RCB vs GT: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಅರ್ಷದ್ ಖಾನ್ ಯಾರು?
Who is Arshad Khan?: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಕೇವಲ 7 ರನ್ ಗಳಿಸಿದ ಬಳಿಕ ವಿರಾಟ್ ಕೊಹ್ಲಿ, ಅರ್ಷದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಅಂದ ಹಾಗೆ ಅರ್ಷದ್ ಖಾನ್ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ವಿರಾಟ್ ಕೊಹ್ಲಿ ವಿಕೆಟ್ ಕಿತ್ತು ಸಹ ಆಟಗಾರರ ಜೊತೆ ಸಂಭ್ರಮಿಸಿದ ಅರ್ಷದ್ ಖಾನ್.

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli), ಬುಧವಾರ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದ ಎರಡನೇ ಓವರ್‌ನಲ್ಲಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ನಿರಾಶೆ ಮೂಡಿಸಿದರು. ಗುಜರಾತ್ ಟೈಟನ್ಸ್ ತಂಡದ ಅರ್ಷದ್ ಖಾನ್‌ಗೆ ಕೊಹ್ಲಿ ವಿಕೆಟ್ ಒಪ್ಪಿಸಿದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, ತಾವು ಎದುರಿಸಿದ ಮೊದಲನೇ ಎಸೆತದಲ್ಲಿ ಕವರ್‌ಡ್ರೈವ್ ಮೂಲಕ ಬೌಂಡರಿ ಬಾರಿಸಿ ಶುಭಾರಂಭ ಕಂಡಿದ್ದರು. ಆ ಮೂಲಕ ಆರು ಎಸೆತಗಳಲ್ಲಿ 7 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಉತ್ತಮ ಲಯದಲ್ಲಿರುವಂತೆ ಕಂಡರು. ಆದರೆ, ಕಗಿಸೊ ರಬಾಡ ಅವರ ಸ್ಥಾನದಲ್ಲಿ ಗುಜರಾತ್ ಟೈಟನ್ಸ್ ತಂಡದ ಪ್ಲೇಯಿಂಗ್ XIಗೆ ಪ್ರವೇಶ ಮಾಡಿದ್ದ ಅರ್ಷದ್ ಖಾನ್, ತನ್ನ ಮೊದಲನೇ ಓವರ್‌ನಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ಅರ್ಷದ್ ಖಾನ್ ಎಸೆದಿದ್ದ ಶಾರ್ಟ್ ಲೆನ್ತ್ ಎಸೆತವನ್ನು ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್ ಬಳಿ ಪ್ರಸಿಧ್ ಕೃಷ್ಣಗೆ ಕ್ಯಾಚ್ ಕೊಟ್ಟರು.
IPL 2025: ಆರ್‌ಸಿಬಿ, ಸಿಎಸ್‌ಕೆ ಅಲ್ಲವೇ ಅಲ್ಲ! ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್!
ಅರ್ಷದ್ ಖಾನ್ ಯಾರು?
27ನೇ ವಯಸ್ಸಿನ ಅರ್ಷದ್ ಖಾನ್ ಅವರು ಅರ್ಷದ್ ಖಾನ್ ಮಧ್ಯ ಪ್ರದೇಶದ ಎಡಗೈ ಮಧ್ಯಮ ವೇಗಿಯಾಗಿದ್ದಾರೆ. ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಅವರು ತಂಡಕ್ಕೆ ನೆರವಾಗಬಲ್ಲರು. ಇವರು ಕಿರಿಯರ ಕ್ರಿಕೆಟ್‌ನಿಂದ ಸ್ಕೌಟ್ ಮೂಲಕ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದರು. 2020ರ ಹರಾಜಿನಲ್ಲಿ ಅರ್ಷದ್ ಖಾನ್ ಅವರನ್ನು ಮೂಲ ಬೆಲೆ 20 ಲಕ್ಷ ರೂ. ಗಳಿಗೆ ಮುಂಬೈ ಇಂಡಿಯನ್ಸ್ ಸೇರಿಸಿಕೊಂಡಿತ್ತು. ಆದರೆ, ಗಾಯದ ಕಾರಣ ಅವರು ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ನಂತರ 2021ರ ಐಪಿಎಲ್ ಟೂರ್ನಿಯಲ್ಲಿಯೂ ಮುಂಬೈ ಪರ ಆಡಿದ್ದ ಅವರು ಆಡಿದ್ದ 6 ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದರು.
Grace, finesse, and everything right about that cover drive! ✨#ViratKohli sets the tone in style for #RCB! 🔥
— Star Sports (@StarSportsIndia) April 2, 2025
Watch LIVE action ➡ https://t.co/GDqHMberRq#IPLonJiostar 👉🏻 #RCBvGT | LIVE NOW on Star Sports 1, Star Sports 1 Hindi & JioHotstar! | #IndianPossibleLeague pic.twitter.com/nhXvDcAwsF
2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಅರ್ಷದ್ ಖಾನ್ ಅವರನ್ನು ನೂತನ ಫ್ರಾಂಚೈಸಿ ಲಖನೌ ಸೂಪರ್ ಜಯಂಟ್ಸ್ ಖರೀದಿಸಿತ್ತು. 2024ರ ಐಪಿಎಲ್ ಟೂರ್ನಿಯವರೆಗೂ ಇವರು ಎಲ್‌ಎಸ್‌ಜಿ ಪರ ಆಡಿದ್ದರು. ಇಲ್ಲಿ ಆಡಿದ್ದ ನಾಲ್ಕು ಪಂದ್ಯಗಳಿಂದ ಅರ್ಷದ್ ಖಾನ್ ಪಡೆದಿದ್ದು ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಅವರು ಒಂದು ಶ್ರೇಷ್ಠ ಇನಿಂಗ್ಸ್ ಅನ್ನು ಆಡಿದ್ದರು. ಕಳೆದ ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು 58 ರನ್‌ಗಳನ್ನು ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು.
IPL 2025: ಪಂಜಾಬ್ ಕಿಂಗ್ಸ್ ವಿರುದ್ದದ ಸೋಲಿನ ಬೆನ್ನಲ್ಲೆ ಪಿಚ್ ಕ್ಯುರೇಟರ್‌ಗಳನ್ನು ದೂರಿದ ಜಹೀರ್ ಖಾನ್!
ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಅರ್ಷದ್ ಖಾನ್ ಅವರನ್ನು ಗುಜರಾತ್ ಟೈಟನ್ಸ್ ತಂಡ 1.3 ಕೋಟಿ ರೂ. ಗಳಿಗೆ ಖರೀದಿಸಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಅರ್ಷದ್ ಖಾನ್‌ಗೆ ಬೆಂಗಳೂರಿನಲ್ಲಿ ಆಡುವ ಅವಕಾಶ ಲಭಿಸಿತು. ಕಳೆದ ಪಂದ್ಯದಲ್ಲಿ ಆಡಿದ್ದ ಕಗಿಸೊ ರಬಾಡ ಅವರು ವೈಯಕ್ತಿಕ ಕಾರಣಗಳಿಂದ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿಲ್ಲ. ಈ ಕಾರಣದಿಂದ ಅವರ ಸ್ಥಾನದಲ್ಲಿ ಆಡಲು ಅರ್ಷದ್ ಖಾನ್‌ಗೆ ಅವಕಾಶ ಸಿಕ್ಕಿತು.