ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಸಾಲಗಾರರ ಕಾಟಕ್ಕೆ ಬೇಸತ್ತು ಅಂಗಾಂಗ ಮಾರಾಟಕ್ಕೆ ಮುಂದಾದ ರೈತ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಮಹಾರಾಷ್ಟ್ರದ ವಾಶಿಮ್‍ನ ರೈತ ಸತೀಶ್ ಐಡೋಲ್ ತನ್ನ ಸಾಲವನ್ನು ಮರುಪಾವತಿಸಲು ತನ್ನ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಸಾಮಾನ್ಯ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾನೆ. ಈ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಾಲದ ಸುಳಿಗೆ ಸಿಲುಕಿ ಅಂಗಾಂಗ ಮಾರಾಟಕ್ಕೆ ಮುಂದಾದ ರೈತ

Profile pavithra Apr 3, 2025 4:47 PM

ಮುಂಬೈ: ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ಸಾಲದ ಹೊರೆಯಿಂದ ಕಂಗೆಟ್ಟು ಅದೆಷ್ಟೊ ಮಂದಿ ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಇದೀಗ ಮಹಾರಾಷ್ಟ್ರದ ವಾಶಿಮ್‍ನ ರೈತನೊಬ್ಬ ತನ್ನ ಸಾಲವನ್ನು ಮರುಪಾವತಿಸಲು ತನ್ನ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗುವ ಮೂಲಕ ಅಸಾಮಾನ್ಯ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾನೆ. ಸಾಲದ ಹೊರೆ ತಾಳಲಾರದೇ ಆತ ಈ ರೀತಿ ಮಾಡಿದ್ದಾನಂತೆ. ಈ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಕೃಷಿ ಸಾಲ ಮನ್ನಾ ಮಾಡುವ ರಾಜ್ಯ ಸರ್ಕಾರದ ಈಡೇರದ ಭರವಸೆಯಿಂದ ಹತಾಶನಾದ ಅಡೋಲಿ ಗ್ರಾಮದ ನಿವಾಸಿ ಸತೀಶ್ ಐಡೋಲೆ ತನ್ನ ದೇಹದ ಭಾಗಗಳಿಗೆ ಬೆಲೆಗಳನ್ನು ಪಟ್ಟಿ ಮಾಡುವ ಫಲಕವನ್ನು ಕುತ್ತಿಗೆಯಲ್ಲಿ ನೇತುಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾನೆ. ಅವನ ಪ್ರತಿಭಟನೆಯು ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧವಾಗಿತ್ತು ಎನ್ನಲಾಗಿದೆ. ಈ ಸರ್ಕಾರ ಚುನಾವಣೆಗೆ ಮೊದಲು ರೈತರಿಗೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಂತರ ರೈತರು ತಮ್ಮ ಸಾಲಗಳನ್ನು ತಾವೇ ಮರುಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಹಾಗಾಗಿ ಈ ರೈತ ಈ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾನೆ.

ಅಂಗಾಂಗ ಮಾರಾಟ ಮಾಡಲು ಮುಂದಾದ ರೈತನ ವಿಡಿಯೊ ಇಲ್ಲಿದೆ



ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ , ಐಡೋಲ್ ವಾಶಿಮ್‍ನ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆತ ರೈತರ ಅಂಗಗಳನ್ನು ಖರೀದಿಸಿ ಎಂಬ ಫಲಕದೊಂದಿಗೆ ನಡೆದಿದ್ದಾನೆ. ತನ್ನ ಕಿಡ್ನಿಗಳನ್ನು 75,000 ರೂ.ಗೆ, ತನ್ನ ಲಿವರ್‌ ಅನ್ನು 90,000 ರೂ.ಗೆ ಮತ್ತು ಕಣ್ಣುಗಳನ್ನು 25,000 ರೂ.ಗೆ ಪಟ್ಟಿ ಮಾಡಿದ್ದಾನಂತೆ. ಅಷ್ಟೇ ಅಲ್ಲದೇ ಈ ರೈತ ತನ್ನ ಕುಟುಂಬದವರ ಅಂಗಾಂಗಗಳ ಮೇಲೂ ಬೆಲೆ ಟ್ಯಾಗ್ ಹಾಕಿದ್ದಾನೆ ಎನ್ನಲಾಗಿದೆ. ಆತ ತನ್ನ ಹೆಂಡತಿಯ ಕಿಡ್ನಿಗಳನ್ನು 40,000 ರೂ.ಗೆ, ಮಗನ ಕಿಡ್ನಿಗಳನ್ನು 20,000 ರೂ.ಗೆ ಮತ್ತು ಕಿರಿಯ ಮಗುವಿನ ಕಿಡ್ನಿಗಳನ್ನು 10,000 ರೂ.ಗೆ ನೀಡುವ ಮೂಲಕ ಅವನು ತಮ್ಮ ಕುಟುಂಬದ ಅಂಗಾಂಗಗಳಿಗೆ ಬೆಲೆ ನಿಗದಿಪಡಿಸಿದ್ದಾನೆ ಎಂದು ವರದಿಯಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರವನ್ನು ಸಲ್ಲಿಸಿದ ಐಡೋಲ್, ಸರ್ಕಾರವು ತನ್ನ ಬೇಡಿಕೆಯನ್ನು ಗೌರವಿಸುವಂತೆ ಒತ್ತಾಯಿಸಿದ್ದಾನೆ. ಸಾಲವನ್ನು ಮರುಪಾವತಿಸಲು ಯಾವುದೇ ಮಾರ್ಗವಿಲ್ಲದ ಕಾರಣ, ಆತ್ಮಹತ್ಯೆಯೊಂದೆ ಮಾರ್ಗ ಉಳಿದಿದೆ ಎಂದು ತಿಳಿಸಿದ್ದಾನೆ. ಕೇವಲ ಎರಡು ಎಕರೆ ಭೂಮಿಯನ್ನು ಹೊಂದಿದ್ದ ಅವನು ಮಹಾರಾಷ್ಟ್ರ ಬ್ಯಾಂಕಿನಿಂದ ಸಾಲ ಪಡೆದಿದ್ದನು. ಆದರೆ ಅವನ ಬೆಳೆಗಳಿಗೆ ಕಡಿಮೆ ಆದಾಯ ಬಂದ ಕಾರಣ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲವಂತೆ.

ಈ ಸುದ್ದಿಯನ್ನೂ ಓದಿ:Viral Video: ವಿದ್ಯಾರ್ಥಿನಿಯರನ್ನು ಅಮಾನುಷವಾಗಿ ಥಳಿಸಿದ ಪ್ರಿನ್ಸಿಪಾಲ್‌; ಶಾಕಿಂಗ್‌ ವಿಡಿಯೊ ವೈರಲ್‌

ರೈತರು ತಮ್ಮ ಸಾಲಗಳಿಗೆ ಜವಾಬ್ದಾರರಾಗಿರಬೇಕು ಮತ್ತು ಸರ್ಕಾರ ಅವುಗಳನ್ನು ಮನ್ನಾ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಇತ್ತೀಚಿಗೆ ಹೇಳಿಕೆಯೊಂದನ್ನು ನೀಡಿದ್ದರು. ಈ ನಿಲುವನ್ನು ಟೀಕಿಸಿದ ಐಡೋಲ್, "7/12 ದಾಖಲೆಗಳನ್ನು ತೆರವುಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತು, ಆದರೆ ಈಗ ಅವರು ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ. ಸೋಯಾಬೀನ್ ಪ್ರತಿ ಕ್ವಿಂಟಾಲ್‌ಗೆ ಕೇವಲ 3,000 ರೂ.ಗೆ ಮಾರಾಟವಾಗುತ್ತದೆ. ರೈತರನ್ನು ವಂಚಿಸಲಾಗುತ್ತಿದೆ, ಮತ್ತು ಕೃಷಿ ಉತ್ಪನ್ನಗಳಿಗೆ ಇನ್ನೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಆತ ಬೇಸರ ವ್ಯಕ್ತಪಡಿಸಿದ್ದಾನೆ.