Champions Trophy: ಗಡಾಫಿ ಕ್ರೀಡಾಂಗಣದಲ್ಲಿ ಭದ್ರತಾ ತಾಲೀಮು; ವಿಡಿಯೊ ವೈರಲ್
'ಗಡಾಫಿ ಕ್ರೀಡಾಂಗಣದ ನವೀನ ತರಬೇತಿ ತಾಲೀಮು ಉನ್ನತ ಮಟ್ಟದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ(Champions Trophy) ಸಮಯದಲ್ಲಿ ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಿದ್ದರಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ' ಎಂದು ಪಿಸಿಬಿ ಹೇಳಿದೆ.
![ಗಡಾಫಿ ಕ್ರೀಡಾಂಗಣದಲ್ಲಿ ಭದ್ರತಾ ತಾಲೀಮು; ವಿಡಿಯೊ ವೈರಲ್](https://cdn-vishwavani-prod.hindverse.com/media/original_images/Lahore_Stadium.jpg)
![Profile](https://vishwavani.news/static/img/user.png)
ಲಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಪಂದ್ಯಾವಳಿಗೆ ಬೇಕಿರುವ ಸಿದ್ಧತೆಯನ್ನು ಭರದಿಂದ ನಡೆಸುತ್ತಿದೆ. ಗಡಾಫಿ ಕ್ರೀಡಾಂಗಣದ ನವೀಕರಣ ಮತ್ತು ಮೇಲ್ದರ್ಜೆ ಕಾಮಗಾರಿ 117 ದಿನಗಳ ದಾಖಲೆ ಸಮಯದಲ್ಲಿ ಪೂರ್ತಿಗೊಳಿಸಿತ್ತು. ಇದೀಗ ಭದ್ರತೆಯ ವಿಷಯದಲ್ಲಿ ಮುಂಜಾಗರೂಕತೆ ಕ್ರಮಗಳ ತಾಲೀಮು ನಡೆಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
ವೈರಲ್ ಆಗಿತ್ತಿರುವ ವಿಡಿಯೊದಲ್ಲಿ ಕ್ರೀಡಾಂಗಣ ಭದ್ರತಾ ಸಿಬ್ಬಂದಿ, ಪಂದ್ಯದ ವೇಳೆ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿದರೆ ಅವರನ್ನು ಹೇಗೆ ತಕ್ಷಣದಲ್ಲಿ ಬಂಧಿಸಬಹುದೆಂಬ ತಾಲೀಮು ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಪಂದ್ಯಗಳ ಮಧ್ಯೆ ಕೆಲ ಅಭಿಮಾನಿಗಳು ಗ್ಯಾಲರಿಯಿಂದ ಮೈದಾನಕ್ಕೆ ಓಡಿ ತಮ್ಮ ನೆಚ್ಚಿನ ಆಟಗಾರರನ್ನು ತಬ್ಬಿಕೊಳ್ಳುವುದು, ಕಾಲಿಗೆ ಬೀಳುವುದು ಇತಂಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಈ ಕ್ರಮ ಕೈಗೊಂಡಿದೆ.
'ಗಡಾಫಿ ಕ್ರೀಡಾಂಗಣದ ನವೀನ ತರಬೇತಿ ತಾಲೀಮು ಉನ್ನತ ಮಟ್ಟದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಿದ್ದರಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ' ಎಂದು ಪಿಸಿಬಿ ಹೇಳಿದೆ.
no way pakistan cricket board actually conducting special drills on how to catch a fan inside stadium 😭😭😭 pic.twitter.com/NQRWJpR7h3
— kunal (@kyunaaaal) February 7, 2025
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಾಹೋರ್ ಮತ್ತು ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ದ.ಆಫ್ರಿಕಾ ತಂಡಗಳ ವಿರುದ್ಧ ತ್ರಿಕೋನ ಸರಣಿಯನ್ನು ಪಾಕಿಸ್ತಾನ ಆಡಲಿಳಿಯಲಿದೆ. ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳ ಈ ಸರಣಿ ಫೆ.8ರಿಂದ 14ರ ತನಕ ನಡೆಯಲಿದೆ. ಈಗಾಗಲೇ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಾಕ್ಗೆ ಆಗಮಿಸಿದೆ.
ಟ್ರೋಫಿ ಯಾವಾಗ?
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಮಾಜಿ ವೇಗಿ
ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ. ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ.