ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಐಸ್ ಕ್ರೀಮ್‌ನಲ್ಲಿ ಹಾವು! ಬೆಚ್ಚಿಬಿದ್ದ ನೆಟ್ಟಿಗರು- ವಿಡಿಯೊ ನೋಡಿ

ಥೈಲ್ಯಾಂಡ್‍ನ ಮುಯಾಂಗ್ ರಾಚಬುರಿ ಪ್ರದೇಶದ ವ್ಯಕ್ತಿಯೊಬ್ಬ ತಿನ್ನಬೇಕೆಂದು ಖರೀದಿಸಿದ ಬ್ಲ್ಯಾಕ್ ಬೀನ್ ಐಸ್ ಕ್ರೀಮ್ ಬಾರ್‌ನಲ್ಲಿ ಸತ್ತ ಕಪ್ಪು ಮತ್ತು ಹಳದಿ ಬಣ್ಣದ ಗೋಲ್ಡನ್‍ ಟ್ರೀ ಸ್ನೇಕ್ ಮರಿಯೊಂದು ಕಂಡುಬಂದಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಐಸ್ ಕ್ರೀಂನಲ್ಲಿ ಪತ್ತೆಯಾದ ವಿಷಕಾರಿ ಹಾವು!

Profile pavithra Mar 8, 2025 5:49 PM

ಥೈಲ್ಯಾಂಡ್‍: ಈ ಹಿಂದೆ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಕೈಬೆರಳು ಪತ್ತೆಯಾದ ಘಟನೆ ನಡೆದು ಭಾರೀ ಸುದ್ದಿಯಾಗಿತ್ತು. ಇದೀಗ ಅಂತಹದೊಂದು ಆಘಾತಕಾರಿ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನಿಗೆ ಐಸ್ ಕ್ರೀಂನಲ್ಲಿ ಸತ್ತ ಹಾವೊಂದು ಸಿಕ್ಕಿಬಿದ್ದಿದೆಯಂತೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಬೆಚ್ಚಿಬಿದ್ದಿದಾರೆ. ಈ ವ್ಯಕ್ತಿ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಐಸ್ ಕ್ರೀಂ ಪೋಟೊವನ್ನು ಹಂಚಿಕೊಂಡಿದ್ದಾನೆ. ಥೈಲ್ಯಾಂಡ್‍ನ ಮುಯಾಂಗ್ ರಾಚಬುರಿ ಪ್ರದೇಶದ ವ್ಯಕ್ತಿಯೊಬ್ಬ ತಿನ್ನಬೇಕೆಂದು ಬ್ಲ್ಯಾಕ್ ಬೀನ್ ಐಸ್ ಕ್ರೀಮ್ ಬಾರ್ ತಂದಿದ್ದಾನೆ. ಆಗ ಅದರಲ್ಲಿ ಸತ್ತ ಹಾವೊಂದನ್ನು ಕಂಡು ಶಾಕ್‌ ಆಗಿದ್ದಾನೆ. ಐಸ್ ಕ್ರೀಮ್ ಒಳಗೆ ಸತ್ತ ಹಾವನ್ನು ಕಂಡ ಆತ ಅದನ್ನು ಬಿಸಾಡದೇ ಅದರ ಪೋಟೊ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಐಸ್‌ಕ್ರೀಂನಲ್ಲಿ ಹಾವಿನ ವಿಡಿಯೊ ಇಲ್ಲಿದೆ:



ಹಾಗೇ ಆತ ಅದು ವಿಷಕಾರಿ ಹಾವು ಎಂದು ಕೂಡ ಹೇಳಿದ್ದಾನೆ. ಐಸ್ ಕ್ರೀಮ್ ಬಾರ್ ಒಳಗೆ ಸತ್ತ ಈ ಕಪ್ಪು ಮತ್ತು ಹಳದಿ ಬಣ್ಣದ ಹಾವು ಗೋಲ್ಡನ್‍ ಟ್ರೀ ಸ್ನೇಕ್ ಮರಿಯಂತೆ. ಈ ಪೋಸ್ಟ್ ಬಗ್ಗೆ ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ ,"ಪಾಪ ಹಾವು, ಆದರೆ ನಿಮಗೆ ಐಸ್ ಕ್ರೀಂ ಜೊತೆ ಇನ್ನೂ ಸ್ವಲ್ಪ ಪ್ರೋಟೀನ್ ಸಿಕ್ಕಿದೆ " ಎಂದು ತಮಾಷೆ ಮಾಡಿದ್ದಾರೆ.

ಐಸ್‍ಕ್ರಿಂನಲ್ಲಿ ಈ ರೀತಿಯ ವಿಚಿತ್ರವಾದ ವಸ್ತುಗಳು ಪತ್ತೆಯಾದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ, ವ್ಯಕ್ತಿಯೊಬ್ಬರು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ತಮ್ಮ ಐಸ್ ಕ್ರೀಂನಲ್ಲಿ ಮಾನವ ಬೆರಳನ್ನು ಪತ್ತೆಹಚ್ಚಿದ್ದಾರೆ ಮತ್ತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸ್ ತನಿಖೆಯ ವೇಳೆ ಅದು ಪುಣೆ ಐಸ್‍ಕ್ರೀಂ ತಯಾರಿಕಾ ಕಾರ್ಖಾನೆಯ ಕಾರ್ಮಿಕನ ಬೆರಳು ಎಂದು ಗುರುತಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಚಿಕನ್‌ ಪೀಸ್‌ನಲ್ಲಿ ಹರಿದಾಡಿದ ಹುಳು! ಶಾಕಿಂಗ್‌ ವಿಡಿಯೊ ವೈರಲ್

ಇತ್ತೀಚೆಗೆ ಇಲ್ಲೊಬ್ಬಳು ಮಹಿಳೆ ಹಸಿವೆಯಾಗಿದೆಯಂದು ಬಿರಿಯಾನಿ ತಿನ್ನಲು ಹೋದರೆ ಅಲ್ಲಿ ಬಿರಿಯಾನಿ ತಟ್ಟೆ ತುಂಬಾ ಹುಳುಗಳು ಹರಿದಾಡಿದೆಯಂತೆ. ಈಕೆ ತಡಮಾಡದೇ ಅದನ್ನು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು 'ಕ್ರೇಜಿ ಬೀ' ಎಂದು ಗುರುತಿಸಿಕೊಂಡ ಮಹಿಳೆ ಚಿಕನ್ ಬಿರಿಯಾನಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಮಹಿಳೆ ಚಿಕನ್ ಪೀಸ್‍ ತೆಗೆಯುತ್ತಿದ್ದಂತೆ ಅದರೊಳಗೆ ಇದ್ದ ಹುಳಗಳು ಹರಿದಾಡಲು ಶುರು ಮಾಡಿದ್ದಾವೆಯಂತೆ. ಈ ಬಿರಿಯಾನಿ ಕಂಡು ನೆಟ್ಟಿಗರು 'ಅಸಹ್ಯ' ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಬಾಯಿಯಲ್ಲಿ ನೀರೂರಿಸುವ ಬಿರಿಯಾನಿಯಲ್ಲಿ ಜೀವಂತ ಹುಳುಗಳನ್ನು ನೋಡಿ ಅನೇಕರು ಶಾಕ್‌ ಆಗಿದ್ದಾರೆ.