ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ- ನಡುರಸ್ತೆಯಲ್ಲಿ ಸರ್ಕಾರಿ ಅಧಿಕಾರಿ ಪತ್ನಿಯ ಪುಂಡಾಟ- ವಿಡಿಯೊ ಇದೆ

ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ವಾಹನದಿಂದ ಹೊರಬಂದು ಟ್ರ್ಯಾಕ್ಟರ್ ಚಾಲಕನ ಮೇಲೆ ಕಿರುಚಾಡಿ ಆತನ ಕಾಲರ್‌ ಪಟ್ಟಿ ಹಿಡಿದು ಎಳೆದಾಡಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರದ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಟ್ರ್ಯಾಕ್ಟರ್ ಚಾಲಕನಿಗೆ ಸರ್ಕಾರಿ ಅಧಿಕಾರಿಯ ಪತ್ನಿ ಮಾಡಿದ್ದೇನು ಗೊತ್ತಾ?

Profile pavithra Mar 25, 2025 8:52 AM

ಲಖನೌ: ಉತ್ತರ ಪ್ರದೇಶದ ಹಮೀರ್ಪುರದ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ವಾಹನದಿಂದ ಹೊರಬಂದು ಟ್ರ್ಯಾಕ್ಟರ್ ಚಾಲಕನ ಮೇಲೆ ಕಿರುಚಾಡಿ ಆತನ ಕಾಲರ್‌ ಪಟ್ಟಿ ಹಿಡಿದು ಎಳೆದಾಡಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಗಲಾಟೆ ಮಾಡಿದ ಮಹಿಳೆಯನ್ನು ಹಿರಿಯ ಜಿಲ್ಲಾ ಮಟ್ಟದ ಅಧಿಕಾರಿಯ (ಡಿಎಂ ಜಿಐಸಿ) ಪತ್ನಿ ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ತನ್ನ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕೋಪಗೊಂಡ ಆಕೆ ಟ್ರ್ಯಾಕ್ಟರ್ ಚಾಲಕನ ಕಾಲರ್ ಅನ್ನು ಹಿಡಿದು ರಸ್ತೆಯ ಮಧ್ಯದಲ್ಲಿ ಕೂಗಾಡುತ್ತಾ ಅವನನ್ನು ಹೊಡೆದಿದ್ದಾಳೆ. ಕೈಗಾರಿಕಾ ಇಲಾಖೆಯ ಉಪ ಆಯುಕ್ತ ರವಿ ವರ್ಮಾನ ಪತ್ನಿ ಟ್ರ್ಯಾಕ್ಟರ್ ಚಾಲಕನ ಕಾಲರ್‌ ಪಟ್ಟಿ ಹಿಡಿದು ಗಲಾಟೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಮಹಿಳೆ ತನ್ನ ತಂದೆಯ ಜೊತೆ ಕಾನ್ಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ರಾಣಿ ಲಕ್ಷ್ಮಿಬಾಯಿ ತಿರಾಹಾ ಬಳಿ ಟ್ರ್ಯಾಕ್ಟರ್‌ವೊಂದು ಅವಳ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಹಿಂಭಾಗ ಡ್ಯಾಮೇಜ್‌ ಆಗಿದೆ ಎಂದು ವರದಿಯಾಗಿದೆ. ಟ್ರ್ಯಾಕ್ಟರ್ ತನ್ನ ವಾಹನಕ್ಕೆ ಡಿಕ್ಕಿ ಹೊಡೆದದ್ದು ನೋಡಿ ಸಿಕ್ಕಾಪಟ್ಟೆ ಕೋಪಗೊಂಡ ಮಹಿಳೆ ಕಾರಿನಿಂದ ಇಳಿದು, ಟ್ರ್ಯಾಕ್ಟರ್ ಚಾಲಕನ ಕಾಲರ್‌ ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಈಕೆಯ ಗಲಾಟೆಯಿಂದ ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ಟ್ರಾಫಿಕ್ ಜಾಮ್‍ಗೆ ಕಾರಣವಾಯಿತು.

ಟ್ರ್ಯಾಕ್ಟರ್ ಚಾಲಕನ ಜೊತೆ ಮಹಿಳೆ ಜಗಳವಾಡಿದ ವಿಡಿಯೊ ಇಲ್ಲಿದೆ ನೋಡಿ...



ಈ ಬಗ್ಗೆ ಎರಡೂ ಕಡೆಗಳಿಂದ ಯಾವುದೇ ರೀತಿಯ ಅಧಿಕೃತ ದೂರು ದಾಖಲಾಗಿಲ್ಲವಂತೆ, ಪರಸ್ಪರ ಚರ್ಚೆ ಮತ್ತು ಇತ್ಯರ್ಥದ ನಂತರ ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಎಂದು ಹೇಳಲಾಗಿದೆ. ಟ್ರ್ಯಾಕ್ಟರ್ ಮಾಲೀಕ ಕಾರಿಗೆ ಉಂಟಾದ ಹಾನಿಯನ್ನು ಸರಿದೂಗಿಸಿದ ನಂತರ, ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡು ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯಲ್ಲಿ ಯಾರು ಗಾಯಗೊಂಡಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪ್ಲಾಟ್‍ಫಾರ್ಮ್‍ನಲ್ಲಿ ನಿಂತು ರೈಲಿನೊಳಗಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಮಹಿಳೆಯರು ವಾಹನ ಚಾಲಕರಿಗೆ ಥಳಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣ ದರ ಹೆಚ್ಚು ಕೇಳಿದ್ದಕ್ಕೆ ಮಹಿಳೆಯೊಬ್ಬಳು ಆಟೋ ಚಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾಳೆ. ಮಹಿಳೆ ಥಳಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ, ಮಹಿಳೆ ಆಟೋ ಚಾಲಕನ ಕಾಲರ್ ಹಿಡಿದು ಆಟೋದಿಂದ ಇಳಿಯುವಂತೆ ಹೇಳಿದ್ದಾಳೆ. ಇಳಿದ ನಂತರ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ವರದಿ ಪ್ರಕಾರ ಮಹಿಳೆಯನ್ನು ಡ್ರಾಪ್ ಮಾಡಿದ ನಂತರ ಹೆಚ್ಚಿಗೆ ಶುಲ್ಕ ಕೇಳಿದ್ದಕ್ಕೆ ಈ ವಿವಾದ ಶುರುವಾಗಿತ್ತು ಎನ್ನಲಾಗಿದೆ.