Fraud Case: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶದ ಆಮಿಷ, ಲಕ್ಷಾಂತರ ರೂ. ವಂಚನೆ: ಆರೋಪಿ ಬಂಧನ
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ಪಡೆದು, ಯಾವುದೇ ಲಾಭವನ್ನು ಕೊಡದೇ ವಂಚಿಸಿ, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹಾವೇರಿ ಸಿಇಎನ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.


ಹಾವೇರಿ: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ಯಾವುದೇ ಲಾಭವನ್ನು ಕೊಡದೇ ವಂಚಿಸಿ (Fraud Case), ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹಾವೇರಿ ಸಿಇಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಪ್ಪ ಶಿವಪ್ಪ ತೋಟದ (34) ಬಂಧಿತ ಆರೋಪಿ. ಈತನು ಧನುಷ್ ಸ್ಟಾಕ್ಸ್ ಇನ್ವೆಸ್ಟ್‌ಮೆಂಟ್ (ಡಿ ಸ್ಟಾಕ್ಸ್) ಎಂಬ ನಕಲಿ ಕಂಪನಿಯ ಹೆಸರಿನಲ್ಲಿ ಸಾರ್ವಜನಿಕರಿಂದ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಸಿಇಎನ್ ಠಾಣೆಗೆ ವಂಚನೆಗೊಳಗಾದ ಭರಮಪ್ಪ ಹಾದಿಮನಿ ಎಂಬುವವರು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಆರೋಪಿ ಪತ್ತೆಗಾಗಿ ತನಿಖಾ ಕಾರ್ಯ ಕೈಗೊಂಡಿದ್ದ ಸಿಪಿಐ ಶಿವಶಂಕರ ಆರ್. ಗಣಾಚಾರಿ ಮತ್ತು ಪೊಲೀಸ್ ಸಿಬ್ಬಂದಿ ನಾಗೇಂದ್ರ ಹಾನಗಲ್ಲ ಪಿ.ಆರ್. ಬಾವಿಕಟ್ಟಿ, ಎಚ್.ಬಿ.ಭರಮಗೌಡ್ರ ಅವರು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಹುಬ್ಬಳ್ಳಿಯ ಬೈರಿದೇವರಕೊಪ್ಪ ಲೆಕ್‌ವೀವ್ ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಎಟಿಎಂ ದರೋಡೆ, 30 ಲಕ್ಷ ರೂ. ಮಂಗಮಾಯ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಕ್ಟಿವ್ ಆಗಿರುವ ʼಬೆಡ್ ಶೀಟ್ ಗ್ಯಾಂಗ್ʼ ಎಟಿಎಂ ಒಂದನ್ನು ದರೋಡೆ ನಡೆಸಿದೆ. ಸುಮಾರು 30 ಲಕ್ಷ ರೂ.ಗಳನ್ನು ದರೋಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ತಂಡ ಎಸ್‌ಬಿಐ ಎಟಿಎಂನಿಂದ ಕಳ್ಳತನ ನಡೆಸಿದೆ.
ಆಂಧ್ರಪ್ರದೇಶ ಮೂಲದ ಕಪ್ಪು ಬಣ್ಣದ ಕ್ರೇಟಾ ಕಾರಿನಲ್ಲಿ ಆಗಮಿಸಿದ ತಂಡ ಬೆಡ್ ಶೀಟ್ ಹೊದ್ದುಕೊಂಡೇ ಕಾರಿನಿಂದ ಇಳಿದಿದೆ. ಮೊದಲು ಎಟಿಎಂನ ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಹೊಡೆದಿದ್ದು, ನಂತರ ಕಾರಿನಲ್ಲಿದ್ದ ಇತರರು ಬಂದು ಎಟಿಎಂ ಒಳಗೆ ನುಗ್ಗಿ ಗ್ಯಾಸ್ ಕಟರ್ ಬಳಸಿ ಎಟಿಎಂ ಮಷೀನ್ ಒಡೆದು ಕಳ್ಳತನ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Tumkur News: ಸಾಕುನಾಯಿಯನ್ನು ಸದ್ದಿಲ್ಲದಂತೆ ಹೊತ್ತೊಯ್ದ ಚಿರತೆ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ರಸ್ತೆ ಬದಿ ಇರುವ SBI ಎಟಿಎಂನಲ್ಲಿ ರಾಜಾರೋಷವಾಗಿ ಕಳ್ಳತನ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಬೆಡ್ ಶೀಟ್ ಗ್ಯಾಂಗ್ ಈ ಒಂದು ದರೋಡೆ ನಡೆಸಿದೆ. ಕೇವಲ 6 ನಿಮಿಷದಲ್ಲಿ ಲಕ್ಷ ಹಣ ದೋಚಿ ಪರಾರಿ ಆಗಿದ್ದಾರೆ. ಪೋಲೀಸರ ಅಂದಾಜಿನ ಪ್ರಕಾರ ಎಟಿಎಂ ನಲ್ಲಿ ಇದ್ದ ಸುಮಾರು 30 ಲಕ್ಷ ರೂ.ಗೂ ಹೆಚ್ಚು ಹಣ ಎಗರಿಸಿ ಪರಾರಿಯಾಗಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.