ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜೀವ ರಕ್ಷಕನಿಗೆ ಪ್ರೀತಿಯ ಚುಂಬಿಸಿದ ಶ್ವಾನ! ಹೃದಯಸ್ಪರ್ಶಿ ವಿಡಿಯೊ ವೈರಲ್

ಕಟ್ಟಡದ ಛಾವಣಿಯಲ್ಲಿ ಸಿಕ್ಕಿಬಿದ್ದ ನಾಯಿಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾಪಾಡಿದ್ದಾನೆ. ಜೀವ ಉಳಿಸಿದ ಸಿಬ್ಬಂದಿಯ ಕೆನ್ನೆಯನ್ನು ನಾಯಿಯು ಖುಷಿಯಿಂದ ಚುಂಬಿಸಿ ಕೃತಜ್ಞತೆ ಹೇಳಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಜೀವ ಕಾಪಾಡಿದವನಿಗೆ ಈ ಶ್ವಾನ ಮಾಡಿದ್ದೇನು ನೋಡಿ!

Profile pavithra Mar 6, 2025 1:02 PM

ವಾಷಿಂಗ್ಟನ್‌: ಅಮೆರಿಕದ ಮೈನೆಯಲ್ಲಿ 2018 ರಲ್ಲಿ ನಾಯಿ ಕಟ್ಟಡದ ಮುಖಮಂಟಪದ ಛಾವಣಿಯಲ್ಲಿ ಸಿಲುಕಿದ್ದಾಗ ಅಲ್ಲಿಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ನಾಯಿ ತನ್ನನ್ನು ರಕ್ಷಿಸಿದ ಸಿಬ್ಬಂದಿಯ ಕೆನ್ನೆಯ ಮೇಲೆ ಚುಂಬಿಸಿ ಆ ವ್ಯಕ್ತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು. ಈ ಹಳೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡು ವೈರಲ್(Viral Video)ಆಗಿದೆ. ನಾಯಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ನಡುವಿನ ಹೃದಯಸ್ಪರ್ಶಿ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2018ರಲ್ಲಿ ನಾಯಿ ಕಟ್ಟಡದ ಮುಖಮಂಟಪದ ಛಾವಣಿಯಲ್ಲಿ ಸಿಲುಕಿದ್ದು, ಸಹಾಯಕ್ಕಾಗಿ ಕೂಗುತ್ತಿದ್ದಾಗ ಅಲ್ಲಿಗೆ ಬಂದ ಅಗ್ನಿಶಾಮಕ ದಳದವರು ಅದನ್ನು ರಕ್ಷಿಸಿದ್ದಾರೆ. ಇದರಿಂದ ಸಂತೋಷಗೊಂಡ ನಾಯಿ ತನ್ನನ್ನು ರಕ್ಷಿಸಿದ ಸಿಬ್ಬಂದಿಯ ಕೆನ್ನೆಯನ್ನು ಚುಂಬಿಸಿ ಆ ವ್ಯಕ್ತಿಗೆ ಕೃತಜ್ಞತೆಯನ್ನು ಹೇಳಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದು ಮತ್ತೊಮ್ಮೆ ವೀಕ್ಷಕರ ಹೃದಯವನ್ನು ಗೆದ್ದಿದೆ. ಈ ವಿಡಿಯೊವನ್ನು ಮೂಲತಃ ವೆಲ್ಸ್ ಮೈನೆ ಪೊಲೀಸರು ವರ್ಷಗಳ ಹಿಂದೆ ಘಟನೆಯನ್ನು ವರದಿ ಮಾಡುವಾಗ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ವೈರಲ್ ವಿಡಿಯೊದಲ್ಲಿ, ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಮುಖಮಂಟಪದ ಛಾವಣಿಯಲ್ಲಿ ಸಿಲುಕಿದ್ದ ಶ್ವಾನವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿದ್ದಾರೆ. ನಾಯಿ ಖುಷಿಯಿಂದ ಬಾಲವನ್ನು ಅಲ್ಲಾಡಿಸುತ್ತಾ ಅವನ ಕೆನ್ನೆಗಳಿಗೆ ಚುಂಬಿಸಿದೆ. ಹಾಗೇ ಪ್ರೀತಿಯಿಂದ ಮುಖವನ್ನು ನೆಕ್ಕುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಇದು ಎಲ್ಲರ ಮುಖದಲ್ಲಿ ನಗುವನ್ನು ಮೂಡಿಸಿದೆ. ರೆಡ್ಡಿಟ್ ಚಾನೆಲ್ 'ಅನಿಮಲ್ಸ್ ಡೂಯಿಂಗ್ ಸ್ಟಫ್' ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, " ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ನಾಯಿ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಇದನ್ನು ಲೈಕ್ ಮಾಡಿದ್ದಾರೆ.

ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಒಡನಾಟದ ವಿಡಿಯೊ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಈ ಹಿಂದೆ, ವೈರಲ್ ಆದ ವಿಡಿಯೊಂದರಲ್ಲಿ ಎರಡು ಸಿಂಹಗಳು ಬಹಳ ಹಿಂದೆ ತಮ್ಮನ್ನು ರಕ್ಷಿಸಿದ ಮಹಿಳೆಯನ್ನು ಖುಷಿಯಿಂದ ಸ್ವಾಗತಿಸುವುದು ಸೆರೆಯಾಗಿತ್ತು. ಈ ವಿಡಿಯೊ 2017ರದ್ದಾಗಿದ್ದು, ಇದನ್ನು ಮಲ್ಕಿಯಾ ಪಾರ್ಕ್ ಬಿಗ್ ಕ್ಯಾಟ್ಸ್ ರೆಸ್ಕ್ಯೂ ಯೂಟ್ಯೂಬ್‍ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೊದಲ್ಲಿ ಎರಡು ಸಿಂಹಗಳು ತಮ್ಮನ್ನು ನೋಡಲು ಬಂದ "ಗಾಡ್ ಮದರ್" ಮೈಕೆಲಾ ಜಿಮನೋವಾ ಕಡೆಗೆ ಓಡಿ ಬರುವುದು ಸೆರೆಯಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ವ್ಯಾಘ್ರನಿಂದ ಮಾಲೀಕನನ್ನು ರಕ್ಷಿಸಿ ಪ್ರಾಣತೆತ್ತ ಶ್ವಾನ! ಮನಮಿಡಿಯುವ ವಿಡಿಯೊ ವೈರಲ್

ವರದಿಗಳ ಪ್ರಕಾರ, ಮೈಕೆಲಾ ದಕ್ಷಿಣ ಆಫ್ರಿಕಾದ ಹಳ್ಳದಿಂದ ಮಲ್ಕಿಯಾ ಮತ್ತು ಅಡೆಲ್ಲೆ ಎಂಬ ಎರಡು ಸಿಂಹಗಳನ್ನು ರಕ್ಷಿಸಿದ್ದಾರಂತೆ. ಆದರೆ ಅವುಗಳನ್ನು ಅವಳಿಗೆ ಸಾಕಲು ಆಗದ ಕಾರಣ ಅವಳು ಅವುಗಳನ್ನು ಮೃಗಾಲಯಕ್ಕೆ ಬಿಟ್ಟುಕೊಡಬೇಕಾಯಿತು. ನಂತರ ಅವುಗಳನ್ನು ಆಕೆ ನೋಡಲು ಬಂದಾಗ ಮಲ್ಕಿಯಾ ಮತ್ತು ಅಡೆಲ್ಲೆ ಮೈಕೆಲಾಳನ್ನು ಗುರುತಿಸಿದವು. ಅವುಗಳು ಅವಳನ್ನು ತಬ್ಬಿಕೊಂಡು ಅವಳ ಮುಖವನ್ನು ನೆಕ್ಕಿದ್ದವಂತೆ.