IPL Betting App: ಬೆಟ್ಟಿಂಗ್ ಆ್ಯಪ್ ಪ್ರೊಮೋಶನ್- ಸೋನುಗೌಡ ಸೇರಿದಂತೆ 40ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳಿಗೆ ಖಾಕಿ ವಾರ್ನಿಂಗ್!
IPL Betting app: ಸೆಲೆಬ್ರಿಟಿಗಳ ಜೊತೆಗೆ ಈಗ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ರ್ಸ್ ಕೂಡ ಬೆಟ್ಟಿಂಗ್ ಆ್ಯಪ್ ಪ್ರೊಮೋಶನ್ ಮಾಡಿ ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಬೆಟ್ಟಿಂಗ್ ಪ್ರಮೋಶನ್‌ಗಾಗಿ ಲಕ್ಷಗಟ್ಟಲೆ ಹಣ ಪಡೆದು ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರು ಐಪಿಎಲ್ ಸೀಸನ್‌ನಲ್ಲಿ ಬೆಟ್ಟಿಂಗ್ ಪ್ರಚಾರ ಮಾಡುತ್ತಿದ್ದ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ


ಬೆಂಗಳೂರು: ಐಪಿಎಲ್ (IPL)ಮ್ಯಾಚ್ ದಿನದಿನಕ್ಕೂ ರೋಚಕ ಆಟಗಳು ತೆರೆದುಕೊಳ್ಳುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವಾಗಿದೆ. ತಮ್ಮ ತಂಡಗಳ ನಡುವಿನ ರೋಚಕ ಪಂದ್ಯವನ್ನು ಕ್ರೀಡಾಭಿಮಾನಿಗಳು ಎಂಜಾಯ್ ಮಾಡುತ್ತಿದ್ಧಾರೆ. ಇದರಲ್ಲಿ ಪಂದ್ಯದ ಗೆಲುವನ್ನು ತಮ್ಮ ಗೆಲುವೆಂದು ಸಂಭ್ರಮಿಸುವವರು ಒಂದೆಡೆಯಾದರೆ ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳ ವಂಚನೆಗೆ ಬಲಿಯಾಗುತ್ತಿರುವವರು ಮತ್ತೊಂದೆಡೆ. ಈಗಾಗಲೇ ಬೆಟ್ಟಿಂಗ್ ಜೂಜಿಗೆ ಬಿದ್ದ ಅನೇಕರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವುದನ್ನು ಕಾಣಬಹುದು. ಇನ್ನು ಕೆಲವರು ಸಾಲ-ಸೂಲ ಮಾಡಿ ಅದರಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಕೇಸ್‌ಗಳು ಅದೆಷ್ಟೋ. ಇದೆಲ್ಲದರ ನಡುವೆ ಬೆಟ್ಟಿಂಗ್ ದಂಧೆ(IPL Betting App)ಗೆ ಕಡಿವಾಣ ಹಾಕಲು ಖಾಕಿ ಸಜ್ಜಾಗಿದೆ.
ಬೆಟ್ಟಿಂಗ್ ಆಪ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನರತ್ತ ತಲುಪುತ್ತಿರುವುದಕ್ಕೆ ಪ್ರಮುಖ ಕಾರಣ ಅದರ ಕುರಿತ ಪ್ರಚಾರಗಳು. ಸೆಲೆಬ್ರಿಟಿಗಳ ಜೊತೆಗೆ ಈಗ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ರ್ಸ್ ಕೂಡ ಸೇರಿದ್ದಾರೆ. ಬೆಟ್ಟಿಂಗ್ ಪ್ರಮೋಶನ್‌ಗಾಗಿ ಲಕ್ಷಗಟ್ಟಲೆ ಹಣ ಪಡೆದು ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರು ಐಪಿಎಲ್ ಸೀಸನ್‌ನಲ್ಲಿ ಬೆಟ್ಟಿಂಗ್ ಆಪ್ ಪ್ರಚಾರ ಮಾಡುತ್ತಿದ್ದ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ
ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ರೀಲ್ಸ್ ಸ್ಟಾರ್‌ಗಳ ಲಿಸ್ಟ್ ಮಾಡಿ ಬೆಂಗಳೂರಿನ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈಗ ಸೈಬರ್ ಕ್ರೈಂ ಪೊಲೀಸರು ಲಿಸ್ಟ್ ನಲ್ಲಿರುವ ಎಲ್ಲರಿಗೆ ನೋಟಿಸ್ ಕಳುಹಿಸಿ ವಿಚಾರಣೆಯನ್ನು ಕೂಡ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ. ಇವರ ಇನ್‌ಸ್ಟಾ ಸ್ಟೋರಿ ನೋಡಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಇನ್ಸ್ಟಾಗ್ರಾಂ ಚಟುವಟಿ ಕೆಯ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಇಂತಹ ಆ್ಯಪ್‌ಗಳನ್ನು ಮತ್ತೆ ಪ್ರಚಾರ ಮಾಡಿದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ವಾಗದೇ ರಾಜ್ಯಾದ್ಯಂತ ಯಾರೆಲ್ಲ ಇನ್ಫ್ಲುಯೆನ್ಸರ್ಗಳು ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುತ್ತಿದ್ದಾರೋ ಅವರಿಗೆಲ್ಲರಿಗೂ ವಾರ್ನಿಂಗ್ ನೀಡಲಾಗಿದೆ.
ಇದನ್ನು ಓದಿ: Sonu Nigam Concert: ಗಾಯಕ ಸೋನು ನಿಗಂನತ್ತ ಕಲ್ಲು, ಬಾಟಲ್ ಎಸೆದ ಪ್ರೇಕ್ಷಕರು; ಕಾರಣವೇನು?
ಯಾವ ರೀತಿ ಪ್ರಮೋಷನ್ ಮಾಡ್ತಾರೆ?
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಕೆಲವು ಇನ್ ಫ್ಲಿಯೆನ್ಸರ್ ಗಳು ಈ ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ನೀಡುತ್ತಾರೆ. ಈ ಆ್ಯಪ್ ಗಳು ನೀಡುವ ಮಾಹಿತಿ ಪಡೆದು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ರ್ಸ್ ತಮ್ಮ ವಿಡಿಯೊ ಆರಂಭಿಸುತ್ತಾರೆ. ಅದರಲ್ಲಿ ಐಪಿಎಲ್ ನ ಟೀಂ ಳಲ್ಲಿ ಯಾವ ಯಾವ ಟೀಂ ಗೆಲ್ಲುತ್ತೆ, ಯಾವುದು ಸೋಲಬಹುದು ಇತ್ಯಾದಿ ಬಗ್ಗೆ ತಮ್ಮದೆ ಆದ ನಿಲುವನ್ನು ಶೇರ್ ಮಾಡಿ ವಾಟ್ಸ್ ಆ್ಯಪ್ ಲಿಂಕ್ ಅನ್ನು ಜಾಯಿನ್ ಆಗಲು ತಿಳಿಸುತ್ತಾರೆ. ಈಗ ಈ ರೀತಿಯಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಷನ್ ಮಾಡುವ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಮ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ..