Viral Video: ಕಾಫಿ ಪ್ರಿಯರೇ...ಈ ಕಾಫಿ ನಿಮಗೂ ಕೂಡ ಇಷ್ಟವಾಗಬಹುದು-ಒಮ್ಮೆ ಟ್ರೈ ಮಾಡಿ!
ಚೀನಾದ ಕೆಫೆಯೊಂದು ಸಾಂಪ್ರದಾಯಿಕ ಮಗ್ ಬದಲಿಗೆ ಕಮಲದ ಎಲೆಯಲ್ಲಿ ಕಾಫಿಯನ್ನು ನೀಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವೈರಲ್ ವಿಡಿಯೊಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಈ ಕಾಫಿ ತಯಾರಿಕೆಯ ಫುಲ್ ವಿಡಿಯೊ ಇಲ್ಲಿದೆ ಮಿಸ್ ಮಾಡದೇ ನೋಡಿ.


ಬೀಜಿಂಗ್: ಇಂದಿನ ದಿನಗಳಲ್ಲಿ ವಿಚಿತ್ರವಾದ ಆಹಾರ ತಯಾರಿಕೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಾಫಿ ನೀಡುವ ಹೊಸ ತಂತ್ರವೊಂದು ವೈರಲ್ ಆಗಿದೆ. ಸಾಮಾನ್ಯವಾಗಿ ಎಲ್ಲರೂ ಕಾಫಿ, ಚಹಾವನ್ನು ಕಪ್ ಅಥವಾ ಲೋಟಗಳಲ್ಲಿ ಕುಡಿಯುತ್ತಾರೆ. ಆದರೆ ಚೀನಾದ ಕೆಫೆಯೊಂದು ಸಾಂಪ್ರದಾಯಿಕ ಮಗ್ ಬದಲಿಗೆ ಕಮಲದ ಎಲೆಯಲ್ಲಿ ಕಾಫಿಯನ್ನು ನೀಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್(Viral Video) ವಿಡಿಯೊ ಕಂಡು ಕೆಲವು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಎಲೆಯಲ್ಲಿ ಹೇಗೆ ಕಾಫಿ ನೀಡುತ್ತಾರೆ ಎಂಬ ಕುತೂಹಲ ನಿಮಗೂ ಇದೆಯಾ....? ಏನಿದು, ಇದರ ರುಚಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ ಓದಿ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಈ ಕಾಫಿಯ ವಿಡಿಯೊ ನೋಡುವುದಕ್ಕೆ ಕೂಡ ವಿಚಿತ್ರವಾಗಿದೆ. ಫ್ರೆಶ್ ಆಗಿ ತಯಾರಿಸಿದ ಕಾಫಿಯನ್ನು ದೊಡ್ಡದಾದ ಹಸಿರು ಬಣ್ಣದ ಕಮಲದ ಎಲೆಯ ಮೇಲೆ ಸುರಿದಿದ್ದಾರೆ.ಈ ಬಿಸಿ ಬಿಸಿ ಕಾಫಿ ಡಿಕಾಕ್ಷನ್‌ಗೆ ಕನೆಭರಿತವಾದ ಹಾಲನ್ನು ನಿಧಾನಕ್ಕೆ ಹಾಕಿದ್ದಾರೆ. ಇದು ನೋಡುವುದಕ್ಕೆ ಎಲೆಯ ಮೇಲೆ ಯಾರೋ ಡಿಸೈನ್ ಮಾಡಿದ ಹಾಗೇ ಕಾಣುತ್ತದೆ.ಈ ಕಮಲದ ಎಲೆಯ ಕಾಫಿ, ಇತರ ಕಾಫಿಗಿಂತ ಭಿನ್ನವಾಗಿದೆ. ಇದನ್ನು ಎಲೆಯ ಮೂಲಕ ಕುಡಿಯಲಾಗುತ್ತದೆಯಂತೆ. ಅದೂ ಅಲ್ಲದೇ ಕಾಫಿಯ ಜೊತೆಗೆ ಕಮಲದ ಎಲೆಯ ಪರಿಮಳ ಸೇರಿ ಈ ಕಾಫಿಯ ರುಚಿ ಅದ್ಭುತವಾಗಿರುತ್ತದೆಯಂತೆ.
ಈ ಕಾಫಿ ತಯಾರಿಸುವ ವಿಡಿಯೊ ಇಲ್ಲಿದೆ ನೋಡಿ...
ಹಾಗೇ ಕಾಫಿ ಪ್ರಿಯರಿಗೆ ಇದನ್ನು ಹೇಗೆ ನೀಡಲಾಗುತ್ತದೆ ಎಂಬುದು ಕೂಡ ವಿಡಿಯೊದಲ್ಲಿದೆ. ಕಾಫಿ ಪ್ರಿಯರು ಈ ಕಮಲದ ಎಲೆಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಕಾಫಿ ನೀಡುತ್ತಾರಂತೆ. ಹಾಗಂತ ಈ ಕಾಫಿಯನ್ನು ಗಡಿಬಿಡಿಯಲ್ಲಿ ನೀಡಬಾರದಂತೆ.ಈ ಕಾಫಿ ಚೆಲ್ಲದಂತೆ ಬಹಳ ಎಚ್ಚರಿಕೆಯಿಂದ ಗಾಜಿನ ಲೋಟದ ಮೇಲೆ ಇರಿಸಲಾಗುತ್ತದೆ. ಈ ವಿಶಿಷ್ಟ ಕಾಫಿಯನ್ನು ಸುಲಭವಾಗಿ ಸಿಪ್ ಮಾಡಲು ಮತ್ತು ಆನಂದಿಸಲು ಗ್ರಾಹಕರಿಗೆ ಸ್ಟ್ರಾವನ್ನು ಕೂಡ ನೀಡುತ್ತಾರೆ. ಈ ತರಹದ ಕಾಫಿಯನ್ನು ಕುಡಿಯಲು ನೆಟ್ಟಿಗರು ಬಯಸುತ್ತಾರೆಯೇ? ಎಂದು ಈ ವಿಡಿಯೊದಲ್ಲಿ ಪ್ರಶ್ನಿಸಲಾಗಿದೆ. ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಒಬ್ಬರು "ನಾನು ಅದನ್ನು ಪ್ರಯತ್ನಿಸುತ್ತೇನೆ" ಎಂದು ಹೇಳಿದರೆ , ಇನ್ನೊಬ್ಬರು ಅದರ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಈ ವಿಚಿತ್ರ ಪಾಕವಿಧಾನದ ವಿಡಿಯೊ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಆರು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿದೆ.
ಈ ಸುದ್ದಿಯನ್ನೂ ಓದಿ:Viral News: ಇದೆಂಥಾ ಕೊನೆಯಾಸೆ ನೋಡಿ? ಚಾಕೋಲೇಟ್ ಶವಪಟ್ಟಿಗೆಯಲ್ಲಿ ಮಣ್ಣಾದ ಪಾಲ್ ಬ್ರೂಮ್
ಚೀನಾದಲ್ಲಿ ವಿಶಿಷ್ಟ ರೀತಿಯಲ್ಲಿ ಕಾಫಿ ತಯಾರಿಸುವ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಚೀನಾದಲ್ಲಿ ಕಾಫಿ ತಯಾರಿಸಲು ವಿಭಿನ್ನ ಪದಾರ್ಥಗಳನ್ನು ಬಳಸಿದ್ದರು. ಇದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದರು. ಈ ವೈರಲ್ ಕಾಫಿಗೆ ಸ್ಪ್ರಿಂಗ್ ಈರುಳ್ಳಿ, ಐಸ್ ಕ್ಯೂಬ್‍ಗಳ ತುಂಡುಗಳು, ಹಾಲು ಮತ್ತು ಕಾಫಿ ಪುಡಿಯನ್ನು ಸೇರಿಸಲಾಗಿದೆ. ಕೊನೆಯದಾಗಿ, ಅಲಂಕಾರವಾಗಿ ಕೆಲವು ಸ್ಕಾಲಿಯನ್‍ಗಳನ್ನು ಮೇಲ್ಭಾಗದಲ್ಲಿ ಸಿಂಪಡಿಸಿದ್ದರಂತೆ. ಇದನ್ನು ನೋಡಿ ನೆಟ್ಟಿಗರು ಮುಖ ಕಿವುಚಿಕೊಂಡಿದ್ದರಂತೆ.