Viral News: ಚಪ್ಪಲಿ ಕಳ್ಳತನ ನಿಲ್ಲಿಸಲು ಈ ಹೋಟೆಲ್‌ನ ಮಾಸ್ಟರ್ ಪ್ಲಾನ್; ನೆಟ್ಟಿಗರು ಏನಂದ್ರು ನೋಡಿ
ಮುಂಬೈನ ಹೋಟೆಲ್‌ನೊಂದು ಚಪ್ಪಲಿ ಕಳ್ಳತನವನ್ನು ಕೊನೆಗೊಳಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದು, ಇದು ಈಗ ಫುಲ್ ವೈರಲ್ ಆಗಿದೆ. ಈ ಹೋಟೆಲ್ ಬೇರೆ ಬೇರೆ ವಿನ್ಯಾಸ ಹಾಗೂ ಕಂಪನಿಯ ಬಾತ್‌ರೂಂ ಚಪ್ಪಲಿಗಳನ್ನು ಒದಗಿಸುತ್ತದೆ. ಈ ಮೂಲಕ ಗ್ರಾಹಕರು ಚಪ್ಪಲಿಗಳನ್ನು ಕದಿಯುವುದನ್ನು ತಡೆಗಟ್ಟಿದೆ.


ಮುಂಬೈ: ಮದುವೆ ಮನೆಗಳಲ್ಲಿ ಇಲ್ಲಾ ಜನಜಂಗುಳಿ ಇದ್ದಾಗ ಚಪ್ಪಲಿಗಳು ಕಳ್ಳತನವಾಗುವುದು ಸಾಮಾನ್ಯ. ಆದರೆ ಕೆಲ ಹೋಟೆಲ್ ಗಳಲ್ಲಿಯೂ ಚಪ್ಪಲಿಗಳನ್ನು ಚಪ್ಪಲಿಗಳನ್ನು ಕದಿಯಲಾಗುತ್ತದೆ. ಆದರೆ ಮುಂಬೈನ ಹೋಟೆಲ್‌ನೊಂದು ಚಪ್ಪಲಿ ಕಳ್ಳತನವನ್ನು ಕೊನೆಗೊಳಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದು, ಇದು ಈಗ ಫುಲ್ ವೈರಲ್ ಆಗಿದೆ. ಈ ಹೋಟೆಲ್ ಬೇರೆ ಬೇರೆ ವಿನ್ಯಾಸ ಹಾಗೂ ಕಂಪನಿಯ ಬಾತ್‌ರೂಂ ಚಪ್ಪಲಿಗಳನ್ನು ಒದಗಿಸುತ್ತದೆ. ಈ ಮೂಲಕ ಗ್ರಾಹಕರು ಚಪ್ಪಲಿಗಳನ್ನು ಕದಿಯುವುದನ್ನು ತಡೆಗಟ್ಟಿದೆ. ಇವುಗಳನ್ನು ರೂಂ ನಲ್ಲಿ ಬಳಸಬಹುದೇ ವಿನಃ ಹೊರಗಡೆ ಹಾಕಿಕೊಂಡು ಹೋಗಲು ಸಾಧ್ಯವಿಲ್ಲ. ಸದ್ಯ ಚಪ್ಪಲಿ ಕಳ್ಳತನ ತಪ್ಪಿಸಲು ಹೋಟೆಲ್ ಮಾಡಿದ ಈ ಐಡಿಯಾ ಎಲ್ಲಡೆ ವೈರಲ್ (Viral News) ಆಗಿದೆ.
ವೈರಲ್ ಆದ ಈ ಪೋಸ್ಟ್‌ನಲ್ಲಿರುವ ಹೋಟೆಲ್ ಮುಂಬೈನಲ್ಲಿದೆ ಎಂದು ಹೇಳಲಾಗಿದೆ. ಫೋಟೋದಲ್ಲಿ ಸ್ನಾನಗೃಹದ ಬಾಗಿಲಿನ ಮುಂದೆ ಎರಡು ಪಾದರಕ್ಷೆಗಳನ್ನು ಇರಿಸಲಾಗಿತ್ತು, ಒಂದು ಆಲಿವ್ ಹಸಿರು ಮತ್ತು ಒಂದು ಕಿತ್ತಳೆ ಕಂದು ಬಣ್ಣದ ಚಪ್ಪಲಿ ಜೋಡಿ. ತೇಜಸ್ವಿ ಉಡುಪ ಎಂಬ ಎಕ್ಸ್ ಬಳಕೆದಾರರು ಹೋಟೆಲ್‌ನ ಈ ಆಸಕ್ತಿದಾಯಕ ಹ್ಯಾಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಬಾಂಬೆ ಹೋಟೆಲ್ ಬಾತ್ರೂಮ್ ಚಪ್ಪಲಿಗಳನ್ನು ಒದಗಿಸುತ್ತದೆ. ಆದರೆ ಜನರು ಅವುಗಳನ್ನು ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳಲು ಅವರು ಹೊಂದಿಕೆಯಾಗದ ಜೋಡಿಗಳನ್ನು ಒದಗಿಸುತ್ತಾರೆ ಎಂದು ಅವರು ಬರೆದಿದ್ದಾರೆ. ಕೆಂಪು ಬಣ್ಣದಲ್ಲಿ "AKINT" ಎಂದು ಕಸೂತಿ ಮಾಡಿದ ಗಾಢ ಬೂದು ಬಣ್ಣದ ಬಾತ್ ಮ್ಯಾಟ್ ಮೇಲೆ ಅಚ್ಚುಕಟ್ಟಾಗಿ ಇರಿಸಲಾದ ಎರಡೂ ಪಾದರಕ್ಷೆಗಳನ್ನು ಚಿತ್ರ ಸೆರೆಹಿಡಿಯಲಾಗಿದೆ.
This Bombay hotel provides bathroom slippers. But to ensure people don't flick them, they provide mismatched pairs. pic.twitter.com/zwAUMoPITI
— Thejaswi Udupa (@udupendra) February 28, 2025
ಈ ಸುದ್ದಿಯನ್ನೂ ಓದಿ: Viral News: ಸಿಕ್ಕಾಪಟ್ಟೆ ವೈರಲ್ ಆಯ್ತು ತಂದೆ ಮಗನ ಅಗ್ರಿಮೆಂಟ್- ಅಂತಹದ್ದೇನಿದೆ ಇದ್ರಲ್ಲಿ?
ಈ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್ ಮಾಡಿದ್ದು, ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಕದಿಯುವುದನ್ನು ತಪ್ಪಿಸಲು ಹೋಟೆಲ್ ಮಾಡಿರುವ ಈ ಐಡಿಯಾವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಏತನ್ಮಧ್ಯೆ, ಕೆಲವು ಬಳಕೆದಾರರು ಪಾದರಕ್ಷೆಗಳು ಹೊಂದಿಕೆಯಾಗದಿದ್ದರೂ ಸಹ ಅವುಗಳನ್ನು ಕದಿಯಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದು, ಮನೆಗಳಲ್ಲಿ ಅವುಗಳನ್ನು ಬಳಸಬಹುದು ಎಂದು ಸೂಚಿಸಿದ್ದಾರೆ. ಇನ್ನೂ ಕೆಲವರು "ಈ ಐಡಿಯಾ ಒಳ್ಳೆಯದೇ, ಆದರೆ ಕೆಲವರು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ ಅವರು ಬಯಸಿದರೆ ಪ್ರಯೋಜನ ಪಡೆಯಬಹುದು ಎಂದು ಹೇಳಿದ್ದಾರೆ.