Monday, 4th November 2024

ಜೆ.ಪಿ.ನಡ್ಡಾ ಗುಣಮುಖ

ನವದೆಹಲಿ : ಕಳೆದ ಡಿಸೆಂಬರ್ 13ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ಕ್ವಾರಂಟೈನ್‌ ಆಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಗೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿ, ನನಗಾಗಿ ಶುಭ ಹಾರೈಸಿದ, ಪ್ರಾರ್ಥಿಸಿದ ಮತ್ತು ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನನ್ನ ಕುಟುಂಬ ಹಾಗೂ ನಾನು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ಈ ಸವಾಲಿನ ಸಮಯದಲ್ಲಿ ನನಗೆ ಹಾರೈಕೆ ನೀಡಿದ ಡಾ.ರಣದೀಪ್ ಗುಲೇರಿಯ ಹಾಗೂ ದೀರ್ ಏಮ್ಸ್ ಮತ್ತು ಅಲ್ಲಿನ ಸಿಬ್ಬಂದಿಗಳು, ತಂಡಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.