IPL 2025: ರಾಜಸ್ಥಾನ್‌ಗೆ ಸಾಯಿರಾಜ್ ಬಹುತುಳೆ ಸ್ಪಿನ್ ಕೋಚ್
ಬಹುತುಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಬೌಲಿಂಗ್ ದಾಖಲೆ ಹೊಂದಿದ್ದಾರೆ. 630ಕ್ಕೂ ಅಧಿಕ ವಿಕೆಟ್ ಗಳನ್ನು ಉರುಳಿಸಿದ್ದಾರೆ ಮತ್ತು 6,000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಅವರು ಎರಡು ಟೆಸ್ಟ್‌ಗಳನ್ನು ಮತ್ತು 8 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಪುರುಷರ ತಂಡಕ್ಕೆ ತರಬೇತಿ ನೀಡಿದ್ದರು.


ಜೈಪುರ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ರಾಜಸ್ಥಾನ ರಾಯಲ್ಸ್, ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಸಾಯಿರಾಜ್ ಬಹುತುಳೆ(Sairaj Bahutule) ಅವರನ್ನು ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. 52 ವರ್ಷದ ಬಹುತುಳೆ 2018-21ರ ಅವಧಿಯಲ್ಲಿ ತಂಡದ ಭಾಗವಾಗಿದ್ದರು. ಈಗ ಮತ್ತೆ ತಂಡಕ್ಕೆ ಮರಳಿದ್ದಾರೆ. ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾರೆ.
ಬಹುತುಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಬೌಲಿಂಗ್ ದಾಖಲೆ ಹೊಂದಿದ್ದಾರೆ. 630ಕ್ಕೂ ಅಧಿಕ ವಿಕೆಟ್ ಗಳನ್ನು ಉರುಳಿಸಿದ್ದಾರೆ ಮತ್ತು 6,000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಅವರು ಎರಡು ಟೆಸ್ಟ್‌ಗಳನ್ನು ಮತ್ತು 8 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಬಳಿಕ ಕೋಚ್ ವೃತ್ತಿಯಲ್ಲಿ ಯಶಸ್ಸು ಕಂಡ ಅವರು, ಮುಂಬೈ, ಬಂಗಾಳ, ಕೇರಳ ಮತ್ತು ಭಾರತೀಯ ರಾಷ್ಟ್ರೀಯ ಪುರುಷರ ತಂಡಕ್ಕೆ ತರಬೇತಿ ನೀಡಿದ್ದರು.
Once a Royal. Always a Royal.
— Rajasthan Royals (@rajasthanroyals) February 13, 2025
Say hello to Spin Bowling Coach Sairaj Bahutule, who will look after your spin diamonds in #IPL2025! 🔥💗 pic.twitter.com/iI7Top4isc
'ಸ್ಪಿನ್ ಬೌಲಿಂಗ್‌ನಲ್ಲಿ ಆಳವಾದ ಪರಿಣತಿ ಹೊಂದಿರುವ ಸಾಯಿರಾಜ್, ಯುವ ಬೌಲರ್‌ಗಳನ್ನು ರೂಪಿಸುವ ಅವರ ಸಾಮರ್ಥ್ಯವು ರಾಜಸ್ಥಾನ ರಾಯಲ್ಸ್‌ನಲ್ಲಿ ನಾವು ಹೊಂದಿರುವ ಮುನ್ನೋಟಕ್ಕೆ ಪರಿಪೂರ್ಣವಾಗಿ ಹೊಂದುತ್ತದೆ. ಅವರೊಂದಿಗೆ ನಾನು ಹಿಂದೆ ಕೆಲಸ ಮಾಡಿರುವುದರಿಂದ, ಅವರ ಯೋಚನೆಗಳು ಮತ್ತು ಮಾರ್ಗದರ್ಶನವು ನಮ್ಮ ಆಟಗಾರರಿಗೆ ಭಾರೀ ಉಪಯುಕ್ತವಾಗಲಿದೆ ಎಂದು ನಾನು ಭಾವಿಸಿದ್ದೇನೆ' ಎಂದು ತಂಡದ ಮುಖ್ಯ ಕೋಚ್ ದ್ರಾವಿಡ್ ಹೇಳಿದ್ದಾರೆ.
ರಾಜಸ್ಥಾನ್ ತಂಡ
ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್, ವಾನಿಂದು ಹಸರಂಗ, ಮಹೀಶ್ ತೀಕ್ಷಣ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ನಿತೀಶ್ ರಾಣಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಯಧ್ವೀರ್ ಸಿಂಗ್, ಫಜಲ್ಲಾಕ್ ಫಾರೂಖಿ, ವೈಭವ್ ಸೂರ್ಯವಂಶಿ, ಕ್ವೆನಾ ಮಾಫಕ, ಅಶೋಕ್ ಶರ್ಮ, ಕುನಾಲ್ ರಾಥೋಡ್.