ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಮ್ಯಾನ್ಮಾರ್‌ ಭೂಕಂಪ; ರಕ್ಷಣಾ ಕಾರ್ಯಕ್ಕಾಗಿ ತೆರಳಲಿರುವ 80 ಭಾರತೀಯ NDRF ಸಿಬ್ಬಂದಿಗಳು

ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತದಿಂದ 80 ಸದಸ್ಯರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಶನಿವಾರ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪಕರಣಗಳನ್ನು ಲೋಡ್ ಮಾಡಲಾಗುತ್ತಿದೆ. ಅವರು ಮುಂದಿನ 1-2 ಗಂಟೆಗಳಲ್ಲಿ ಮಯನ್ಮಾರ್‌ಗೆ ತೆರಳಿದ್ದಾರೆ.

ಮ್ಯಾನ್ಮಾರ್‌ ಭೂಕಂಪ; ರಕ್ಷಣಾ ಕಾರ್ಯಕ್ಕಾಗಿ ತೆರಳಲಿರುವ NDRF  ಪಡೆ

Profile Vishakha Bhat Mar 29, 2025 1:33 PM

ನವದೆಹಲಿ:ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಭೀಕರ ಭೂಕಂಪ (Earthquake) ಸಂಭವಿಸಿದೆ. ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1000 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತದಿಂದ 80 ಸದಸ್ಯರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಶನಿವಾರ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಮ್ಯಾನ್ಮಾರ್‌ಗೆ ತೆರಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಉಪಕರಣಗಳನ್ನು ಲೋಡ್ ಮಾಡಲಾಗುತ್ತಿದೆ. ಅವರು ಮುಂದಿನ 1-2 ಗಂಟೆಗಳಲ್ಲಿ ಮ್ಯಾನ್ಮಾರ್‌ಗೆ ತೆರಳಿದ್ದಾರೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ತಂಡವು ಅಲ್ಲಿಗೆ ಸಾಗಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ತಂಡದ ಹೆಚ್ಚಿನ ಸದಸ್ಯರು ಗಾಜಿಯಾಬಾದ್‌ನಲ್ಲಿರುವ ಎನ್‌ಡಿಆರ್‌ಎಫ್‌ನ 8 ನೇ ಬೆಟಾಲಿಯನ್‌ನವರು ಎಂದು ಅವರು ಹೇಳಿದ್ದಾರೆ. ಬೆಟಾಲಿಯನ್‌ನ ಅನೇಕ ಸದಸ್ಯರು ಟರ್ಕಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಭಾಗವಾಗಿದ್ದರು. ಈ ಹಿಂದೆ ಇದೇ ರೀತಿಯ ನೈಸರ್ಗಿಕ ವಿಕೋಪಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಅನುಭವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆಯ ಪ್ರಮಾಣ ಹಾಗೂ ಅಲ್ಲಿನ ಪರಿಸ್ಥಿತಿಗನ್ವಯಿಸಿ ಸದಸ್ಯರನ್ನು ಕಳುಹಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. 2015 ರ ನೇಪಾಳ ಭೂಕಂಪ ಮತ್ತು 2023 ರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ನಂತರ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ನಡೆಸಿತ್ತು.



ಈಗಾಗಲೇ ಭಾರತ ಅಗತ್ಯ ನೆರವನ್ನು ಮ್ಯಾನ್ಮಾರ್‌ಗೆ ನೀಡಲು ಸಿದ್ಧವಿದೆ ಎಂದು ಹೇಳಿದೆ. ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್‌ ಮಾಡಿ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಅಗತ್ಯ ನೆರವನ್ನು ಭಾರತದ ಕಡೆಯಿಂದ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದ್ದರು. ಔಷಧಿಗಳು,ಲಸಿಕೆಗಳು ಸೇರಿದಂತೆ ಅನೇಕ ಅತ್ಯಗತ್ಯ ವಸ್ತುಗಳನ್ನು ವಾಯುಸೇನೆಯ ನೆರವಿನಿಂದ ಮ್ಯಾನ್ಮಾರ್‌ಗೆ ರವಾನೆ ಮಾಡಲಾಗುತ್ತಿದೆ. ಹಿಂಡನ್ ವಾಯುಪಡೆಯ ನಿಲ್ದಾಣದಿಂದ IAF C 130 J ವಿಮಾನದ ಮೂಲಕ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗಿದೆ. ಪರಿಹಾರ ಸಾಮಗ್ರಿಗಳಲ್ಲಿ ಡೇರೆಗಳು, ಮಲಗುವ ಚೀಲಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಊಟಗಳು, ನೀರು ಶುದ್ಧೀಕರಣ ಯಂತ್ರಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್‌ಗಳು ಮತ್ತು ಪ್ಯಾರಸಿಟಮಾಲ್, ಸೇರಿದಂತೆ ಅಗತ್ಯ ವಸ್ತುಗಳನ್ನು ಮೊದನೇ ಹಂತದಲ್ಲಿ ಕಳುಹಿಸಲಾಗಿದೆ.