ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʼಜಿಮಿಕ್ಕಿ ಕಮ್ಮಲ್' ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಜಪಾನಿ ಬೆಡಗಿ; ವಿಡಿಯೊ ನೋಡಿ

ಜಪಾನಿನ ಕಂಟೆಂಟ್ ಕ್ರಿಯೇಟರ್ ಮಾಯೋ ಕೇರಳ ಸೀರೆಯನ್ನು ಧರಿಸಿ ಮಲಯಾಳಂ ಹಾಡಾದ 'ಜಿಮಿಕ್ಕಿ ಕಮ್ಮಲ್'ಗೆ ಸಖತ್‌ ಹೆಜ್ಜೆ ಹಾಕಿದ್ದಾರೆ. ಇದೀಗ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಮಲಯಾಳಂ ಹಾಡಿಗೆ ಜಪಾನಿ ಹುಡುಗಿಯ ಡ್ಯಾನ್ಸ್‌; ನೆಟ್ಟಿಗರು ಫುಲ್‌ ಫಿದಾ

Profile pavithra Mar 29, 2025 1:11 PM

ಟೊಕಿಯೊ: ಜಪಾನಿನ ಕಂಟೆಂಟ್ ಕ್ರಿಯೇಟರ್ ಮಾಯೋ ಇತ್ತೀಚೆಗಷ್ಟೇ ಸೀರೆಯುಟ್ಟು ನೃತ್ಯ ಮಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜಪಾನಿ ಹುಡುಗಿಯ ಸೀರೆ ಪ್ರೇಮ ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದರು. ಈಗ ಮತ್ತೊಮ್ಮೆ ಸೀರೆಯುಟ್ಟು ಕುಣಿದು ಅವರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾರೆ. ಈ ಬಾರಿ ಅವರು ಸೊಗಸಾದ ಕೇರಳ ಸೀರೆಯನ್ನು ಧರಿಸಿ ಮಲಯಾಳಂ 'ಜಿಮಿಕ್ಕಿ ಕಮ್ಮಲ್' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು 1 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಹಾಡಿನ ಲಯಕ್ಕೆ ತಕ್ಕ ಹಾಗೇ ಭಾವವನ್ನು ವ್ಯಕ್ತಪಡಿಸುತ್ತಾ ನೋಡುಗರನ್ನು ಮೋಡಿ ಮಾಡಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಜಪಾನಿನ ಮಹಿಳೆ ಮಾಯೋ ಸಾಂಪ್ರದಾಯಿಕ ಕೇರಳ ಸೀರೆಯನ್ನು ಧರಿಸಿ ಮಲಯಾಳಂನ 'ಜಿಮಿಕ್ಕಿ ಕಮ್ಮಲ್' ಹಾಡಿಗೆ ಕುಣಿದಿರುವುದು ಸೆರೆಯಾಗಿದೆ. ಚಿನ್ನದ ಅಂಚುಗಳನ್ನು ಹೊಂದಿರುವ ಕ್ಲಾಸಿಕ್ ಕ್ರೀಮ್ ಬಣ್ಣದ ಕೇರಳ ಸೀರೆಯುಟ್ಟು, ಕಿವಿಗೆ ಚಿನ್ನದ ಜುಮ್ಕಾ ಹಾಕಿಕೊಂಡು ಅವರು ಮುದ್ದಾಗಿ ಕಂಡು ಬಂದಿದ್ದಾರೆ. ಇನ್ನು ಈ ಸೀರೆಯಲ್ಲಿನ ನವಿಲಿನ ಗರಿಗಳ ಡಿಸೈನ್‍ ನೋಡುಗರ ಕಣ್ಮನ ಸೆಳೆದಿದೆ.

'ಜಿಮಿಕ್ಕಿ ಕಮ್ಮಲ್'ಗೆ ಸಖತ್‌ ಆಗಿ ಸೊಂಟ ಬಳುಕಿಸಿದ ಜಪಾನಿನ ಬೆಡಗಿ ವಿಡಿಯೊ ಇಲ್ಲಿದೆ ನೋಡಿ...

'ಜಿಮಿಕ್ಕಿ ಕಮ್ಮಲ್' ಮಲಯಾಳಂ ನಟ ಮೋಹನ್ ಲಾಲ್ ಅವರ ʼವೆಲಿಪಾಡಿಂಟೆ ಪುಸ್ತಕಂʼ ಚಿತ್ರದ ಹಾಡು. ಈ ಹಾಡಿಗೆ ನೃತ್ಯ ಮಾಡುವುದು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. 2017 ರಲ್ಲಿ ಕೊಚ್ಚಿಯ ಇಂಡಿಯನ್ ಸ್ಕೂಲ್ ಆಫ್ ಕಾಮರ್ಸ್ (ಐಎಸ್‍ಸಿ) ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಈ ನೃತ್ಯವನ್ನು ಸವಾಲಾಗಿ ತೆಗೆದುಕೊಂಡು ಮಾಡಿದ್ದರು. ಅವರು ತಮ್ಮ ಅದ್ಭುತವಾದ ನೃತ್ಯ ಪ್ರದರ್ಶಿಸಿದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಆಗಿದ್ದರು.

ಜಪಾನಿನ ಕಂಟೆಂಟ್‍ ಕ್ರಿಯೇಟರ್ ಮಾಯೋ ಈ ಡ್ಯಾನ್ಸ್ ರೀಲ್ ಅನ್ನು ತನ್ನ ಜನ್ಮದಿನವಾದ ಮಾ. 18ರಂದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಅವಳ ವಿಡಿಯೊ ಈಗಾಗಲೇ 1.2 ಲಕ್ಷ ವ್ಯೂವ್ಸ್ ಗಳಿಸಿದೆ ಮತ್ತು ಅವರಅಭಿನಯವನ್ನು ಹೊಗಳುತ್ತಾ 200ಕ್ಕೂ ಹೆಚ್ಚು ಮಂದಿ ಕಾಮೆಂಟ್‍ಗಳನ್ನು ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಫುಡ್‌ ಎಮೋಜಿಗಳನ್ನು ನೋಡಿ ಬಾಯಿ ಚಪಲ ತಡೆಯಲಾರದೇ ಈತ ಮಾಡಿದ್ದೇನು ನೋಡಿ....ವಿಡಿಯೊ ವೈರಲ್

ಮಾಯೋ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರೋಮಾಂಚಕ ನೃತ್ಯ ರೀಲ್‍ಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ. ಅವರು ಆಗಾಗ ಬಾಲಿವುಡ್ ಹಾಡು ಮತ್ತು ಭಾರತದ ಇತರ ಹಾಡಗಳ ಮೇಲೆ ನೃತ್ಯ ಮಾಡಿ ಖುಷಿಪಡುತ್ತಾರೆ. ಈ ಹಿಂದೆ ಜಪಾನಿನ ಕಟೆಂಟ್‌ ಕ್ರಿಯೆಟರ್‌ ಮಾಯೋ ತನ್ನ ಸ್ನೇಹಿತೆ ಕಹೋ ಜತೆ ಸೀರೆಯುಟ್ಟು 'ಬುಖಾರ್' ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,
ಇದೀಗ ನೆಟ್ಟಿಗರು ಇವರ ನೃತ್ಯ ನೋಡಿ ಸಖತ್‌ ಖುಷಿಯಾಗಿದ್ದಾರೆ.