Donald Trump: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸನ್ನು ನನಸು ಮಾಡಿದ ಡೊನಾಲ್ಡ್ ಟ್ರಂಪ್!
ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗಬೇಕು ಎಂಬ ಕನಸನ್ನು ಅಮೆರಿಕಾದ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ನನಸು ಮಾಡಿದ್ದಾರೆ. ಈ ಬಾಲಕ ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ ತನ್ನ ಆಸೆಯನ್ನು ಪೂರೈಸಿಕೊಂಡನು.ಬಾಲ್ಯದಿಂದಲೇ ಪೊಲೀಸ್ ಆಗಬೇಕು ಎಂದುಕೊಂಡಿದ್ದ13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಆಸೆಯನ್ನು ಡೊನಾಲ್ಡ್ ಟ್ರಂಪ್ ಈಡೇರಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ದೇವರ್ಜಯೇ ಡಿಜೆ ಡೇನಿಯಲ್

ವಾಷಿಂಗ್ಟನ್: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸನ್ನು ಅಮೆರಿಕದ ಅಧ್ಯಕ್ಷ ನನಸು ಮಾಡಿದ್ದಾರೆ. ಬಾಲ್ಯದಿಂದಲೇ ಪೊಲೀಸ್ ಆಗಬೇಕು ಎಂದುಕೊಂಡಿದ್ದ13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಆಸೆಯನ್ನು ಡೊನಾಲ್ಡ್ ಟ್ರಂಪ್(Donald Trump) ಈಡೇರಿಸಿದ್ದಾರೆ. ಅಲ್ಲಿನ ಕಳೆದ ಆರು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವರ್ಜಯೇ ಡಿಜೆ ಡೇನಿಯಲ್ ಗೆ ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಎಂಬ ಒಲವಿದೆ. ಈ ಬಗ್ಗೆ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದ. ಈತನ ಮನದಾಸೆಯನ್ನ ನೆರವೇರಿಸಲು ಕುಟುಂಬಸ್ಥರು ಸತತ ಪ್ರಯತ್ನ ಪಡುತ್ತಿದ್ದರು. ಇದಕ್ಕಾಗಿ ಸಾಕಷ್ಟು ಸಲ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಗೆ ಅಲೆದಾಡಿದರು. ಅವರ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದ್ದು, ಒಂದು ದಿನದ ಮಟ್ಟಿಗೆ ದೇವರ್ಜಯೇ ಡಿಜೆ ಡೇನಿಯಲ್ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ಕಾರ್ಯಚರಿಸಿದ್ದಾರೆ.
ಹೌದು ಒಂದು ದಿನದ ಮಟ್ಟಿಗೆ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದು, ಪೊಲೀಸ್ ವೇಷಧಾರಿಯಾಗಿ ಕಚೇರಿಗೆ ಆಗಮಿಸಿದ್ದಾನೆ. ಸೀಕ್ರೆಟ್ ಸರ್ವಿಸ್ ಏಜೆಂಟ್ ಶೈಲಿಯಲ್ಲಿಯೇ ಅಧಿಕಾರ ಸ್ವೀಕರಿಸಿದ್ದು,. ಹೂಗುಚ್ಚ ನೀಡಿ ಬಾಲ ಸೀಕ್ರೆಟ್ ಸರ್ವಿಸ್ ಏಜೆಂಟ್ ನನ್ನು ಸ್ವಾಗತ ಮಾಡಲಾಯಿತು. ಬ್ಯಾಡ್ಜ್ ನೀಡುವ ಮೂಲಕ ಗೌರವ ಸೂಚಿಸಲಾಯಿತು.
2018 ರಿಂದ ಬ್ರೈನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಆರೋಗ್ಯ ತೀರಾ ಹದಗೆಟ್ಟಿದ್ದು, ಕೇವಲ ಇನ್ನು 5 ತಿಂಗಳು ಮಾತ್ರ ಬದುಕಿರುತ್ತಾನೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಬಾಲಕನ ಆಸೆಯನ್ನು ಆತನ ಪೋಷಕರು ಈಡೇರಿಸಿದ್ದು, ಮಗನ ಕನಸನ್ನು ನನಸು ಕಳೆದ ಆರು ವರ್ಷಗಳಿಂದ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಗೆ ಅಳೆದಾಡುತ್ತಿದ್ದರು ಎನ್ನಲಾಗಿದೆ.
ಇದನ್ನ ಮನಗಂಡ ಟ್ರಂಪ್ ಈ ಬಾರಿ ಪೋಷಕರ ಮನವಿಗೆ ಸ್ಪಂದಿಸಿದ್ದು, ಅಮೆರಿಕದ ಸೀಕ್ರೆಟ್ ಸರ್ವೀಸ್ನ ನಿರ್ದೇಶಕರು ಆಗಿರುವ ಸೀನ್ ಕುರಾನ್ ಅವರಿಗೆ ಬಾಲಕನನ್ನು ನೇಮಿಸುವಂತೆ ಟ್ರಂಪ್ ಅವರು ಸೂಚನೆ ಕೊಟ್ಟಿದ್ದರು. ಇದೀಗ ಅದರ ಬೆನ್ನಲ್ಲೇ ಬಾಲಕನ ಕೊನೆ ಆಸೆಯಂತೆ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿ ಉನ್ನತ ಗೌರವ ನೀಡಲಾಗಿದ್ದು, ಸೀನ್ ಕುರಾನ್ ಅವರು ಬಾಲಕನನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್ ಬ್ಯಾಡ್ಜ್ ನೀಡಿ ಗೌರವಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಮದುವೆಯಾದ 2 ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವರನ ಕುಟುಂಬಕ್ಕೆ ಶಾಕ್
ಇನ್ನು ಮಕ್ಕಳ ಮುಗ್ಧ ಮನಸ್ಸಿನಲ್ಲಿ ನೂರಾರು ಕನಸುಗಳಿರುತ್ತವೆ. ಆದರೆ ವಿಧಿ ಅವರನ್ನು ಅರ್ಧ ದಾರಿಯಲ್ಲೆ ತನ್ನತ್ತ ಕರೆದುಕೊಳ್ಳಬೇಕು ಎಂದು ಕೆಟ್ಟ ತೀರ್ಮಾನ ಮಾಡಿರುತ್ತದೆ. ಅರಳಬೇಕಾದ ಜೀವ ಮಾರಕ ಕಾಯಿಲೆಯಡಿ ನರಳಿ ಪ್ರಾಣ ಕಳೆದುಕೊಳ್ಳುವ ಸಂಗತಿ ಊಹಿಸಿಕೊಳ್ಳಲು ಅಸಾಧ್ಯ.
ಮಕ್ಕಳ ಬಾಲ್ಯದ ಆಸೆಗಳೇ ಹಾಗೆ. ಹಿಂದೆ ಅತಿ ಕಿರಿಯ ಪೈಲಟ್ ಚಂದನ್ ನನ್ನು ಮಹಾಮಾರಿ ಹೊತ್ತೊಯ್ದಿತ್ತು. ಹೈದ್ರಾಬಾದ್ ನ ಪೊಲೀಸರು ಬಾಲಕ 10 ವರ್ಷದ ಬಾಲಕ ಸಾದಿಕ್ ನನ್ನು ಪೊಲೀಸ್ ಕಮಿಷನರ್ ಆಗಿ ಮಾಡಿ ಸೆಲ್ಯೂಟ್ ಹಾಕಿದ್ದರು. ಮುಂಬೈ ಪೊಲೀಸರೇ ಪುಟ್ಟ ಬಾಲಕಿ ಮೆಹಕ್ ಸಿಂಗ್ ಆಸೆಯನ್ನು ನೆರವೇರಿಸಿದ್ದರು. ಇದೀಗ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಬಯಕೆಯನ್ನು ಟ್ರಂಪ್ ಪೂರ್ಣ ಮಾಡಿದ್ದಾರೆ. ಈ ಮೂಲಕ ಒಂದು ಭಾವನಾತ್ಮಕ ಕ್ಷಣಕ್ಕೆ ಟ್ರಂಪ್ ಸಾಕ್ಷಿಯಾದರು. ಇನ್ನು ಮಹತ್ವದ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಬಾಲಕ ದೇವರ್ಜಯೇ ಡಿಜೆ ಡೇನಿಯಲ್, ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.