ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chandra Arya: ಭಾರತದೊಂದಿಗಿನ ಸಂಬಂಧ, ಮೋದಿ ಭೇಟಿ; ಕನ್ನಡಿಗ ಚಂದ್ರ ಆರ್ಯಗೆ ಟಿಕೆಟ್‌ ಕೈ ತಪ್ಪಲು ಕಾರಣವೇನು?

ಕೆನಡಾದಲ್ಲಿ ಅಧಿಕಾರದಲ್ಲಿರುವ ಲಿಬರಲ್ ಪಕ್ಷವು, ಖಾಲಿಸ್ತಾನಿ ಚಟುವಟಿಕೆಗಳ ವಿರುದ್ಧ ದೃಢವಾದ ನಿಲುವು ತಾಳಿದ್ದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್​ ಕೊಡಲು ನಿರಾಕರಿಸಿದೆ ಎಂದು ತಿಳಿದು ಬಂದ ಬೆನ್ನಲ್ಲೇ ಒಟ್ಟಾವಾ ನೇಪಿಯನ್ ಕ್ಷೇತ್ರದಲ್ಲಿ ಮರುಚುನಾವಣೆಗೆ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿದೆ.

ಕನ್ನಡಿಗ ಚಂದ್ರ ಆರ್ಯಗೆ ಕೆನಡಾದಲ್ಲಿ ಟಿಕೆಟ್‌ ಕೈ ತಪ್ಪಲು ಕಾರಣವೇನು?

Profile Vishakha Bhat Mar 27, 2025 8:59 AM

ಒಟ್ಟಾವಾ: ಕೆನಡಾದಲ್ಲಿ ಅಧಿಕಾರದಲ್ಲಿರುವ ಲಿಬರಲ್ ಪಕ್ಷವು, ಖಾಲಿಸ್ತಾನಿ ಚಟುವಟಿಕೆಗಳ ವಿರುದ್ಧ ದೃಢವಾದ ನಿಲುವು ತಾಳಿದ್ದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ (Chandra Arya) ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್​ ಕೊಡಲು ನಿರಾಕರಿಸಿದೆ ಎಂದು ತಿಳಿದು ಬಂದ ಬೆನ್ನಲ್ಲೇ ಒಟ್ಟಾವಾ ನೇಪಿಯನ್ ಕ್ಷೇತ್ರದಲ್ಲಿ ಮರುಚುನಾವಣೆಗೆ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿದೆ. ಆದರೆ ಯಾವುದಕ್ಕೂ ಕಾರಣ ನೀಡಿರಲಿಲ್ಲ, ಇದೀಗ ಅವರ ಮೇಲೆ ನೀಡುರುವ ನಿರ್ಬಂಧಕ್ಕೆ ಕಾರಣ ತಿಳಿದು ಬಂದಿದೆ. ಕಳೆದ ವರ್ಷ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಭೇಟಿಯೂ ಸೇರಿದಂತೆ, ಭಾರತ ಸರ್ಕಾರದೊಂದಿಗಿನ ಅವರ ಸಂಬಂಧದ ಆರೋಪಗಳ ಮಧ್ಯೆ ಕೆನಡಾ ಸರ್ಕಾರದಿಂದ ಈ ಹೇಳಿಕೆ ಬಂದಿದೆ.

ಕೆನಡಾ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದೆಗೆಟ್ಟಿದ್ದರೂ ಕೆನಡಾ ಸಂಸದ ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ತಿಳಿಸಿದೆ, ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರಿಂದಾಗಿ ಕೆನಡಾ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದ್ದೆ. ಆದಾಗ್ಯೂ, ಕೆನಡಾ ಸರ್ಕಾರ ಮತ್ತು ಲಿಬರಲ್ ಪಕ್ಷ ಎರಡೂ ಆರ್ಯ ಅವರನ್ನು ನಾಯಕತ್ವ ಸ್ಪರ್ಧೆಯಿಂದ ಅಥವಾ ಅವರ ಮರುಚುನಾವಣಾ ಸ್ಪರ್ಧೆಯಿಂದ ತಡೆಯಲು ನಿರ್ದಿಷ್ಟ ಕಾರಣಗಳನ್ನು ಒದಗಿಸಿಲ್ಲ.

ಕೆನಡಾದ ಭದ್ರತಾ ಗುಪ್ತಚರ ಸೇವೆ (CSIS) ಆರ್ಯ ಅವರ ಒಟ್ಟಾವಾದಲ್ಲಿರುವ ಹೈಕಮಿಷನ್ ಸೇರಿದಂತೆ ಭಾರತ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ. ಆದರೆ ತಮ್ಮ ಮೇಲಿನ ಈ ಆರೋಪವನ್ನು ನಿರಾಕರಿಸಿದ್ದಾರೆ. ಒಬ್ಬ ಸಂಸದರಾಗಿ, ಕೆನಡಾ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕರು ಮತ್ತು ಸರ್ಕಾರದ ಮುಖ್ಯಸ್ಥರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Chandra Arya: ಕೆನಡಾ ಪ್ರಧಾನಿ ರೇಸ್‌ನಲ್ಲಿರುವ ಕನ್ನಡಿಗ; ಚಂದ್ರ ಆರ್ಯ ಬಗ್ಗೆ ನಿಮಗೆಷ್ಟು ಗೊತ್ತು?

ಕೆನಡಾದಲ್ಲಿ ಪ್ರಸ್ತುತ ರಾಜಕೀಯ ವರ್ಗದಲ್ಲಿ ಖಲಿಸ್ತಾನಿ ವಿರೋಧಿಯಾಗಿ ಚಂದ್ರ ಆರ್ಯ ಅವರು ಗುರುತಿಸಿಕೊಂಡಿದ್ದಾರೆ. ಈ ವರ್ಷದ ಜನವರಿಯಲ್ಲಿ, ಆಡಳಿತಾರೂಢ ಲಿಬರಲ್ ಪಕ್ಷದ ಮುಂದಿನ ನಾಯಕನನ್ನು ಆಯ್ಕೆ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅವರನ್ನು ತಡೆಯಲಾಗಿತ್ತು. ಆರ್ಯ ಅವರು ಕೆನಡಾ ಮತ್ತು ಇತರೆ ಪ್ರದೇಶಗಳಲ್ಲಿ ಖಾಲಿಸ್ತಾನಿ ಚಟುವಟಿಕೆಗಳ ವಿರುದ್ಧ ತಮ್ಮ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು. ಅಕ್ಟೋಬರ್‌ನಲ್ಲಿ, ಅಮೆರಿಕ ಮೂಲದ ಖಾಲಿಸ್ತಾನಿ ಉಗ್ರ ಗುರಪತ್‌ವಂತ್ ಸಿಂಗ್ ಪನ್ನುನ್, ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿದ ಬಳಿಕ ಆರ್ಯ ಅವರನ್ನು ಗುರಿಯಾಗಿಸುವಂತೆ ಟ್ರೂಡೋ ಅವರಿಗೆ ಒತ್ತಾಯಿಸಿದ್ದರು.