ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದುವೆಗೆ ಆಹ್ವಾನಿಸಿ ಬಾಲ್ಯ ಸ್ನೇಹಿತೆ ಬಳಿ  90,000 ರೂ. ಬೇಡಿಕೆ ಇಟ್ಟ ವಧು

ಮ್ಯಾಗನ್ ಎಂಬ ಮಹಿಳೆ ತನ್ನ ಬಾಲ್ಯ ಸ್ನೇಹಿತೆಗೆ ಮದುವೆಗೆ ಬರುವಂತೆ ಇಮೇಲ್ ಮೂಲಕ ಆಹ್ವಾನಿಸಿದ್ದಳು. ಸ್ನೇಹಿತೆಗೆ ಮದ್ವೆ ಫಿಕ್ಸ್ ಆಯ್ತು ಎಂದು ಖುಷಿ ಪಟ್ಟ ಸ್ವಲ್ಪ ಕ್ಷಣಕ್ಕೆ ಮೇಲ್ ನೋಡಿ ಅಘಾತಗೊಂಡಿದ್ದಾಳೆ. ಆಕೆಯ ಗೆಳತಿ ಇಮೇಲ್ ನಲ್ಲಿ ಮದುವೆಯ ವೆಚ್ಚದ ಪಟ್ಟಿಯನ್ನು ಸಹ ಸಿದ್ಧಪಡಿಸಿ 90,000 ರೂ. ಪಾವತಿಸಲು ಒತ್ತಾಯಿಸಿದ್ದಾಳೆ.

ಮದುವೆಗೆ ಆಹ್ವಾನಿಸಿ ಬಾಲ್ಯ ಸ್ನೇಹಿತೆ ಬಳಿ  90,000 ರೂ. ಬೇಡಿಕೆ ಇಟ್ಟ ವಧು

bride asks amount

Profile Pushpa Kumari Mar 24, 2025 10:39 PM

ನವದೆಹಲಿ: ಮದುವೆ ಎಂದಾಗ ಬಂಧು ಬಳಗ, ಸ್ನೇಹಿತರ ಸಂಗಮದಲ್ಲಿ ಮೈಮರೆಯುವುದೇ ಒಂದು ಹಬ್ಬ ಇದ್ದಂತೆ. ಹೀಗಾಗಿ ನಮ್ಮ ಪ್ರೀತಿ ಪಾತ್ರರನ್ನು ಮದುವೆಗೆ ಆಹ್ವಾನಿಸಿ ಖುಷಿ ಪಡುತ್ತೇವೆ. ಮದುವೆಗೆ ಕುಟುಂಬ ಸಮೇತರಾಗಿ ಬರ್ಲೇ ಬೇಕು ಎಂದು ರಿಕ್ವೆಸ್ಟ್ ಮಾಡುವ ಫ್ರೆಂಡ್ಸ್ ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮದುವೆಗೆ ಬರಲು 90,000 ರೂ. ಪಾವತಿಸುವಂತೆ ತನ್ನ  ಗೆಳತಿಯ ಬಳಿ ಬೇಡಿಕೆ ಇಟ್ಟಿದ್ದಾಳೆ (Viral News). ತನ್ನ ಬಾಲ್ಯ ಸ್ನೇಹಿತೆಯ ಮದುವೆಗೆ ಈ ಥರ ಆಹ್ವಾನ ಬರುತ್ತದೆ ಎಂದು ತಾನು ನಿರೀಕ್ಷೆ ಮಾಡಲಿಲ್ಲ ಎಂದು ವಧುವಿನ ಸ್ನೇಹಿತೆ ಈ ಬಗ್ಗೆ ಸಾಮಾಜಿಕ ಜಾಲತಾಣ ವಾದ ರೆಡ್ಡಿಟ್‌ನಲ್ಲಿ  ತನ್ನ ಅನುಭವ ಹಂಚಿಕೊಂಡಿದ್ದು, ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಮ್ಯಾಗನ್ ಎಂಬ ಮಹಿಳೆ ತನ್ನ ಬಾಲ್ಯ ಸ್ನೇಹಿತೆಗೆ ಮದುವೆಗೆ ಬರುವಂತೆ ಇಮೇಲ್ ಮೂಲಕ ಆಹ್ವಾನಿಸಿದ್ದಳು. ಸ್ನೇಹಿತೆಗೆ ಮದ್ವೆ ಫಿಕ್ಸ್ ಆಯ್ತು ಎಂದು ಖುಷಿ ಪಟ್ಟ ಸ್ವಲ್ಪ ಕ್ಷಣಕ್ಕೆ ಮೇಲ್ ನೋಡಿ ಅಘಾತಗೊಂಡಿದ್ದಾಳೆ. ಆಕೆಯ ಗೆಳತಿ ಇಮೇಲ್ ನಲ್ಲಿ ಮದುವೆಯ ವೆಚ್ಚದ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದು ಬ್ರೈಡ್ಸ್ ಮೇಡ್ ಪ್ಯಾಕೇಜ್ ಹಣ 90,000 ರೂ. ಪಾವತಿಸಲು ಒತ್ತಾಯಿಸಿದ್ದಾಳೆ. ಇದನ್ನು ಕಂಡು ವಧುವಿನ ಫ್ರೆಂಡ್ ಶಾಕ್ ಆಗಿದ್ದಾಳೆ.

ಬ್ರೈಡ್ಸ್ ಪ್ಯಾಕೇಜ್‌ನ ಅಡಿಯಲ್ಲಿ ಮ್ಯಾಗನ್ ತನ್ನ ಮದುವೆ ಉಡುಗೆಗೆ 42,000 ರೂ.,  ಹೇರ್ ಕಟ್ ಹಾಗೂ ಮೇಕಪ್‌ಗಾಗಿ 25,000 ರೂ.,  ಮದುವೆಯ ಉಡುಗೊರೆಯಾಗಿ 12,300 ರೂ., ಬ್ಯಾಚುಲರ್ ಪಾರ್ಟಿ ಠೇವಣಿಯಾಗಿ 8,500 ರೂ., ಇತರ ಸಣ್ಣ ಪುಟ್ಟ ವೆಚ್ಚಗಳು 4,200 ರೂ. ಪಾವತಿ ಮಾಡುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ಇಮೇಲ್ ಕಂಡ ವಧುವಿನ ಗೆಳತಿ ಶಾಖ್ ಆಗಿ ಆಕೆಯನ್ನು ಸಂಪರ್ಕಿಸಿದ್ದು, ಬಳಿಕ ಈ ಬಗ್ಗೆ ಮನವಿ ಸಹ ಮಾಡಿದ್ದಾಳೆ.

ಮ್ಯಾಗನ್ ಸಂಪರ್ಕಿಸಿ ತನ್ನ ಬಜೆಟ್‌ಗಿಂತಲೂ ನಿನ್ನ ಮದುವೆಯ ವೆಚ್ಚದ ಬೇಡಿಕೆ ದೊಡ್ಡ ಮಟ್ಟದ್ದಾಗಿದ್ದು ಇದನ್ನು ಭರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ಈ ವೇಳೆ ಆಕೆ ಇವೆಲ್ಲವೂ ನನ್ನ ಮದುವೆಗೆ ಅಗತ್ಯವಾದ ವೆಚ್ಚಗಳಾಗಿವೆ. ನಾನು ಇತರರಿಗಾಗಿ ನನ್ನ ಯೋಚನೆ ಬದಲಿಯಿಸಲಾರೆ. ಮದುವೆ ಬರುವ ಹಾಗಿದ್ದರೆ ಇಷ್ಟು ಮೊತ್ತ ಪಾವತಿ ಮಾಡಬೇಕು. ಇಲ್ಲವಾದರೆ ಬರುವ ಅಗತ್ಯವಿಲ್ಲ ಕಟುವಾಗಿ ಪ್ರತಿಕ್ರಿಯೆ ನೀಡಿ ತನ್ನ ತೀರ್ಮಾನ ಬದಲಾಯಿಸಲು ಸಂಪೂರ್ಣ ನಿರಾಕರಿಸಿದ್ದಾಳೆ.

ಇದನ್ನು ಓದಿ: Viral Video: ಹೆಚ್ಚುವರಿ ಹಣ ನೀಡುವಂತೆ ಪ್ರಯಾಣಿಕನಿಗೆ ಬೆದರಿಕೆ ಹಾಕಿದ ಆಟೋ ಡ್ರೈವರ್

ತನ್ನ ಬಾಲ್ಯ ಸ್ನೇಹಿತೆಯ ಮದುವೆಗೆ ಈ ತರ ಆಹ್ವಾನ ಬರುತ್ತದೆ ಎಂದು ತಾನು ನಿರೀಕ್ಷೆ ಮಾಡಲಿಲ್ಲ ಎಂದು ವಧುವಿನ ಸ್ನೇಹಿತೆ ಈ ಬಗ್ಗೆ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ  ತನ್ನ ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಇದು ಸ್ನೇಹವಲ್ಲ ಹಣದ ವ್ಯಾಮೋಹ ಅಷ್ಟೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಮದುವೆಗೆ ಬಂದು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುವ ಸ್ನೇಹಿತೆಯನ್ನು ನೋಡಿದ್ದೇವೆ. ಆದರೆ ಮದುವೆಗೆ ಬರುವ ಮೊದಲೇ ಹಣ ನೀಡಬೇಕು ಎಂಬ ಡಿಮ್ಯಾಂಡ್ ವಿಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.