ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನದಲ್ಲಿ ಬೆತ್ತಲೆಯಾದ ಮಹಿಳಾ ಗಗನಯಾತ್ರಿ; ಏನಿದು ವಿಚಿತ್ರ ಘಟನೆ?

Viral Video: ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್‌ ವಿಮಾನದಲ್ಲಿ ಗೇಟ್‍ಗೆ ಹಿಂತಿರುಗುವಂತೆ ಒತ್ತಾಯಿಸಿ ಮಹಿಳಾ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ತಿರುಗಾಡಿದ್ದಾರೆ. ಈ ಘಟನೆಯನ್ನು ಸಹಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್‌ ಆಗಿದೆ.

ವಿಮಾನದಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆಯಾದ ಮಹಿಳೆ!

Profile pavithra Mar 8, 2025 10:21 PM

ವಾಷಿಂಗ್ಟನ್‌: ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್‌ (Southwest Airlines) ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ವಾಪಾಸ್‌ ಗೇಟ್‍ಗೆ ಹಿಂತಿರುಗುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಆ ಮಹಿಳೆ ಗಗನಯಾತ್ರಿಯಾಗಿದ್ದು, ವಿಮಾನದಿಂದ ಇಳಿಯಲು ಬಯಸಿದ್ದರಿಂದ ಆಕೆ ಇದ್ದಕ್ಕಿದ್ದಂತೆ ಕಿರುಚಿದ್ದು ಅಲ್ಲದೇ ತನ್ನ ಮೈಮೇಲಿದ್ದ ಬಟ್ಟೆ ಬಿಚ್ಚಿದ ಅಘಾತಕಾರಿ ಘಟನೆಯೊಂದು ವರದಿಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹ್ಯೂಸ್ಟನ್‍ನಿಂದ ಅಮೆರಿಕದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್‌ ಫ್ಲೈಟ್ 733ರಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ವರದಿಗಳ ಪ್ರಕಾರ, ಆ ಮಹಿಳೆ ಸಹ ಪ್ರಯಾಣಿಕರನ್ನು ಹೊಡೆದಿದ್ದು ಅಲ್ಲದೇ ವಿಮಾನ ಸಿಬ್ಬಂದಿಗೆ ಕಿರುಕುಳ ನೀಡಿದ್ದಾಳಂತೆ. ಮಹಿಳೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರ ಎದುರಿನಲ್ಲಿಯೇ ಬಟ್ಟೆ ಬಿಚ್ಚಿ ಬೆತ್ತಲೆಯಾಗಿದ್ದಾಳೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಈ ನಡುವೆ ಮಹಿಳೆ ವಿಮಾನದಲ್ಲಿ ಮೇಲಕ್ಕೆ ಮತ್ತು ಕೆಳಗೆ ಜಿಗಿದು ತನ್ನನ್ನು ತಾನು ಬೈಪೋಲಾರ್ ಎಂದು ಹೇಳಿಕೊಂಡಿದ್ದಾಳೆ ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ.



ಪ್ರಯಾಣಿಕರೊಬ್ಬರು ಈ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಮಹಿಳಾ 'ಗಗನಯಾತ್ರಿ' ಸಂಪೂರ್ಣವಾಗಿ ನಗ್ನವಾಗಿ ಇತರ ಪ್ರಯಾಣಿಕರ ಎದುರಿನಲ್ಲಿ ನಡೆದುಕೊಂಡು ಹೋಗುವುದು ಸೆರೆಯಾಗಿದೆ.

ವಿಮಾನವು ಹೂಸ್ಟನ್‍ನ ಹೋಬಿ ವಿಮಾನ ನಿಲ್ದಾಣದ ಗೇಟ್‍ಗೆ ಹಿಂದಿರುಗಿದಾಗ, ಅಲ್ಲಿದ್ದ ಸಿಬ್ಬಂದಿ ಮಹಿಳೆ ಬೆತ್ತಲೆಯಾಗಿರುವುದನ್ನು ಕಂಡು ಆಕೆಯ ದೇಹವನ್ನು ಕಂಬಳಿಯಿಂದ ಮುಚ್ಚಿದ್ದಾರೆ. ಆದರೆ ಅವಳು ಕಂಬಳಿಯನ್ನು ತೆಗೆದು ಎಸೆದಿದ್ದಾಳೆ. ಹೀಗಾಗಿ ಹ್ಯೂಸ್ಟನ್ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಈ ಬಗ್ಗೆ ಮಹಿಳೆಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ನಂತರ ವಿಮಾನವು ಗೇಟ್‍ಗೆ ಮರಳಿದ್ದು, ಮಹಿಳೆಯ ವರ್ತನೆಗೆ ವಿಮಾನಯಾನ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ರೈಲಿನ ಮಹಿಳಾ ಬೋಗಿಯೊಳಗೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿ; ವಿಡಿಯೊ ವೈರಲ್

ಈ ಹಿಂದೆ ಮುಂಬೈ ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ಬೆತ್ತಲಾಗಿ ಮಹಿಳಾ ಬೋಗಿಯೊಳಗೆ ಪ್ರವೇಶಿಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಎಸಿ ಲೋಕಲ್ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಿಂದ ಕಲ್ಯಾಣ್‍ಗೆ ಪ್ರಯಾಣಿಸುತ್ತಿದ್ದಾಗ ಸಂಜೆ ಈ ಘಟನೆ ನಡೆದಿತ್ತು. ಘಾಟ್ಕೋಪರ್ ನಿಲ್ದಾಣದಲ್ಲಿ ಆ ವ್ಯಕ್ತಿ ಬೆತ್ತಲಾಗಿಯೇ ರೈಲು ಹತ್ತಿದ್ದಾನೆ. ಇದು ಕಂಪಾರ್ಟ್‌ಮೆಂಟ್‌ನಲ್ಲಿದ್ದ ಮಹಿಳೆಯರಿಗೆ ಆಘಾತ ಮತ್ತು ಕೋಪವನ್ನು ಉಂಟು ಮಾಡಿತ್ತು. ಅವನನ್ನು ಹೊರಗೆ ಹೋಗುವಂತೆ ಹೇಳಿದರೂ ಆತ ಮಾತ್ರ ನಾಚಿಕೆ ಇಲ್ಲದವನಂತೆ ರೈಲಿನಲ್ಲಿಯೇ ನಿಂತಿದ್ದನು. ನಂತರ ಸಿಬ್ಬಂದಿ ಆತನನ್ನು ರೈಲಿನಿಂದ ಹೊರಗೆ ತಳ್ಳಿದ್ದರು.