ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾಬ್ ಕಟ್ ಮಾಡಿಕೊಂಡು ಸಖತ್‌ ಆಗಿ ಮಿಂಚಿದ ಆನೆ; ವಿಡಿಯೊ ನೋಡಿ

ಮನ್ನಾರ್‌ಗುಡಿಯಾ ಶ್ರೀ ವಿದ್ಯಾ ರಾಜಗೋಪಾಲಸ್ವಾಮಿ ದೇವಾಲಯದ ಪ್ರೀತಿಯ ಆನೆಯ ಕೇಶ ವಿನ್ಯಾಸ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಈ ಆನೆ ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ನೆಟ್ಟಿಗರು ಆನೆಯ ಈ ಹೇರ್‌ಸ್ಟೈಲ್‌ ನೋಡಿ ಫಿದಾ ಆಗಿದ್ದಾರೆ.

ಆನೆಯ ಬಾಬ್‌ ಕಟ್‌ ಹೇರ್‌ಸ್ಟೈಲ್‌ ನೋಡಿದ್ರಾ...?

Profile pavithra Mar 8, 2025 5:47 PM

ಚೆನ್ನೈ: ಚೀನಾದ ದೇವಾಲಯದಲ್ಲಿದ್ದ ಬೆಕ್ಕು ಭಕ್ತರಿಗೆ ಹೈಫೈ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಲೆ ಸೃಷ್ಟಿಸಿತ್ತು.ಈಗ ತಮಿಳುನಾಡಿನ ದೇವಾಲಯದಲ್ಲಿದ್ದ ಆನೆ ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ಮನ್ನಾರ್‌ಗುಡಿಯ ಶ್ರೀ ವಿದ್ಯಾ ರಾಜಗೋಪಾಲಸ್ವಾಮಿ ದೇವಾಲಯದ ಪ್ರೀತಿಯ ಆನೆ ಸೆಂಗಮಾಲಂ ತನ್ನ ವಿಭಿನ್ನವಾದ ಹೇರ್ ಸ್ಟೈಲ್‍ನಿಂದಾಗಿ ಇದೀಗ ಸುದ್ದಿಯಲ್ಲಿದೆ. ಆನೆಯ ಮಾವುತ ಅದರ ಕೂದಲನ್ನು ಪ್ರೀತಿಯಿಂದ ಬಾಚುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ವೈರಲ್ ವಿಡಿಯೊದಲ್ಲಿ ಆನೆಯ ಮಾವುತ ಎಸ್ ರಾಜಗೋಪಾಲ್ ಪ್ರೀತಿಯಿಂದ ಆನೆಯ ಕೂದಲನ್ನು ಬಾಚುತ್ತಿರುವುದು ಸೆರೆಯಾಗಿದೆ. ಹಾಗೇ ಈ ವಿಡಿಯೊದಲ್ಲಿ ಆನೆ ಬಾಬ್ ಕಟ್ ಮಾಡಿಸಿಕೊಂಡು ಹಣೆಯ ಮೇಲೆ ತಿರುಪತಿ ತಿಮ್ಮಪ್ಪನ ಬಿಳಿ ಕೆಂಪು ತಿಲಕವಿಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದೆ.

ಈ ಕ್ಯೂಟ್‌ ಆನೆಯ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ಆನೆಯ ಬಗ್ಗೆ ಮಾವುತ ರಾಜಗೋಪಾಲ್ ಕೂಡ ಫುಲ್‌ ಆಗಿದ್ದಾನಂತೆ. "ಸೆಂಗಮಾಲಂ ನನ್ನ ಮಗುವಿನಂತೆ. ಒಮ್ಮೆ ನಾನು ಇಂಟರ್‌ನೆಟ್‌ ವಿಡಿಯೊದಲ್ಲಿ ಬಾಬ್-ಕಟ್ ಮಾಡಿಸಿಕೊಂಡ ಆನೆ ಮರಿಯನ್ನು ನೋಡಿದೆ. ಆದ್ದರಿಂದ, ನಾನು ಸೆಂಗಮಾಲಂ ಕೂದಲನ್ನು ಬೆಳೆಸಲು ಪ್ರಾರಂಭಿಸಿದೆ " ಎಂದು ಹೇಳಿದ್ದಾರೆ. ಈ ಆನೆಯನ್ನು 2003 ರಲ್ಲಿ ಕೇರಳದಿಂದ ಈ ದೇವಾಲಯಕ್ಕೆ ತರಲಾಯಿತಂತೆ ಮತ್ತು ಅಂದಿನಿಂದ, ಇದು ಪ್ರವಾಸಿಗರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದೆ ಎಂದು ತಿಳಿದುಬಂದಿದೆ.

ಸೆಂಗಮಾಲಂನ ವಿಶಿಷ್ಟ ಹೇರ್‌ ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೊದಲ್ಲಿ 'ಹಾರ್ಟ್‌' ಎಮೋಜಿಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ವಿಶಿಷ್ಟ ಮತ್ತು ಅದ್ಭುತವಾದ ಹೇರ್‌ ಸ್ಟೈಲ್ ಅನ್ನು ಹೊಗಳಿದ್ದಾರೆ. 2020ರಲ್ಲಿ ಐಎಫ್ಎಸ್ ಅಧಿಕಾರಿ ಸುಧಾ ರಾಮೆನ್ ಸೆಂಗಮಾಲಂ ಬಗ್ಗೆ ಮಾಡಿದ ಟ್ವೀಟ್ ವ್ಯಾಪಕ ಮೆಚ್ಚುಗೆಯನ್ನು ಹುಟ್ಟುಹಾಕಿತ್ತು. ಹಾಗಾಗಿ ಅವರಿಂದಲೂ ಈ ಆನೆಗೆ ಮಾನ್ಯತೆ ಸಿಕ್ಕಿದೆ ಎನ್ನಲಾಗಿದೆ.

ಪ್ರಾಣಿಗಳ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಚೀನಾದ ಕ್ಸಿಯುವಾನ್ ದೇವಾಲಯದಲ್ಲಿ ವಾಸಿಸುವ ಬೆಕ್ಕೊಂದು ತನ್ನದೇ ಆದ ಶೈಲಿಯಲ್ಲಿ "ಮಿಯೋ" ಎಂದು ಕೂಗುವ ಮೂಲಕ ಜನರೊಂದಿಗೆ ಹೈ-ಫೈವ್ ಮಾಡಿದೆ. ಈ ಬೆಕ್ಕು ಚಿನ್ನದ ಸರ ಧರಿಸಿ ಬಹಳ ಮುದ್ದಾಗಿ ಕಾಣಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್

ಚೀನಾದ ಮೃಗಾಲಯವೊಂದರಲ್ಲಿ ಮಗುವೊಂದು ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ ಶೂ ಆಕಸ್ಮಿಕವಾಗಿ ಆನೆಯಿದ್ದ ಆವರಣದೊಳಗೆ ಬಿದ್ದಿದ್ದು ಆನೆ ಇದನ್ನು ಗಮನಿಸಿ ತನ್ನ ಸೊಂಡಿಲಿನಿಂದ ಬಿದ್ದಂತಹ  ಶೂ ಅನ್ನು ಎತ್ತಿ ಕೊಟ್ಟಿದೆ. ಈ ಮುದ್ದಾದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸು ಗೆದ್ದಿದೆ.