Kash Patel: ಗೆಳತಿಗಾಗಿ ಅತೀ ದೊಡ್ಡ ಲೈಂಗಿಕ ಹಗರಣವನ್ನೇ ಮುಚ್ಚಿ ಹಾಕಲು ಯತ್ನಿಸಿದ ಭಾರತೀಯ? ಕಾಶ್ ಪಟೇಲ್ ವಿರುದ್ಧ ಆರೋಪ
ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹಾಗೂ ಅವರ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಇದೀಗ ಸುದ್ದಿಯಲ್ಲಿದ್ದಾರೆ. ಎಫ್‌ಬಿಐನ ಅಡಿಯಲ್ಲಿ ಬರುವ ಎಪ್ಸ್ಟೀನ್ ಫೈಲ್‌ಗಳ ಅಸ್ತಿತ್ವವನ್ನೇ ಅಮೆರಿಕ ಆಡಳಿತ ನಿರಾಕರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಎಪ್ಸ್ಟೀನ್ ಪಟ್ಟಿ ಎಂದರೆ ಜೆಫ್ರಿ ಎಪ್ಸ್ಟೀನ್ ಅವರ ಅಪರಾಧಗಳ ಬಗ್ಗೆ ನ್ಯಾಯಾಲಯದಲ್ಲಿ ದಾಖಲಾದ ಪತ್ರಗಳು ಮತ್ತು ಸಾಕ್ಷ್ಯಗಳ ಸಂಗ್ರಹವಾಗಿದೆ.


ವಾಷಿಂಗ್ಟನ್: ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹಾಗೂ ಅವರ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಇದೀಗ ಸುದ್ದಿಯಲ್ಲಿದ್ದಾರೆ. ಎಫ್‌ಬಿಐನ ಅಡಿಯಲ್ಲಿ ಬರುವ ಎಪ್ಸ್ಟೀನ್ ಫೈಲ್‌ಗಳ ಅಸ್ತಿತ್ವವನ್ನೇ ಅಮೆರಿಕ ಆಡಳಿತ ನಿರಾಕರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಎಫ್‌ಬಿಐ ಮತ್ತು ಯುಎಸ್ ನ್ಯಾಯ ಇಲಾಖೆ ಜೆಫ್ರಿ ಎಪ್ಸ್ಟೀನ್ ಅವರ ಕಕ್ಷಿದಾರರ ಪಟ್ಟಿಯನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೂ 45 ವರ್ಷದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ 26 ವರ್ಷದ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್‌ಗೂ ಏನಾದರೂ ಸಂಬಂಧವಿರಬಹುದೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಎಪ್ಸ್ಟೀನ್ ಪಟ್ಟಿ ಎಂದರೇನು?
ಎಪ್ಸ್ಟೀನ್ ಪಟ್ಟಿ ಎಂದರೆ ಜೆಫ್ರಿ ಎಪ್ಸ್ಟೀನ್ ಅವರ ಅಪರಾಧಗಳ ಬಗ್ಗೆ ನ್ಯಾಯಾಲಯದಲ್ಲಿ ದಾಖಲಾದ ಪತ್ರಗಳು ಮತ್ತು ಸಾಕ್ಷ್ಯಗಳ ಸಂಗ್ರಹವಾಗಿದೆ. ಈ ಪಟ್ಟಿಯು ಉನ್ನತ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿದೆ. ಎಪ್ಸ್ಟೀನ್ ಅವರ ಅಪರಾಧಗಳ ಬಗ್ಗೆ ಅನೇಕ ಮಾಧ್ಯಮ ವರದಿಗಳು ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಉದಾಹರಣೆಗೆ, ಲಿಯೊನಾರ್ಡೊ ಡಿಕಾಪ್ರಿಯೊ, ಮೈಕೆಲ್ ಜಾಕ್ಸನ್, ಬಿಲ್ ಕ್ಲಿಂಟನ್, ರಿಚರ್ಡ್ ಬ್ರಾನ್ಸನ್, ಸ್ಟೀಫನ್ ಹಾಕಿಂಗ್ ಮತ್ತು ಪ್ರಿನ್ಸ್ ಆಂಡ್ರ್ಯೂ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ ಎಂದು ಹೇಳಲಾಗಿದೆ.
ಜೆಫ್ರಿ ಎಪ್ಸ್ಟೀನ್ 2019 ರಲ್ಲಿ ಅಪ್ರಾಪ್ತ ವಯಸ್ಕರ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲ್ಪಟ್ಟು ಆ ವರ್ಷದ ಕೊನೆಯಲ್ಲಿ ಜೈಲಿನಲ್ಲಿ ನಿಧನರಾದರು. ಸೋಮವಾರ ನ್ಯಾಯಾಂಗ ಇಲಾಖೆಯು ಜೆಫ್ರಿ ಎಪ್ಸ್ಟೀನ್ "ಕ್ಲೈಂಟ್ ಪಟ್ಟಿ"ಯನ್ನು ನಿರ್ವಹಿಸಿಲ್ಲ ಎಂದು ಹೇಳಿದೆ ಮತ್ತು ಶ್ರೀಮಂತ ಹಣಕಾಸುದಾರರ ಲೈಂಗಿಕ ಕಳ್ಳಸಾಗಣೆ ತನಿಖೆಗೆ ಸಂಬಂಧಿಸಿದ ಯಾವುದೇ ಫೈಲ್‌ಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ
ಈ ಸುದ್ದಿಯನ್ನೂ ಓದಿ: Kash Patel: ಭಗವದ್ಗೀತೆಯ ಮೇಲೆ ಕೈಯಿಟ್ಟು ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್ ; ವಿಡಿಯೋ ಇದೆ
ಎಂಬ ತೀರ್ಪನ್ನು ನೀಡಿದೆ. ಜೆಫ್ರಿ ಎಪ್ಸ್ಟೀನ್ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಕಳ್ಳಸಾಗಣೆ ಮಾಡಿದ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಎಫ್‌ಬಿಐ ಹೊಂದಿದೆ ಎಂದು ಕಾಶ್ ಪಟೇಲ್ ವರ್ಷಗಳಿಂದ ಹೇಳಿಕೊಂಡಿದ್ದನ್ನು ಎತ್ತಿ ತೋರಿಸಿದ್ದಾರೆ. ಎಫ್‌ಬಿಐ ನಿರ್ದೇಶಕರಾಗಿ ನೇಮಕಗೊಂಡ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲು ಅವರು ನಿರಾಕರಿಸಿರುವುದು ಈಗ ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿದೆ. ಕಾಶ್ ಪಟೇಲ್ ತಮ್ಮ ಗೆಳತಿಯನ್ನು ರಕ್ಷಿಸಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.