ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ನಲ್ಲಿ ಭಾರತೀಯ ಯುವಕರ ಪುಂಡಾಟ! ವಿಡಿಯೊ ವೈರಲ್!

ಪಟ್ಟಾಯ ಬೀಚ್‌ನ ತೀರದಲ್ಲಿ ಮದ್ಯಪಾನ ಮಾಡಿ ಭಾರತೀಯ ಪ್ರವಾಸಿಗರು ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಭಾರತೀಯ ಪ್ರವಾಸಿಗರ ನಿರ್ಲಕ್ಷ್ಯತನದಿಂದ ಪ್ರವಾಸಿ ಸ್ಥಳಗಳ ಶುಚಿತ್ವ ಹಾಳಾಗುತ್ತಿರುವ ಬಗ್ಗೆ ವಿದೇಶಿ ಪ್ರವಾಸಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ವಿದೇಶಿ ಬೀಚ್‌ನಲ್ಲಿ ಭಾರತೀಯ ಯುವಕರ ಪುಂಡಾಟ!

Profile Pushpa Kumari Mar 6, 2025 3:22 PM

ಥೈಲ್ಯಾಂಡ್‌: ವಿದೇಶಿ ಬೀಚ್‌ಗೆ ಭೇಟಿ ನೀಡಿದ್ದ ಭಾರತೀಯ ಮೂಲದ ಪ್ರವಾಸಿಗರು ಅಶಿಸ್ತಿನಿಂದ ವರ್ತಿಸಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.‌ ಪಟ್ಟಾಯ ಬೀಚ್ ನ ತೀರದಲ್ಲಿ ಮದ್ಯಪಾನ ಮಾಡಿ ಅಶಿಸ್ತಿನಿಂದ ವರ್ತಿಸುತ್ತಿರುವ ಈ ದೃಶ್ಯ ಭಾರೀ ವೈರಲ್‌ ಆಗುತ್ತಿದೆ. ಭಾರತೀಯ ಪ್ರವಾಸಿಗರ ನಿರ್ಲಕ್ಷ್ಯತನದಿಂದ ಪ್ರವಾಸಿ ಸ್ಥಳಗಳ ಶುಚಿತ್ವ ಹಾಳು ಮಾಡುತ್ತಿರುವ ಬಗ್ಗೆ ವಿದೇಶಿ ಪ್ರವಾಸಿಗರು ವ್ಯಾಪಕ ವಿರೋಧ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ಯುವಕರ ಗುಂಪೊಂದು ಪಟ್ಟಾಯ ಬೀಚ್ ಬದಿಯಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡಿ ನಶೆಯಲ್ಲಿ ತೇಲುತ್ತಿದ್ದಾರೆ. ಇನ್ನೊಂದೆಡೆ ಕುಡಿದ ನಶೆಯಲ್ಲಿ ಲೋಕದ ಪರಿವೇ ಇಲ್ಲದೆ ಎಲ್ಲೆಂದರಲ್ಲಿ ಮಲಗಿ ಗಡತ್ ನಿದ್ರೆಗೆ ಜಾರಿದ್ದಾರೆ. ಅಲ್ಲಲ್ಲಿ ಮದ್ಯದ ಬಾಟಲಿ, ತಿಂಡಿಯ ಪ್ಯಾಕೆಟ್ ಹಾಕಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು. ಥೈಲ್ಯಾಂಡ್‌ನ ಈ ಘಟನೆಯು ಭಾರತೀಯರಿಗೆ ಕಳಂಕ ತಂದಂತಾಗಿದ್ದು, ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಭಾರತೀಯ ಪ್ರವಾಸಿಗರ ಬೇಜವಾಬ್ದಾರಿತನಕ್ಕೆ ಎಲ್ಲೆಡೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಭಾರತೀಯ ಮೂಲದವರು ಎನ್ನಲಾದ ಪ್ರವಾಸಿಗರು ಥೈಲ್ಯಾಂಡ್ ಕಡಲ ತೀರದಲ್ಲಿ ಇನ್ನೊಂದು ಯುವಕರ ಗುಂಪು‌ ಕುಡಿದ ನಶೆಯಲ್ಲಿ ಡ್ಯಾನ್ಸ್ ಮಾಡುತ್ತಿರುವುದು, ಬೀಚ್ ಮರಳಿನ ಮೇಲೆಯೇ ಹಾಸೊದ್ದು ಮಲಗಿರುವ ದೃಶ್ಯವನ್ನು ಕಾಣಬಹುದು. ಥಾಯ್ ಎಕ್ಸ್ ಫ್ಲೋರ್ ಲೈಫ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಈ ಯುವಕರ ನಡೆಗೆ ಇದೀಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ.

ಭಾರತೀಯ ಕೆಲವು ಜನರು ಪಾಸ್ ಪೋರ್ಟ್ ಪಡೆಯುವ ಅರ್ಹತೆ ಹೊಂದಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಭಾರತೀಯ ಯುವಕರು ಹೌದೇ? ಎಂದು ಪ್ರಶ್ನೆ ಮಾಡಿದ್ದಾರೆ. ಭಾರತೀಯ ಪ್ರವಾಸಿಗರಿಗೆ ಪಾಸ್‌ಪೋರ್ಟ್ ನೀಡುವ ಮುನ್ನ ನಾಗರಿಕ ಜ್ಞಾನ ಎಷ್ಟಿದೆ ಎಂದು ಪರೀಕ್ಷೆ ಮಾಡಬೇಕಿತ್ತು ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ಇಲ್ಲಿನ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸೋಷಿಯಲ್ ಮೀಡಿಯಾ ಬಳಕೆದಾರರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ: Viral Video: ಜೀವ ರಕ್ಷಕನಿಗೆ ಪ್ರೀತಿಯ ಚುಂಬಿಸಿದ ಶ್ವಾನ! ಹೃದಯಸ್ಪರ್ಶಿ ವಿಡಿಯೊ ವೈರಲ್

ಥೈಲ್ಯಾಂಗ್ ಪಟ್ಟಾಯ ಬೀಚ್‌ಗೆ ಭೇಟಿ ನೀಡುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದ್ದು ಸಾಮಾನ್ಯವಾಗಿ ಬೀಚಿನಲ್ಲಿ ಮೋಜು ಮಸ್ತಿ ಮಾಡಿ ಸ್ನೇಹಿತರು, ಕುಟುಂಬದ ಜೊತೆಗೆ ಒಂದೊಳ್ಳೆ ದಿನ ಕಳೆಯುವುದು ಬಹುತೇಕರ ಕನಸ್ಸು. ಅಂತೆಯೇ ಇಂತಹ ಕನಸ್ಸು ಈಡೇರಿಕೆಗಾಗಿ ವಿದೇಶದ ಥೈಲ್ಯಾಂಡ್ ಭೇಟಿ ನೀಡುವವರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದ್ದು ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಆಗುತ್ತಿರುವುದು ಖುಷಿಯ ಸಂಗತಿ ಆಗಿದ್ದರೂ ಅಲ್ಲಿನ ಮೂಲ ನಿಯಮಗಳನ್ನು ಪ್ರವಾಸಿಗರು ನಿರ್ಲಕ್ಷಿಸುವುದು ಹೊಸ ತಲೆನೋವಿಗೆ ಕಾರಣಮಾಡುತ್ತಿದೆ. ಆದರೆ ಪ್ರವಾಸಿಗರು ತಾವು ಭೇಟಿ ನೀಡುವ ಸ್ಥಳಗಳ ಬಗ್ಗೆ ಗೌರವ ಹೊಂದಿರಬೇಕು. ಅಲ್ಲಿನ ಸ್ಥಳ, ಸಂಪ್ರದಾಯ ಸಂಸ್ಕೃತಿಗೆ ಚ್ಯುತಿ ಬಾರದಂತೆ ನಡೆಯುವುದು ಪ್ರವಾಸಿಗರ ಕರ್ತವ್ಯವಾಗಿದ್ದು ಇಂತಹ ಮನೋ ಭಾವನೆ ರೂಢಿಯಲ್ಲಿದ್ದರೆ ಪ್ರವಾಸಿ ಸ್ಥಳಗಳು ಕೂಡ ಹೆಚ್ಚು ಸ್ವಚ್ಛತೆಯಿಂದ ಇರಲಿದೆ.