ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs LSG: ಮುಂಬೈ ಇಂಡಿಯನ್ಸ್‌ಗೆ ಕೊನೆಯ ಓವರ್‌ನಲ್ಲಿ ಸೋಲುಣಿಸಿದ ಲಖನೌ ಸೂಪರ್‌ ಜಯಂಟ್ಸ್‌!

MI vs LSG Match Highlights: ಲಖನೌದ ಏಕನಾ ಕ್ರೀಡಾಂಗಣದಲ್ಲಿ ಕೊನೆಯ ಓವರ್‌ವರೆಗೂ ನಡೆದಿದ್ದ ಜಿದ್ದಾಜಿದ್ದಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 12 ರನ್‌ಗಳಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸೋಲಿಸಿತು. ಇದು ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿಗೆ ಎರಡನೇ ಜಯ .ಆದರೆ, ಮುಂಬೈಗೆ ಮೂರನೇ ಸೋಲಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಕೊನೆಯ ಓವರ್‌ನಲ್ಲಿ ಶಾಕ್‌ ನೀಡಿದ ಲಖನೌ!

ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಲಖನೌ ಸೂಪರ್‌ ಜಯಂಟ್ಸ್‌.

Profile Ramesh Kote Apr 5, 2025 12:18 AM

ಲಖನೌ: ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 16ನೇ ಪಂದ್ಯದಲ್ಲಿ (MI vs LSG) ಮುಂಬೈ ಇಂಡಿಯನ್ಸ್‌ ವಿರುದ್ಧ ಲಖನೌ ಸೂಒರ್‌ ಜಯಂಟ್ಸ್‌ ತಂಡ 12 ರನ್‌ಗಳಿಂದ ಗೆಲುವು ಪಡೆಯಿತು. ಆಡಿದ ನಾಲ್ಕು ಪಂದ್ಯಗಳಿಂದ ಎರಡನೇ ಗೆಲುವು ಪಡೆದ ರಿಷಭ್‌ ಪಂತ್‌ (Rishabh Pant) ನಾಯಕತ್ವದ ಲಖನೌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ, ಮೂರನೇ ಸೋಲು ಅನುಭವಿಸಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ಏಳನೇ ಸ್ಥಾನಕ್ಕೆ ಕುಸಿದಿದೆ.

ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆ ಹಾಕಿತು. ಬಳಿಕ 204‌ ರನ್ ಗುರಿ ಹಿಂಬಾಲಿಸಿದ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಎರಡು ಓವರ್‌ಗಳಲ್ಲಿ ಮುಂಬೈಗೆ 29 ರನ್‌ಗಳ ಅಗತ್ಯವಿತ್ತು. ಆದರೆ, ಶಾರ್ದುಲ್‌ ಠಾಕೂರ್‌ ಬುದ್ದಿವಂತಿಕೆಯಿಂದ ಬೌಲ್‌ ಮಾಡಿ ಕೇವಲ 7 ರನ್‌ ನೀಡಿದರು. ನಂತರ 20ನೇ ಓವರ್‌ನಲ್ಲಿ ಆವೇಶ್‌ ಖಾನ್‌, 9 ರನ್‌ ನೀಡಿ ಹಾರ್ದಿಕ್‌ ಪಾಂಡ್ಯ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

IPL 2025: 5 ವಿಕೆಟ್‌ ಕಿತ್ತು ಅನಿಲ್‌ ಕುಂಬ್ಳೆಯ 16 ವರ್ಷಗಳ ಹಳೆಯ ದಾಖಲೆ ಮುರಿದ ಹಾರ್ದಿಕ್‌ ಪಾಂಡ್ಯ!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಚೇಸಿಂಗ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿಲ್ ಜಾಕ್ಸ್‌ ಮತ್ತು ರಿಯಾನ್ ರಿಕಲ್ಟನ್ ಬಹುಬೇಗ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ನಮನ್ ಧೀರ್ ಮತ್ತು ಸೂರ್ಯಕುಮಾರ್ ಯಾದವ್ 69 ರನ್‌ ಜೊತೆಯಾಟವನ್ನು ಆಡುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಮುಂಬೈ ಪರ ನಮನ್ ಧೀರ್ 24 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ನಂತರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆದರೆ, 17ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್, ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು.



ಬಳಿಕ ಪಂದ್ಯವನ್ನು ಮುಗಿಸುವ ಜವಾಬ್ದಾರಿ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲಿತ್ತು. ಆದರೆ ಲಖನೌ ಬೌಲರ್‌ಗಳು ಕೊನೆಯ ಮೂರು ಓವರ್‌ಗಳಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 28 ರನ್‌ ಸಿಡಿಸಿದರೂ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ತಿಲಕ್‌ ವರ್ಮಾ (25) ಕೂಡ ತಮ್ಮ ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿಯಾಲಿಲ್ಲ. ಎಲ್‌ಎಸ್‌ಜಿ ಪರ 4 ಓವರ್‌ ಬೌಲ್‌ ಮಾಡಿ ಕೇವಲ 21 ರನ್‌ ನೀಡಿ ನಮನ್‌ ಧೀರ್‌ ವಿಕೆಟ್‌ ಕಿತ್ತ ದಿಗ್ವೀಶ್‌ ಸಿಂಗ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

203 ರನ್‌ ಕಲೆ ಹಾಕಿದ ಎಲ್‌ಎಸ್‌ಜಿ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಮಾರ್ಷ್ ಮತ್ತು ಏಡೆನ್ ಮಾರ್ಕ್ರಮ್ ಅರ್ಧಶತಕಗಳ ಆಸರೆ ನೀಡಿದ್ದರು ಹಾಗೂ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಮೊದಲನೇ ವಿಕೆಟ್‌ಗೆ ಈ ಜೋಡಿ 76 ರನ್‌ಗಳನ್ನು ಕಲೆ ಹಾಕಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಮಿಚೆಲ್‌ ಮಾರ್ಷ್‌ 31 ಎಸೆತಗಳಲ್ಲಿ 60 ರನ್‌ ಸಿಡಿಸಿದ್ದರೆ, ಏಡೆನ್‌ ಮಾರ್ಕ್ರಮ್‌ 38 ಎಸೆತಗಳಲ್ಲಿ 53 ರನ್‌ಗಳನ್ನು ಬಾರಿಸಿದ್ದರು. ಇದಲ್ಲದೆ, ಮಧ್ಯಮ ಓವರ್‌ಗಳಲ್ಲಿ ಆಯುಷ್ ಬದೋನಿ (30) ಮತ್ತು ಡೇವಿಡ್ ಮಿಲ್ಲರ್ (27) ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಎಲ್‌ಎಸ್‌ಜಿ ತನ್ನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್‌ಗಳನ್ನು ಕಲೆ ಹಾಕಿತ್ತು.



5 ವಿಕೆಟ್‌ ಕಿತ್ತ ಇತಿಹಾಸ ಬರೆದ ಹಾರ್ದಿಕ್‌ ಪಾಂಡ್ಯ

ಮುಂಬೈ ಇಂಡಿಯನ್ಸ್‌ ತಂಡದ ಪರ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಐಪಿಎಲ್‌ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ 36 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಮೊದಲ ನಾಯಕ ಎನಿಸಿಕೊಂಡರು ಹಾಗೂ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಮೊದಲ ನಾಯಕ ಎನಿಸಿಕೊಂಡರು. ಆ ಮೂಲಕ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ (4-0-16-4) ದಾಖಲೆಯನ್ನು ಮುರಿದಿದ್ದರು.