ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೊಹ್ಲಿಗೆ ಟಾಂಗ್‌ ಕೊಟ್ಟ ಶುಭಮನ್‌ ಗಿಲ್‌

ಗುಜರಾತ್ ಬ್ಯಾಟಿಂಗ್ ವೇಳೆ ಶುಭಮನ್‌ ಗಿಲ್‌ ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದಾಗ ಕೊಹ್ಲಿ ಅಗ್ರೆಸ್ಸಿವ್ ಆಗಿ ಸಂಭ್ರಮಿಸಿದ್ದರು. ಹೀಗಾಗಿ ಪಂದ್ಯದ ಬಳಿಕ ಗಿಲ್ ಅವರು ಕೊಹ್ಲಿಗೆ ಟಾಂಗ್‌ ಕೊಟ್ಟಂತಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

IPL 2025: ಕೊಹ್ಲಿಗೆ ಟಾಂಗ್‌ ಕೊಟ್ಟ ಶುಭಮನ್‌ ಗಿಲ್‌

Profile Abhilash BC Apr 3, 2025 1:46 PM

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 25 ಸಾವಿರಕ್ಕೂ ಹೆಚ್ಚು ನೆರೆದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಗುಜರಾತ್‌ ಟೈಟಾನ್ಸ್‌(RCB vs GT) ತಂಡ ನಿರಾಸೆ ಉಂಟುಮಾಡಿತ್ತು. ಆರ್‌ಸಿಬಿ(RCB)ಯನ್ನು 8 ವಿಕೆಟ್‌ ಅಂತರದಿಂದ ಮಣಿಸಿ ಗೆದ್ದು ಬೀಗಿತ್ತು. ಪಂದ್ಯದ ಗೆಲುವಿನ ಬಳಿಕ ನಾಯಕ ಶುಭಮನ್‌ ಗಿಲ್‌(Shubman Gill) ಮಾಡಿದ ಟ್ವೀಟ್‌ ಒಂದು ಇದೀಗ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಆರ್‌ಸಿಗೆ ತವರಿನ ಪಂದ್ಯವಾದ ಕಾರಣ ತಂಡದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರು. ಪಂದ್ಯದುದ್ದಕ್ಕೂ ಮೈದಾನದಲ್ಲಿ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿದ್ದರು. ಆದರೆ ಪಂದ್ಯದ ಬಳಿಕ ತಮ್ಮ ಅಧಿಕೃತ ಟ್ವೀಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಶುಭಮನ್‌ ಗಿಲ್‌ 'ಪಂದ್ಯದ ಮೇಲಷ್ಟೇ ಗಮನ.. ಕೂಗಾಟ.. ಚೀರಾಟದ ಮೇಲಲ್ಲ..' (Eyes on the game, not the noise) ಎಂದು ತಂಡದ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.



ಗುಜರಾತ್ ಬ್ಯಾಟಿಂಗ್ ವೇಳೆ ಶುಭಮನ್‌ ಗಿಲ್‌ ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದಾಗ ಕೊಹ್ಲಿ ಅಗ್ರೆಸ್ಸಿವ್ ಆಗಿ ಸಂಭ್ರಮಿಸಿದ್ದರು. ಹೀಗಾಗಿ ಪಂದ್ಯದ ಬಳಿಕ ಗಿಲ್ ಅವರು ಕೊಹ್ಲಿಗೆ ಟಾಂಗ್‌ ಕೊಟ್ಟಂತಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.



ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ 169 ರನ್ ಬಾರಿಸಿತು. ಗುರಿ ಬೆನ್ಬಟ್ಟಿದ ಗುಜರಾತ್‌ 17.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ನಷ್ಟಕ್ಕೆ 170 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2025: ಇಬ್ಬರು ದಿಗ್ಗಜ ಆಟಗಾರರ ದಾಖಲೆ ಸರಿಗಟ್ಟಿದ ಭುವನೇಶ್ವರ್‌

ಆರ್‌ಸಿಬಿಗೆ ಇದು ತವರಿನಲ್ಲಿ ಎದುರಾದ 44ನೇ ಸೋಲಾಗಿದೆ. ತವರಿನಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿದೆ. ಇದುವರೆಗೂ ತವರಿನಲ್ಲಿ ಅತ್ಯಧಿಕ ಬಾರಿ ಸೋಲು ಕಂಡ ದಾಖಲೆ ಡೆಲ್ಲಿ ತಂಡದ ಹೆಸರಿನಲ್ಲಿತ್ತು. ಡೆಲ್ಲಿ 82 ಪಂದ್ಯಗಳಲ್ಲಿ 44 ಸೋಲು ಕಂಡಿತ್ತು. ಇದೀಗ ಆರ್‌ಸಿಬಿ ಕೂಡ 44 ಸೋಲಿನಿಂದಿಗೆ ಡೆಲ್ಲಿ ಜತೆ ಜಂಟಿ ಅಗ್ರಸ್ಥಾನ ಪಡೆದಿದೆ. 86 ಪಂದ್ಯಗಳಲ್ಲಿ 33 ಪಂದ್ಯ ಸೋತ ಮುಂಬೈ 2ನೇ ಸ್ಥಾನದಲ್ಲಿದ್ದರೆ, 60 ಪಂದ್ಯಗಳಲ್ಲಿ 30 ಪಂದ್ಯ ಸೋತ ಪಂಜಾಬ್‌ ಕಿಂಗ್ಸ್‌ ಮೂರನೇ ಸ್ಥಾನದಲ್ಲಿದೆ.