ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ವೆಡ್ಡಿಂಗ್‌ ಆನಿವರ್ಸರಿ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿ ಹಠಾಟ್‌ ಕುಸಿದು ಬಿದ್ದು ದಾರುಣ ಸಾವು-ವಿಡಿಯೊ ವೈರಲ್!

ಉತ್ತರ ಪ್ರದೇಶದ ಬರೇಲಿಯಲ್ಲಿ 50 ವರ್ಷದ ವಾಸಿಮ್ ಸರ್ವತ್ ಮತ್ತು ಅವನ ಪತ್ನಿ ಫರಾಹ್ ದಂಪತಿ 25ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿದ್ದರು. ಆದರೆ ಸಂಭ್ರಮಾಚರಣೆಯ ವೇಳೆ ವಾಸಿಮ್‍ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.

ವಿವಾಹ ವಾರ್ಷಿಕೋತ್ಸವದಂದು ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ!

Profile pavithra Apr 4, 2025 5:03 PM

ಲಖನೌ: ಜೀವನ ಎಂಬುದು ನೀರ ಮೇಲಿನ ಗುಳ್ಳೆಯಂತೆ, ಸಾವು ಯಾವಾಗ,ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ನಿಂತ ಸ್ಥಳದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅದೇರೀತಿ ಇದೀಗ ಉತ್ತರ ಪ್ರದೇಶದ ಬರೇಲಿಯಲ್ಲಿ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ವೇಳೆ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.

50 ವರ ಜೀವನ ಎಂಬುದು ನೀರ ಮೇಲಿನ ಗುಳ್ಳೆಯಂತೆ, ಸಾವು ಯಾವಾಗ,ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ನಿಂತ ಸ್ಥಳದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅದೇ ರೀತಿ ಇದೀಗ ಉತ್ತರ ಪ್ರದೇಶದ ಬರೇಲಿಯಲ್ಲಿ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ವೇಳೆ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.



ಪಾರ್ಟಿಯ ವಿಡಿಯೊಗಳಲ್ಲಿ ದಂಪತಿ ಮತ್ತು ಅವರ ಕುಟುಂಬಗಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ, ವೇದಿಕೆಯಲ್ಲಿ ಹಾಡುಗಳಿಗೆ ನೃತ್ಯ ಮಾಡುವುದು ಸೆರೆಯಾಗಿದೆ. ಫರಾಹ್ ಮತ್ತು ಅವಳ ಸಂಬಂಧಿಕರು ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವಾಗ, ವಾಸಿಮ್ ಇದ್ದಕ್ಕಿದ್ದಂತೆ ಪ್ರದರ್ಶನದ ಮಧ್ಯದಲ್ಲಿ ಕುಸಿದು ಬಿದ್ದಿದ್ದಾನೆ. ಫರಾಹ್ ಮತ್ತು ಸಂಬಂಧಿಕರು ವಾಸಿಮ್ ಕಡೆಗೆ ಬಂದು ನೋಡಿದಾಗ ಯಾವುದೇ ರೀತಿಯ ಚಲನೆಗಳು ಆತನಲ್ಲಿ ಕಂಡು ಬಂದಿಲ್ಲವಂತೆ.

ಕೂಡಲೇ ಕುಟುಂಬ ಸದಸ್ಯರು ಅವನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ, ಅಲ್ಲಿ ವೈದ್ಯರು ಆತ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೊನೆಗೂ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ ವಾಸಿಮ್ ಪತ್ನಿ ಫರಾಹ್‍ ಮತ್ತು ಅವರ ಕುಟುಂಬವನ್ನು ಶೋಕಾ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಈ ಸುದ್ದಿಯನ್ನೂ ಓದಿ:Viral Video: ವಿದೇಶಿ ಪ್ರವಾಸಿಗನನ್ನು ಯಮಾರಿಸಿದ ಶೂ ಪಾಲಿಷರ್‌; ಮುಂದೇನಾಯ್ತು? ವಿಡಿಯೊ ನೋಡಿ!

ಮಂಟಪದಲ್ಲಿ ಕುಸಿದುಬಿದ್ದ ವರ!

ಮದುವೆ ಸಮಾರಂಭದ ವೇಳೆ ವ್ಯಕ್ತಿಗಳು ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇದೇ ವರ್ಷದ ಜನವರಿಯಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇಳೆ ವರ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿತ್ತು. ವರನ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು.

28 ವರ್ಷದ ಹರ್ಷಿತ್ ಚೌಬೆ ಹೃದಯಾಘಾತದಿಂದ ಸಾವನಪ್ಪಿದ ವರ. ಈತ ಜಿಲ್ಲೆಯ ರಾಜ್ಘಾಟ್ ರಸ್ತೆಯ ಜೆಸಿ ನಗರದ ನಿವಾಸಿಯಾಗಿದ್ದು, ಮದುವೆ ಆಚರಣೆಯ ವೇಳೆ ಸಮಾರಂಭಕ್ಕೆ ಬಂದ ಜನರೊಂದಿಗೆ ವರ ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದಂತೆ ವರನಿಗೆ ಹೃದಯಾಘಾತವಾಗಿ ಮಂಟಪದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಭಯಭೀತರಾದ ಕುಟುಂಬವು ವರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಆದರೆ ವರನು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದನು ಎನ್ನಲಾಗಿದೆ. ಇದರಿಂದಾಗಿ ಮದುವೆಯ ಸಂತೋಷವು ಶೋಕವಾಗಿ ಮಾರ್ಪಟ್ಟಿತ್ತು.