Fake Case: ಪತಿ ಮತ್ತು ಆತನ ಸ್ನೇಹಿತರ ವಿರುದ್ಧ ನಕಲಿ ಗ್ಯಾಂಗ್‌ರೇಪ್ ಕೇಸ್ ದಾಖಲು; ತನಿಖೆಯಲ್ಲಿ ಬಯಲಾಯ್ತು ಕಿʻಲೇಡಿʼಯ ಮೋಸದಾಟ
ತನ್ನ ಗಂಡನ ಸ್ನೇಹಿತರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಬಾಟಲಿಯನ್ನು ತೂರಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಳು. ಇದೀಗ ಆಕೆ ಮಾಡಿರುವುದು ಸುಳ್ಳು ಆರೋಪ ಎಂಬುದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಗಾಜಿಯಾಬಾದ್: ಈ ಹಿಂದೆ ತನ್ನ ಲಿವ್-ಇನ್ ಸಂಗಾತಿಯಾಗಿದ್ದ ತನ್ನ ಪತಿ ಮತ್ತು ಆತನ ಸ್ನೇಹಿತರ ವಿರುದ್ಧ ಪದೇ ಪದೆ ಸುಳ್ಳು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಅಪಹರಣದ ಆರೋಪ(Fake Case) ಹೊರಿಸಿದ್ದ ಕಿಲಾಡಿ ಮಹಿಳೆಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಆಕೆಯ ಇತ್ತೀಚಿನ ಆರೋಪ ಸುಳ್ಳು ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಹಿಂದಿನ ಪ್ರಕರಣಗಳಲ್ಲಿ ಆಕೆ ಹಲವಾರು ಬಾರಿ ಹೇಳಿಕೆಗಳನ್ನು ಬದಲಾಯಿಸಿದ್ದಾಳೆ. ಅಲ್ಲದೇ ಆಕೆ ಸಲ್ಲಿಸಿದ ಒಂದು ಸುಳ್ಳು ದೂರಿನ ಆಧಾರದಲ್ಲಿ ಆಕೆ ಪತಿ ಜೈಲು ಶಿಕ್ಷೆಯನ್ನೂ ಅನುಭವಿಸುತ್ತಿದ್ದಾನೆ ಎನ್ನಲಾಗಿದೆ.
ಮಹಿಳೆ ಮೂರು ದೂರುಗಳು ಮತ್ತು ಮೂರು ಎಫ್‌ಐಆರ್ ಸಲ್ಲಿಸಿದ್ದು, ಹಲವು ಬಾರಿ ತನ್ನ ಹೇಳಿಕೆಗಳನ್ನು ಬದಲಾಯಿಸಿದ್ದಾಳೆ. ತನ್ನ ಗಂಡನ ಸ್ನೇಹಿತರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಬಾಟಲಿಯನ್ನು ತೂರಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಳು. ಇದೀಗ ಆಕೆ ಮಾಡಿರುವುದು ಸುಳ್ಳು ಆರೋಪ ಎಂಬುದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಗಳ ಸುರಿಮಳೆ
ಕಳೆದ ವರ್ಷ ಜೂನ್‌ನಲ್ಲಿ, ಗಾಜಿಯಾಬಾದ್‌ನ ಕವಿ ನಗರದ ನಿವಾಸಿ ವಿಕಾಸ್ ತ್ಯಾಗಿ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆ, ತನ್ನನ್ನು ಮದುವೆಯಾಗುವ ನೆಪದಲ್ಲಿ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಆ ಸಮಯದಲ್ಲಿ ತಾನು ಗರ್ಭಿಣಿಯಾಗಿದ್ದೆ ಮತ್ತು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರಿಂದ ಮತ್ತು ತ್ಯಾಗಿ ಹೊಟ್ಟೆಗೆ ಒದ್ದಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ದೂರು ನೀಡಿದ್ದಳು.
ಮಹಿಳೆ ತನ್ನ ಮೊದಲ ಹೇಳಿಕೆಯಲ್ಲಿ ತನ್ನ ಆರೋಪಗಳನ್ನು ಪುನರಾವರ್ತಿಸಿದಳು ಆದರೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವಾಗ ತನ್ನ ಹೇಳಿಕೆಯನ್ನು ಬದಲಾಯಿಸಿದಳು. ತನ್ನ ಎರಡನೇ ಹೇಳಿಕೆಯಲ್ಲಿ, ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು ಮತ್ತು ತ್ಯಾಗಿ ತನ್ನನ್ನು ಹೊಡೆದಿದ್ದ ಎಂದಿದ್ದಳು. ವೈದ್ಯರ ಸಲಹೆಯನ್ನು ಪಾಲಿಸದ ಕಾರಣ ತನಗೆ ಗರ್ಭಪಾತವಾಗಿದೆ ಎಂದು ಅವರು ಹೇಳಿದರು. ಆಗಸ್ಟ್‌ನಲ್ಲಿ, ಮಹಿಳೆ ಮತ್ತೆ ಪೊಲೀಸರನ್ನು ಸಂಪರ್ಕಿಸಿ ತ್ಯಾಗಿ, ಅವರ ಸೋದರ ಮಾವ ಮತ್ತು ಅವರ ಸ್ನೇಹಿತರು ತನ್ನನ್ನು ಬೆದರಿಸಿ ಹೇಳಿಕೆ ಬದಲಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಳು. ಇದಾದ ಬಳಿಕ ತ್ಯಾಗಿಯನ್ನು ಮದುವೆಯಾದ ಆಕೆ ಅದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಿ ತನ್ನ ಹಳೆಯ ಕೇಸ್‌ಗಳ ಮೇಲೆ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದಳು.
ಈ ಸುದ್ದಿಯನ್ನೂ ಓದಿ: Fake Marriage: 4 ವರ್ಷ 4 ಮದುವೆ- ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಮಹಿಳೆ ಇದೀಗ ಪೊಲೀಸರ ಬಲೆಗೆ!
ನಾಲ್ಕು ತಿಂಗಳ ನಂತರ, ಅಂದರೆ ಜನವರಿಯಲ್ಲಿ, ತ್ಯಾಗಿ ಮತ್ತು ಅವರ ತಾಯಿ ಮದುವೆಯನ್ನು ಅಪೂರ್ಣ ರೀತಿಯಲ್ಲಿ ನಡೆಸಿದ್ದರು ಮತ್ತು ಮದುವೆಯ ನೆಪದಲ್ಲಿ ಅವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಮತ್ತೆ ದೂರು ಸಲ್ಲಿಸಿದ್ದಳು. ತ್ಯಾಗಿ ತನ್ನನ್ನು ಥಳಿಸಿ, ಮದ್ಯ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದರು. ಅಲ್ಲದೇ ಅವರ ಇಬ್ಬರು ಸ್ನೇಹಿತರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೊಂಡರು. ಈ ದೂರಿನಾಧಾರದಲ್ಲಿ ತ್ಯಾಗಿಯನ್ನು ಫೆಬ್ರವರಿ 17 ರಂದು ಬಂಧಿಸಲಾಗಿತ್ತು. ಇದೀಗ ತನಿಖೆ ವೇಳೆ ಮಹಿಳೆ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಹೀಗಾಗಿ ಪೊಲೀಸರು ಆಕೆಯನ್ನೂ ಅರೆಸ್ಟ್ ಮಾಡಿದ್ದಾರೆ.