ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udayagiri Stone Pelting: ಉದಯಗಿರಿ ಕಲ್ಲುತೂರಾಟ, ಮೌಲ್ವಿಗೆ ಜಾಮೀನು ನಿರಾಕರಣೆ

ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಲು ಈ ಒಂದು ಮೌಲ್ವಿಯ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು. 10 ದಿನಗಳಾದರೂ ಆರೋಪಿಯನ್ನು ಬಂಧಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧ ಕಿಡಿಕಾರಿದ್ದರು. 10 ದಿನಗಳ ಬಳಿಕ ಮೌಲ್ವಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು.

ಉದಯಗಿರಿ ಕಲ್ಲುತೂರಾಟ, ಮೌಲ್ವಿಗೆ ಜಾಮೀನು ನಿರಾಕರಣೆ

ಉದಯಗಿರಿ ಕಲ್ಲು ತೂರಾಟ ಹಾಗೂ ಮೌಲ್ವಿ

ಹರೀಶ್‌ ಕೇರ ಹರೀಶ್‌ ಕೇರ Mar 24, 2025 3:58 PM

ಮೈಸೂರು: ಉದಯಗಿರಿಯಲ್ಲಿ (Udayagiri) ಪೊಲೀಸ್‌ ವಾಹನದ ಹಾಗೂ ಠಾಣೆ ಮೇಲೆ ಕಲ್ಲು ತೂರಾಟ (Stone pelting) ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ಮುಫ್ತಿ ಮುಸ್ತಾಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (Bail) ವಜಾಗೊಳಿಸಿ ಮೈಸೂರಿನ ಕೋರ್ಟ್ ಆದೇಶ ಹೊರಡಿಸಿದೆ. ಮೌಲ್ವಿಯ ಪ್ರಚೋದನಕಾರಿ ಭಾಷಣದಿಂದಲೇ ಉದ್ರಿಕ್ತರಾದ ಸಮುದಾಯದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಮುಸ್ತಾಕ್ ಜಾಮೀನು ಅರ್ಜಿಯನ್ನು ಇದೀಗ ಕೋರ್ಟ್ (Crime news) ವಜಾಗೊಳಿಸಿದೆ.

ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಲು ಈ ಒಂದು ಮೌಲ್ವಿಯ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು. 10 ದಿನಗಳಾದರೂ ಆರೋಪಿಯನ್ನು ಬಂಧಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧ ಕಿಡಿಕಾರಿದ್ದರು. 10 ದಿನಗಳ ಬಳಿಕ ಮೌಲ್ವಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು.

ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಯುವಕ ಸಾವು

ಚಿಕ್ಕಮಗಳೂರು: ಮಂಗಳೂರಿನ ರೆಸಾರ್ಟ್‌ನಲ್ಲಿ (Resort) ಕೆಲ ತಿಂಗಳ ಹಿಂದೆ ನಡೆದ ಈಜುಕೊಳ (Swimming pool) ದುರಂತವನ್ನು ನೆನಪಿಸುವ ಮತ್ತೊಂದು ಘೋರ ಘಟನೆ ನಡೆದಿದೆ. ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಪ್ರವಾಸಿಗರೊಬ್ಬರು (drowned death) ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್ ಮೃತಪಟ್ಟಿದ್ದಾರೆ.

ನಿಶಾಂತ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಸ್ನೇಹಿತನ ಜೊತೆ ತೆರಳಿದ್ದರು. ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಹಾರುವ ವೇಳೆ ತಲೆ ಟ್ವಿಸ್ಟ್ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನೀರಿಗೆ ಹಾರಿದ ಸುಶಾಂತ್ ಅಲುಗಾಡದೇ ಇದ್ದಾಗ ಕೂಡಲೇ ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ