ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಮ್ಯಾನ್ಮಾರ್‌ ಭೂಕಂಪ; ಹಲವು ಕಟ್ಟಡಗಳು ನೆಲಸಮ, 1000 ಕ್ಕೂ ಹೆಚ್ಚು ಸಾವು, ಸಾವಿರಾರು ಜನರಿಗೆ ಗಾಯ

ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತ ಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಭೂಕಂಪದಿಂದಾಗಿ ಮ್ಯಾನ್ಮಾರ್‌ನಲ್ಲಿ 1002 ಜನರು ಮೃತ ಪಟ್ಟಿದ್ದರೆ, 2,376 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

ಮ್ಯಾನ್ಮಾರ್‌ ಭೂಕಂಪ; ಹಲವು ಕಟ್ಟಡಗಳು ನೆಲಸಮ, 1000 ಕ್ಕೂ ಹೆಚ್ಚು ಸಾವು,

Profile Vishakha Bhat Mar 29, 2025 12:38 PM

ನೈಪಿಡಾವ್: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಮೃತ ಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಭೂಕಂಪದಿಂದಾಗಿ ಮ್ಯಾನ್ಮಾರ್‌ನಲ್ಲಿ 1002 ಜನರು ಮೃತ ಪಟ್ಟಿದ್ದರೆ, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ಮಾರ್‌ನ ಸಾಗೈಂಗ್‌ನ ವಾಯುವ್ಯಕ್ಕೆ ಶುಕ್ರವಾರ ಮಧ್ಯಾಹ್ನ 12:50 ಕ್ಕೆ 10 ಕಿ.ಮೀ ಆಳದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ . ಕೆಲವು ನಿಮಿಷಗಳ ನಂತರ, ಮತ್ತೆ 6.7 ಮತ್ತೆ ಭೂಕಂಪವಾಗಿದೆ. ಪಕ್ಕದ ದೇಶವಾದ ಥೈಲ್ಯಾಂಡ್‌ನಲ್ಲಿಯೂ ಭೂಕಂಪವಾಗಿದೆ. ಪರಿಣಾಮ ಈ ವರೆಗೆ 10 ಜನರು ಮೃತ ಪಟ್ಟಿದ್ದಾರೆ.ಬ್ಯಾಂಕಾಕ್‌ನ ಚತುಚಕ್ ಮಾರುಕಟ್ಟೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಬಿದ್ದ ಕಾರಣ. 100 ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮ್ಯಾನ್ಮಾರ್‌ನ ಮಂಡಲೇಯಲ್ಲಿ, ಕಟ್ಟಡಗಳು ಕುಸಿದಿದೆ. ಸಾಗೈಂಗ್‌ನಿಂದ ಇರಾವಡ್ಡಿ ನದಿಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಅವಾ ಸೇತುವೆ ಕುಸಿದಿದೆ. ಭೂಕಂಪದ ಪರಿಣಾಮವನ್ನು ನಿರ್ಣಯಿಸಲು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ನೇತೃತ್ವದ ಥಾಯ್ ಸರ್ಕಾರ ತುರ್ತು ಸಭೆ ನಡೆಸಿತು. ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿ ಮಾಡಿದೆ.



ಈ ಸುದ್ದಿಯನ್ನೂ ಓದಿ: Earthquake : ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ,ಬ್ಯಾಂಕಾಕ್‌ ಸೇರಿದಂತೆ ಹಲವು ಕಡೆ ಕಂಪನದ ಅನುಭವ

ಭಾರತ ಸರ್ಕಾರ ಕೂಡ ಮಯನ್ಮಾರ್‌ಗೆ ಸಹಾಯ ಹಸ್ತ ಚಾಚಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಔಷಧಿಗಳು,ಲಸಿಕೆಗಳು ಸೇರಿದಂತೆ ಅನೇಕ ಅತ್ಯಗತ್ಯ ವಸ್ತುಗಳನ್ನು ಭಾರತ, ಮ್ಯಾನ್ಮಾರ್ ಗೆ ರವಾನಿಸಿದೆ. ಹಿಂಡನ್ ವಾಯುಪಡೆಯ ನಿಲ್ದಾಣದಿಂದ IAF C 130 J ವಿಮಾನದ ಮೂಲಕ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗಿದೆ. ಪರಿಹಾರ ಸಾಮಗ್ರಿಗಳಲ್ಲಿ ಡೇರೆಗಳು, ಮಲಗುವ ಚೀಲಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಊಟಗಳು, ನೀರು ಶುದ್ಧೀಕರಣ ಯಂತ್ರಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್‌ಗಳು ಮತ್ತು ಪ್ಯಾರಸಿಟಮಾಲ್, ಪ್ರತಿಜೀವಕಗಳು, ಕ್ಯಾನುಲಾ, ಸಿರಿಂಜ್‌ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್‌ಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದೆ.