮಹಿಳೆ ತನ್ನ ಕ್ಯಾಬ್‌ ಚಾಲಕ ಇದ್ದಕ್ಕಿದ್ದಂತೆ ವಾಂತಿ ಮಾಡಿದಾಗ ಆತನಿಗೆ ಹಿಂದಿನ ಸೀಟಿನಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಿ ಆಕೆ ಸ್ವತಃ ಕಾರನ್ನು ಡ್ರೈವ್‌ ಮಾಡಿಕೊಂಡು ತಾನು ತಲುಪಬೇಕಾಗಿದ್ದ ಸ್ಥಳವನ್ನು ತಲುಪಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಮಹಿಳೆ ಉಬರ್ ಕ್ಯಾಬ್ ಓಡಿಸುವುದು ಸೆರೆಯಾಗಿದೆ.

ಡ್ರೈವರ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರೆ, ಹೋನಿ ಪಿಪಲ್ ಡ್ರೈವರ್ ಸೀಟಿನ ಮೇಲೆ ಕುಳಿತು, ಸೀಟ್ ಬೆಲ್ಟ್ ಅನ್ನು ಕಟ್ಟಿ ಕಾರನ್ನು ಡ್ರೈವ್‌ ಮಾಡಿದ್ದಾರೆ. ಹಾಗೇ ಅವರ ಜತೆ ಅಜ್ಜಿ, ತಾಯಿ ಮತ್ತು ಚಿಕ್ಕ ಮಗಳು ಇದ್ದಾರೆ. ಅಲ್ಲಿ ಎದುರಿನ ಸೀಟಿನಲ್ಲಿ ಕುಳಿತಿದ್ದರೆ, ಪಿಪಲ್ ಅವರ ತಾಯಿ ಮತ್ತು ಮಗಳು ಹಿಂದಿನ ಸೀಟಿನಲ್ಲಿ ಉಬರ್ ಕ್ಯಾಬ್ ಚಾಲಕನೊಂದಿಗೆ ಕುಳಿತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಮಹಿಳೆ ಕ್ಯಾಬ್‌ ಅನ್ನು ಚಲಾಯಿಸಿದ ವಿಡಿಯೊ ಇಲ್ಲಿದೆ ನೋಡಿ...

ವರದಿ ಪ್ರಕಾರ ಹೋನಿ ಪಿಪಲ್ ಕುಟುಂಬದೊಂದಿಗೆ ಗುರುಗ್ರಾಮದಿಂದ ದೆಹಲಿಗೆ ಹೋಗಲು ಕ್ಯಾಬ್‍ ಬುಕ್ ಮಾಡಿದ್ದರು. ಆದರೆ ನಿಗದಿಪಡಿಸಿದ ಕ್ಯಾಬ್‍ ಚಾಲಕನ ಆರೋಗ್ಯ ಹದಗೆಟ್ಟ ನಂತರ ಅವರು ಬುಕ್ ಮಾಡಿದ ಕ್ಯಾಬ್‍ಗೆ ಅವರೇ ಡ್ರೈವರ್‌ ಆಗಿದ್ದಾರೆ. ಚಾಲಕ ವಾಂತಿ ಮಾಡಿಕೊಂಡಾಗ ಕ್ಯಾಬ್‌ ಡ್ರೈವರ್‌ ಅನ್ನು ದೂರದೇ, ಯಾವುದೇ ಕಂಪ್ಲೆಂಟ್‌ ಮಾಡದೇ ಬದಲಿಗೆ ಅವರೇ ಕಾರನ್ನು ಚಲಾಯಿಸುವ ಮೂಲಕ ಡ್ರೈವರ್‌ ಬಗ್ಗೆ ಅನುಕಂಪ ತೋರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಅಪ್ಪ-ಮಗಳ ಸೂಪರ್‌ ಡ್ಯಾನ್ಸ್ ; ವಿಡಿಯೊ ವೈರಲ್

ಅವರು ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಕಾರ್ಯಕ್ಕೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಅವರ ಕ್ರಮವನ್ನು ಹೊಗಳಿದ್ದಾರೆ. "ಸಹೋದರಿ, ಮಾನವೀಯತೆ ತೋರಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ಒಬ್ಬರು ಹೇಳಿದ್ದಾರೆ. “ಪ್ರತಿಯೊಬ್ಬರೂ ಹೇಗೆ ವಾಹನ ಚಲಾಯಿಸಬೇಕೆಂದು ತಿಳಿದಿರಬೇಕು" ಎಂದು ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ತಮ್ಮ ಸ್ನೇಹಿತನಿಗೆ ದುಃಖದ ಸಮಯದಲ್ಲಿ ಇದೇ ರೀತಿ ಸಹಾಯ ಮಾಡಿದ್ದಾಗಿ ತಿಳಿಸಿದ್ದಾರೆ.